Tuesday, March 28, 2023

PFIನ್ನು ಕರ್ನಾಟಕದಲ್ಲಿ ಪೋಷಿಸಿದ್ದು ಕಾಂಗ್ರೆಸ್‌-ಸಚಿವ ಸುನಿಲ್ ವಾಗ್ದಾಳಿ

ಉಡುಪಿ: ‘ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ ಪಿಎಫ್ ಐ ಇಷ್ಟು ದೊಡ್ಡ ಪ್ರ‌ಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣವಾಗಿತ್ತು. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು. ನಮ್ಮ ಸರ್ಕಾರ ಅದನ್ನು ವಿರೋಧಿಸುತ್ತಲೇ ಬಂದಿದೆ. ನಮ್ಮ ಸರಕಾರ ಇವತ್ತು ಬಧ್ದತೆ ಪ್ರದರ್ಶಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಉಡುಪಿಯಲ್ಲಿ ಪಿಎಫ್‌ಐ ಬ್ಯಾನ್ ಬಗ್ಗೆ ಮಾತನಾಡಿದ ಅವರು ‘ಪಿಎಫ್ ಐ ನಿಷೇಧ ಮಾಡಿರುವುದು ಸ್ವಾಗತಾರ್ಹ.

ಈ ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾ‌ನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಅಬಿನಂದನೆಗಳು. ಬಹಳ ವರ್ಷಗಳಿಂದ ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ಪಿಎಫ್ ಐ ಹಿಂಸೆಯನ್ನು ಪ್ರಚೋದಿಸಿದೆ. ಸವಾಲನ್ನು ನೀಡುವಂತೆ ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಅವರು ಮಾಡುತಿದ್ದರು.

‘ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ನಿರಂತರವಾದ ಹತ್ಯೆಯನ್ನು ಪಿಎಫ್‌ಐ ಮಾಡುತ್ತಾ ಇತ್ತು. ಅವರ ಉದ್ದೇಶ ಇದ್ದದ್ದು ಅವರೇ ಹೇಳುವ ಪ್ರಕಾರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುತ್ತೇವೆ ಎಂಬ ಮಾತುಗಳನ್ನು ಅವರು ಹೇಳುತಿದ್ದರು.

ಇವತ್ತು ಅದಕ್ಕೆ ಬೇಕಾದ ಎಲ್ಲಾ ದಾಖಲೆ, ಆಧಾರಗಳು ಸಿಕ್ಕಿದ್ದರಿಂದ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

ಮಂಗಳೂರು, ಶಿವಮೊಗ್ಗ ಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು. ಈ ಹಿಂದೆ ಬಿಜೆಪಿ ಸಿಮಿ ಸಂಘಟನೆಯನ್ನು ನಿಷೇಧಿಸಿತ್ತು.

ಅದರ ಇನ್ನೊಂದು ರೂಪದಲ್ಲಿ ಪಿಎಫ್ ಐ ಹುಟ್ಟಿಕೊಂಡಿತ್ತು. ಇದಕ್ಕೆ ಹಣಕಾಸು ನೆರವು, ಬೆಂಬಲ ನೀಡಿದವರ ಕೂಡಾ ತನಿಖೆ ಅಗುತ್ತೆ. ಭಾರತದಲ್ಲಿ ಇದ್ದುಕೊಂಡು ಭಾರತವನ್ನು ಪ್ರೀತಿಸಬೇಕು, ಈ ನೆಲದಲ್ಲಿ ಇದ್ದುಕೊಂಡು ಈ ನೆಲವನ್ನು ಗೌರವಿಸಬೇಕು’ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

puttur : ಉಪ್ಪಿನಂಗಡಿಯಲ್ಲಿ ಬೈಕುಗಳ ಮುಖಾಮುಖಿ ಢಿಕ್ಕಿ – ಓರ್ವ ಸ್ಥಳದಲ್ಲೇ ಮೃತ್ಯು..!

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ. ಪುತ್ತೂರು: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ...

ಮಂಗಳೂರು : ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ನಾಶ..!

ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ.ಮಂಗಳೂರು : ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ...

ಪತ್ನಿ ಆತ್ಮಹತ್ಯೆ ಬಗ್ಗೆ ಸಂಶಯ- ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಠಾಣೆ ಮೆಟ್ಟಲೇರಿದ ಪತಿ..!

ತನ್ನ ಪತ್ನಿ ಆತ್ಮಹತ್ಯೆ ಮಾಡಿದ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಪತಿ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿಗೆ ಮನವಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ...