Connect with us

FILM

ಸ್ಟಾರ್ ನಟರಲ್ಲೂ ಇದೆ ಹುಲಿ ಉಗುರಿನ ಪೆಂಡೆಂಟ್…!

Published

on

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಬೆನ್ನಲ್ಲೇ ನಟ ಜಗ್ಗೇಶ್, ದರ್ಶನ್, ಹಾಗೂ ವಿನಯ್ ಗುರೂಜಿ ಮೇಲೆ ಹುಲಿ ಉಗುರು ಹೊಂದಿರುವ ಆರೋಪ ಕೇಳಿ ಬರುತ್ತಿದೆ.

 

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಬೆನ್ನಲ್ಲೇ ನಟ ಜಗ್ಗೇಶ್, ದರ್ಶನ್, ಹಾಗೂ ವಿನಯ್ ಗುರೂಜಿ ಮೇಲೆ ಹುಲಿ ಉಗುರು ಹೊಂದಿರುವ ಆರೋಪ ಕೇಳಿ ಬರುತ್ತಿದೆ.

ಅನೇಕ ಹೀರೋಗಳು ಕತ್ತಲ್ಲಿ ಹುಲಿ ಉಗುರು ಧರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ. ಈಗ ಜಗ್ಗೇಶ್ ಕತ್ತಲ್ಲೂ ಹುಲಿ ಉಗುರು ಇದೆಯಂತೆ. ಸ್ವತಃ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ಜಗ್ಗೆಶ್ ಅವರು ಸಂದರ್ಶನ ನಿಡಿದ್ದರು. ಈ ವೇಳೆ ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು ಎಂದಿದ್ದರು.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಹಲವರು, ವರ್ತೂರ್ ಸಂತೋಷ್ ಗೆ ಒಂದು ನ್ಯಾಯ, ಜಗ್ಗೇಶ್ ಗೆ ಒಂದು ನ್ಯಾಯ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಂಧನ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.

bengaluru

ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು

Published

on

ಬೆಂಗಳೂರು : ಬಿಗ್​ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.

ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್​ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.

ಇದರಿಂದಾಗಿ ವಿನಯ್‌ ತೀರಾ ಡಲ್‌ ಆಗ್ಬಿಟ್ಟರು. ಬಾತ್‌ರೂಮ್‌ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್‌’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.

Continue Reading

bangalore

ಕ್ಷೀಣಿಸುತ್ತಿದೆ ಹಿರಿಯ ನಟಿ ಲೀಲಾವತಿ ಆರೋಗ್ಯ-ಡಿಕೆಶಿ, ನಟ ಶಿವಣ್ಣ ಆರೋಗ್ಯ ವಿಚಾರಣೆ

Published

on

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದು ಅವರ ಆರೋಗ್ಯ ವಿಚಾರಿಸುವುದಕ್ಕಾಗಿ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಜೊತೆಗೆ ನಿನ್ನೆ ನಟ ಶಿವಣ್ಣ ದಂಪತಿ ಕೂಡ ಮನೆಗೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.


ಮನೆಗೆ ಆಗಮಿಸಿದ ಶಿವಣ್ಣ ಅವರನ್ನು ವಿನೋದ್‌ ರಾಜ್‌ಕುಮಾರ್‌ ಹೆಚ್ಚು ಆತ್ಮೀಯವಾಗಿ ಬರಮಾಡಿಕೊಂಡು ತಾಯಿಯ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ..


ಇನ್ನು ಮೊನ್ನೆಯಷ್ಟೇ ನಟ ಅರ್ಜುನ್‌ ಸರ್ಜಾ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಸಿದ್ದರು.. ಅಲ್ಲದೇ ದರ್ಶನ್‌ ಸಹ ಅವರ ಮನೆಗೆ ಭೇಟಿ ನೀಡಿದ್ದರು.. ಡಿಕೆಶಿ ಕೂಡ ಆರೋಗ್ಯ  ವಿಚಾರಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಯಲ್ಲಿನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ..

Continue Reading

FILM

ಯಾವತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್…ನಮೃತಾ ಕಣ್ಣೀರು

Published

on

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಈಗ ಎಂಟನೇ ವಾರದ ಟಾಸ್ಕ್‌ಗಳು ಹಾಗೂ ಕ್ಯಾಪ್ಟೆನ್ಸಿ ಆಯ್ಕೆಯ ಪ್ರಕ್ರಿಯೆ, ನಾಮಿನೇಷನ್ ಪ್ರಕ್ರಿಯೆ ಎಲ್ಲವೂ ಸಹ ಶುರುವಾಗಿದೆ.  ನಾನಿಮಿನೇಷನ್ ಮುಗಿದಿದ್ದು, ಹೊಸದಾಗಿ  ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾರನ್ನು ಹೊರಗಡೆ ಇಡಬೇಕು ಎಂದು ಪ್ರತಾಪ್‌ರನ್ನು ಬಿಗ್ ಬಾಸ್ ಕೇಳಿದ್ದಾರೆ. ಇದಕ್ಕೆ ಪ್ರತಾಪ್, ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಆದರೆ, ಪ್ರತಾಪ್‌ ತಮ್ಮ ಹೆಸರನ್ನು ಹೇಳೋದಿಲ್ಲ ಎಂದು ನಮ್ರತಾ ನಿರೀಕ್ಷೆ ಮಾಡಿದ್ದರು. ಅನಿರೀಕ್ಷಿತವಾಗಿ ಪ್ರತಾಪ್, ನಮ್ರತಾ ಹೆಸರು ಹೇಳಿದ್ದು ಅವರಿಗೆ ಬೇಸರವನ್ನು ತರಿಸಿದೆ. ಪ್ರತಾಪ್ ತಗೆದುಕೊಂಡ ನಿರ್ಧಾರ ನಮ್ರತಾ ಕಣ್ಣಲ್ಲಿ ನೀರು ತರಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಈಗ ನಮ್ರತಾ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯ ವೇಳೆ ನಾನು ಪ್ರತಾಪ್ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ನಗುನಗುತ್ತಲೇ ನಮ್ರತಾ ಹೇಳಿದ್ದರು. ಈ ವೇಳೆಯಾದರೂ ಪ್ರತಾಪ್ ಹೇಳಬಹುದಾಗಿತ್ತು. ನನ್ನ ತಂಡವನ್ನು ಸೇರಿಸಿಕೊಳ್ಳಲು ನನಗೆ ಇಷ್ಟವಿಲ್ಲವೆಂದು. ಆಗ ಏನು ಮಾತನಾಡದ ಪ್ರತಾಪ್ ಬಿಗ್ ಬಾಸ್ ನೀವು ಯಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಡಲು ಇಚ್ಚಿಸುತ್ತೀರಾ ಎಂದು ಕೇಳಿದಾಗ. ನಾನು ನಮ್ರತಾ ಅವರನ್ನು ಹೊರಗಡೆ ಇಡಲು ಇಚ್ಚಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ, ಇದು ನಮ್ರತಾಗೆ ಇಷ್ಟವಾಗಲಿಲ್ಲ.

ಇದಕ್ಕೂ ಮೊದಲು ಪ್ರತಾಪ್, ನಮ್ರತಾರಲ್ಲಿ ನಿಮ್ಮೊಳಗೆ ಬೇರೆಯೊಬ್ಬ ನಮ್ರತಾ ಇದ್ದಾರೆ. ಅವರ ಶಕ್ತಿಯನ್ನು ಹೊರಗೆ ತಂದೆ ತರುತ್ತೇನೆ ಎಂಬ ಮಾತನ್ನು ಆಡಿದ್ದರು. ಇದೇ ಮಾತುಗಳು ನಮ್ರತಾಗೆ ನೋವನ್ನು ಮಾಡಿದೆ. ಪ್ರತಾಪ್ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಎಂಬ ಮಾತನ್ನು ನಮ್ರತಾ ಆಡಿದ್ದಾರೆ.

ಇನ್ಯಾಚತ್ತೂ ನಿನ್ನ ಕ್ಷಮಿಸೊಲ್ಲ ಡ್ರೋನ್ ಎಂದು ಗಳ ಗಳನೇ ಅತ್ತಿದ್ದಾರೆ.

Continue Reading

LATEST NEWS

Trending