Connect with us

LATEST NEWS

ಹರಿದ್ವಾರದಲ್ಲಿ ಪೇಜಾವರ ಶ್ರೀ ಹಾಗೂ ಕಾಶೀ ಮಠಾಧೀಶರ ಸಮಾಗಮ

Published

on

ಹರಿದ್ವಾರ: ಉಡುಪಿಯ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಶ್ರೀ ಕಾಶೀ ಮಠ ಸಂಸ್ಥಾನದ ಹರಿದ್ವಾರ ಪುಣ್ಯಕ್ಷೇತ್ರದಲ್ಲಿರುವ ಶ್ರೀ ವ್ಯಾಸ ಆಶ್ರಮದಲ್ಲಿರುವ ಶ್ರೀ ವ್ಯಾಸ ಮಂದಿರ, ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃನ್ದಾವನ ಭೇಟಿ ಬಳಿಕ ವ್ಯಾಸ ಘಾಟ್ ನಲ್ಲಿ ಗಂಗಾ ದರ್ಶನ ನಡೆಸಿದರು.

ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಪೇಜಾವರ ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿ ಸ್ವಾಗತಿಸಿದರು. ಪರಸ್ಪರ ಯತಿಗಳವರು ಪುಷ್ಪ ಮಾಲಾರ್ಪಣೆ ಮೂಲಕ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮಾತನಾಡುತ್ತಾ ಶ್ರೀಗಳವರ ಬಾಂಧವ್ಯ, ಸ್ನೇಹ ಕಂಡು ತುಂಬಾ ಸಂತೋಷವಾಯಿತು ನಮ್ಮೆಲ್ಲರಿಗೂ ಮೂಲಗುರುಗಳಾದ ಮಧ್ವಾಚಾರ್ಯರಿಗೆ

ಸ್ಮರಿಸುತ್ತಾ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರಿಗೆ ಶ್ರೀ ಗಳವರು ಸಂಸ್ಥಾನ ಹಾಗೂ ಭಕ್ತಜನರು ಸಮರ್ಪಿಸಿದನ್ನು ಸಂತೋಷದಿಂದ ಸ್ವೀಕರಿಸಲಾಗಿದೆ.

ತಮ್ಮ ಗುರುಗಳಾದ ವೃನ್ದಾವನಸ್ಥ ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥರು ಹರಿದ್ವಾರಕ್ಕೆ ಬಂದ ಸಂದರ್ಭದಲ್ಲಿ ವ್ಯಾಸಾಶ್ರಮದಲ್ಲಿರುವ ವ್ಯಾಸ ಘಾಟಿಗೆ ಬಂದು ಪುಣ್ಯ ಗಂಗಾ ಸ್ನಾನ, ಶ್ರೀ ದೇವರಿಗೆ ಪೂಜಾ ಪುರಸ್ಕಾರ ನಡೆಸುತ್ತಿದ್ದರು ಎಂದು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಕೊಚ್ಚಿನ್ ತಿರುಮಲ ದೇವಳದ ಮೊಕ್ತೇಸರರಾದ ಜಗನ್ನಾಥ್ ಶೆಣೈ, ಜಿ ಯಸ್ ಬಿ ಸೇವಾಮಂಡಳದ ಆರ್. ಜಿ . ಭಟ್, ದೆಹಲಿ ಜಿ.ಎಸ್‌.ಬಿ ಸಮಾಜದ ಪ್ರಕಾಶ್ ಪೈ ಉಪಸ್ಥಿತರಿದ್ದರು .

FILM

ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Published

on

ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು,  ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

Published

on

ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.

ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.

ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್‌ಟೈಮ್‌ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.

ಈ ಸೀರಿಯಲ್‌ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್​ ತಂಡ ಸಂತಸ ಹಂಚಿಕೊಂಡಿದೆ.

Continue Reading

LATEST NEWS

Trending