Friday, August 19, 2022

ಉಳ್ಳಾಲದಲ್ಲಿ ಮುಳುಗಿದ ಹಡಗಿನಲ್ಲಿ ತೈಲ ಸೋರಿಕೆ ಭೀತಿ: ವಿಮಾನ ಗಸ್ತು

ಮಂಗಳೂರು: ತಾಂತ್ರಿಕ ದೋಷದಿಂದ ಮಂಗಳೂರಿನ ಉಳ್ಳಾಲ ಸಮೀಪ ಸಮುದ್ರದಲ್ಲಿ ಮುಳುಗಡೆಯಾದ ಸಿರಿಯಾ ಮೂಲದ ಹಡಗಿನ ತೈಲ ಸೋರಿಕೆ ಭೀತಿ ಹಿನ್ನೆಲೆ ಕೋಸ್ಟ್ ಗಾರ್ಡ್ ಗೆ ಸೇರಿದ ಮಿನಿ ಜೆಟ್ ವಿಮಾನದ ಮೂಲಕ ಹಡಗಿನ ಕಣ್ಗಾವಲು ನಡೆಸಲಾಗುತ್ತಿದೆ.


ಚೀನಾದಿಂದ ಮಂಗಳೂರಿನ ಸಮುದ್ರ ತೀರದ ಮೂಲಕ ಲೆಬನಾನ್ ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಎಂ.ಬಿ.ಪ್ರಿನ್ಸೆಸ್ ಮಿರಲ್ ಕಾರ್ಗೋ ಹಡಗು ಉಳ್ಳಾಲ ಬಟ್ಟಪಾಡಿಯ ಸಮುದ್ರದಲ್ಲಿ ಜೂ.23ರಂದು ಮುಳುಗಡೆಯಾಗಿತ್ತು.

ಹಡಗಿನಲ್ಲಿ ಬರೋಬ್ಬರಿ 220 ಟನ್‌ ಮೆಟ್ರಿಕ್ ಟನ್ ತೈಲ ಇದ್ದು, ಸೋರಿಕೆಯಾಗುವ ಆತಂಕ ಎದುರಾಗಿದೆ. ಅದನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

ಒಂದು ವೇಳೆ ಹಡಗಿನ ತೈಲ ಸೋರಿಕೆಯಾದರೆ ಮತ್ಸ್ಯ ಸಂಕುಲ ನಾಶವಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಳುಗಿದ ಹಡಗಿನ ಸುತ್ತ ಜೆಟ್ ವಿಮಾನ ಸುತ್ತಾಟ ನಡೆಸುತ್ತಿದ್ದು,

ತೈಲ ಸೋರಿಕೆಯಾದರೆ ತುರ್ತು ಪರಿಸ್ಥಿತಿ ಎದುರಿಸಲು ವಿಮಾನದ ಮೂಲಕ ಮಾನಿಟರ್ ಮಾಡಲಾಗುತ್ತಿದೆ.

ಇದರ ಜೊತೆಗೆ ಹಡಗಿನ ತೈಲ ಚೆಲ್ಲುವಿಕೆ ತಡೆ ಕಾರ್ಯಾಚರಣೆಗೆ ವಿಶೇಷ ನೌಕೆ ‘ಸಮುದ್ರ ಪಾವಕ್‌’ ಗುಜರಾತ್‌ನ ಪೋರ್‌ಬಂದರಿನಿಂದ ನಿನ್ನೆ ಮಂಗಳೂರಿಗೆ ಆಗಮಿಸಿದೆ. ನದಿ ನೀರು ಮತ್ತು ಹಿನ್ನೀರಿಗೆ ಆಯಿಲ್‌ ಸೇರ್ಪಡೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋಸ್ಟ್‌ಗಾರ್ಡ್‌, ಎನ್‌ಎಂಪಿಟಿ ಆಯಿಲ್‌ ಬೂಮ್‌ ಅಳವಡಿಸಿದೆ.


ಈ ಮಧ್ಯೆ ನಿನ್ನೆ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಉಳ್ಳಾಲ ಕಡಲ ತೀರದಲ್ಲಿ ಕೋಸ್ಟ್ ಗಾರ್ಡ್ ಟೀಂನಿಂದ ಅಣಕು ಪ್ರದರ್ಶನ ಜೊತೆಗೆ 140 ಸಿಬ್ಬಂದಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.

ಸಮುದ್ರದ ‌ನೀರಿನಲ್ಲಿ ತೈಲದ ಅಂಶ ಪತ್ತೆಯಾದರೆ ಕೋಸ್ಟ್ ಗಾರ್ಡ್ ಶಿಪ್, ಎನ್ ಡಿಆರ್‌ಎಫ್, ಅಗ್ನಿಶಾಮಕ ದಳ ಸೇರಿ ಜಿಲ್ಲಾಡಳಿತ ಅಲರ್ಟ್ ಇರಲು ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here

Hot Topics

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಐವರು ಆರೋಪಿಗಳು NIA ವಶಕ್ಕೆ

ಪುತ್ತೂರು: ಬಿಜೆಪಿ ಯುವ ಮುಖಂಡ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದವರು ವಿಚಾರಣೆಗಾಗಿ 6 ದಿನಗಳ ಕಾಲ ತಮ್ಮ...

ಸುರತ್ಕಲ್‌ನಲ್ಲಿ ಕತ್ತಿ ಬೀಸಿ ಹುಚ್ಚಾಟ: ಓರ್ವನ ಬಂಧನ

ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಾಂಡ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕಾನದಲ್ಲಿ ನಡೆದಿದೆ.ಅತಲ್ ಕುಲ್ಲು (30) ಬಂಧಿತ...