Connect with us

ಪ್ರದರ್ಶನವಿಲ್ಲದೆ ಕಂಗೆಟ್ಟ ಯಕ್ಷ ಕಲಾವಿದರ ಬೆನ್ನುಲುಬಾಗಿ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್

Published

on

ಪ್ರದರ್ಶನವಿಲ್ಲದೆ ಕಂಗೆಟ್ಟ ಯಕ್ಷ ಕಲಾವಿದರ ಬೆನ್ನುಲುಬಾಗಿ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌

ಮಂಗಳೂರು: ಪ್ರತಿ ವರ್ಷ ಮೇ ತಿಂಗಳಲ್ಲಿ ಪಟ್ಲ ಸಂಭ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು ನಿರಂತರ ನಾಲ್ಕು ವರ್ಷಗಳ ಕಾಲ ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.

ಪ್ರಸಕ್ತ ವರ್ಷದಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿಯಿಂದಾಗಿ” ಪಟ್ಲ ಸಂಭ್ರಮ 2020″ ರದ್ದುಮಾಡಿ,

ಅದರ ಬದಲಾಗಿ ಕೊರೊನ ವೈರಸ್‌ ನಿಂದಾಗಿ ಯಕ್ಷಗಾನ ಪ್ರದರ್ಶನಗಳು ಇಲ್ಲದೆ ಕಂಗೆಟ್ಟ 1163 ಕಲಾವಿದರಿಗೆ,

ಸುಮಾರು 20 -25 ದಿನಗಳಿಗೆ ಬೇಕಾದ ಅಕ್ಕಿ ಮತ್ತು ದಿನಸಿ ಸಮಾಗ್ರಿಗಳನ್ನು ವಿತರಿಸುವ ಮೂಲಕ ಕಲಾವಿದರ ಸಂಕಷ್ಟದಲ್ಲಿ ಕೈಜೋಡಿಸಿದ ಸಂತೃಪ್ತಿ ಭಾವನೆ ನಮಗಿದೆ ಎಂದು,

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.

ಕಾಸರಗೋಡು, ದ.ಕ ಜಿಲ್ಲೆ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಯಕ್ಷಗಾನ ಕಲಾವಿದರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದು ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಂದು (ಮೇ 22) ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಕಳೆದ 5 ವರ್ಷಗಳ ಅವಧಿಯಲ್ಲಿ 5 ಕೋಟಿ ರೂಪಾಯಿಗಳಿಗೂ ಮಿಕ್ಕಿದ ಮೊತ್ತವನ್ನು ವಿವಿಧ ಸೇವಾಯೋಜನೆಗಳಿಗೆ ವಿನಿಯೋಗಿಸಲಾಗಿದೆ.

ಟ್ರಸ್ಟ್‌ನ ಪ್ರಮುಖವಾದ ಯೋಜನೆಗಳಲ್ಲಿ ಒಂದಾಗಿರುವ ಅಪಘಾತ ವಿಮಾ ಯೋಜನೆಯಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಸಹಯೋಗದಲ್ಲಿ,

ಅಪಘಾತದಿಂದ ಸಂಕಷ್ಟಕ್ಕೆ ಒಳಗಾದ ಮತ್ತು ಮೃತಪಟ್ಟ ಓರ್ವ ಯಕ್ಷ ಕಲಾವಿದರೂ ಸೇರಿದಂತೆ ಸುಮಾರು 20 ರಿಂದ 25 ಲಕ್ಷ ರೂಪಾಯಿವರೆಗಿನ ಮೊತ್ತದ ವಿಮಾ ಪರಿಹಾರ ದೊರೆತಿದೆ.

ಈ ವಿಮಾ ಯೋಜನೆಯಲ್ಲಿ ಸುಮಾರು 850ಕ್ಕೂ ಮಿಕ್ಕಿ ಹೆಸರು ನೊಂದಾಯಿಸಿದ್ದು 31-5-2020ಕ್ಕೆ ಇದರ ಅವಧಿ ಮುಗಿಯಲಿದ್ದು, ಮರುನೊಂದಾವಣೆ ಮಾಡಬೇಕಾಗಿದೆ.

ಆದ್ದರಿಂದ ಮೇ 30ನೇ ಶನಿವಾರ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಪಕ್ಕದ ಕರಂಗಲ್ಪಾಡಿ ಮಾರ್ಕೆಟಿನ ಎದುರುಗಡೆಯಿರುವ,

ಎಸ್.ಎಲ್.ಚೇಂಬರ್ ನಲ್ಲಿರುವ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನೆಯ ಕಚೇರಿಯಲ್ಲಿ ತೆಂಕುತಿಟ್ಟಿನ ಕಲಾವಿದರಿಗೆ ಬೆಳಿಗ್ಗೆ 9.00 ರಿಂದ 2.00 ರ ತನಕ

ಮತ್ತು ಬಡಗುತಿಟ್ಟಿನ ಯಕ್ಷ ಕಲಾವಿದರಿಗಾಗಿ ಜೂನ್ 01 ನೇ ಸೋಮವಾರ ಕುಂದಾಪುರದ ಹೋಟೆಲ್ ಪಾರಿಜಾತದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಖುದ್ದಾಗಿ ಅಥವಾ ಪ್ರತಿನಿಧಿಗಳ ಮುಖಾಂತರ ರಿನೀವಲ್ ಮಾಡಿಕೊಳ್ಳಬಹುದು.

ಮತ್ತು ಹೊಸದಾಗಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವವರು ಒಂದು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಖುದ್ದಾಗಿ ಬಂದು ಹೆಸರು ನೊಂದಾಯಿಸಿಕೊಳ್ಳತಕ್ಕದ್ದು.

ಈ ಮೇಲಿನ ಎರಡೂ ದಿನಗಳಲ್ಲಿಯೂ ಬರಲು ಅನಾನುಕೂಲವಾದವರು ಜೂನ್ 10ರ ಒಳಗೆ ಟ್ರಸ್ಟ್‌ ನ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಮಾರ್ಚ್ ತಿಂಗಳಿನಿಂದ ಯಾವುದೇ ಯಕ್ಷಗಾನ, ತಾಳಮದ್ದಳೆಗಳ ಪ್ರದರ್ಶನಗಳು ಇಲ್ಲದೆ ಬೇಸರಗೊಂಡಿರುವ ಯಕ್ಷಾಭಿಮಾನಿಗಳನ್ನು ಸಂತೋಷಪಡಿಸುವ ಸಲುವಾಗಿ,

ಮೇ 25 ರಿಂದ 30ರ ವರೆಗೆ ಏಳು ದಿನಗಳ “ಯಕ್ಷಗಾನ -ತಾಳಮದ್ದಳೆ ಸಪ್ತಾಹ”ವನ್ನು ಹಮ್ಮಿಕೊಂಡಿದ್ದು,

ಸುಮಾರು ನಲುವತ್ತು ಮಂದಿ ಹೆಸರಾಂತ ಯಕ್ಷ ಕಲಾವಿದರು, ಸುಪ್ರಸಿದ್ಧ ಭಾಗವತರು ಮತ್ತು ಹಿಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ.

ಮತ್ತು ಈ ಪ್ರದರ್ಶನಗಳನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ನಲ್ಲಿ ನೇರಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಿರುವುದಾಗಿ ತಿಳಿಸಿದರು.

ಮಳೆಗಾಲವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯಕ್ಷಕಲಾವಿದರು ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವ ಸಂದರ್ಭಗಳಲ್ಲಿ ದಾನಿಗಳ ನೆರವಿನಿಂದ ಇನ್ನುಮುಂದೆಯೂ ಸಹಾಯ ಹಸ್ತ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ.ಭಂಡಾರಿ, ಕೋಶಾಧಿಕಾರಿ ಸಿ.ಎ.ಸುದೇಶ್ ರೈಯವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

LATEST NEWS

ಮುಂದಿನ 5 ದಿನ ರಾಜ್ಯದ 25 ಜಿಲ್ಲೆಗಳಲ್ಲಿ ಬಿಸಿ ಗಾಳಿ ಸಾಧ್ಯತೆ; ಎಲ್ಲೆಲ್ಲಿ?

Published

on

ಮಂಗಳೂರು : ರಾಜ್ಯದಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಬಿಸಿಲಾಘಾತದಿಂದ ಜನ, ಜಾನುವಾರು ಮತ್ತು ಪಕ್ಷಿ ಸಂಕುಲ ತತ್ತರಿಸಿದೆ. ನೀರಿಗೆ ತತ್ವಾರ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಇದೀಗ ಹವಾಮಾನ ಇಲಾಖೆಯು ರಾಜ್ಯದ 25 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ. ಇಂದಿನಿಂದ 5 ದಿನಗಳ ಕಾಲ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಯಾವ ಜಿಲ್ಲೆಗಳಿಗೆ ಬಿಸಿಲಾಘಾತ?

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮೇ 5 ರವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಮೇ 4 ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಂಭವವಿದೆ.

ಮಳೆಯಾಗುವ ಸಾಧ್ಯತೆ :

ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಬುಧವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕುದಿನ ಒಣಹವೆ ಇರಲಿದೆ.
ಮೇ 6 ರಿಂದ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ :

ಇಂದಿನಿಂದ(ಮೇ 1 ರಿಂದ) ಮುಂದಿನ ಐದು ದಿನಗಳು ಬಾಗಲಕೋಟೆ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ರಾತ್ರಿಯ ಅವಧಿಯೂ ಬಿಸಿ ವಾತಾವರಣದಿಂದ ಕೂಡಿರುವ ಸಾಧ್ಯತೆಯಿದೆ. ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಗ್ಗಿನ ತನಕದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.8 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರು ದಿನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ.

Continue Reading

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

LATEST NEWS

ಬೆಳಗ್ಗೆ ಏಳುವಾಗ ಬಲಗಡೆಯಿಂದ ಯಾಕೆ ಏಳಬೇಕು ಗೊತ್ತೇ..?

Published

on

ಮಂಗಳೂರು: ರಾತ್ರಿ ಮಲಗೋದು ಎಷ್ಟು ಮುಖ್ಯವೋ ಬೆಳಗ್ಗಿನ ಜಾವ ಏಳೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ಬೆಳಿಗ್ಗೆ ಬಲಗಡೆಯಿಂದ ಎದ್ದು ಅಂಗೈ ಉಜ್ಜಿ ಕಣ್ಣು ಮುಚ್ಚಿ ಕರಾಗ್ರೆ ವಸತೆ ಲಕ್ಷ್ಮಿ ಎನ್ನುವ ಶ್ಲೋಕ ಹೇಳುವುದು. ಬಾಲ್ಯದಲ್ಲಿ ನಮ್ಮ ಹಿರಿಯರು ಹಾಗೂ ನಮ್ಮ ಅಮ್ಮಂದಿರು ಬಲಗಡೆಗೆ ಏಳು ಅಂತ ಹೇಳಿರುವುದನ್ನು ಕೇಳಿರುತ್ತೇವೆ. ಅಥವಾ ನಾವು ಎಡ ಬದಿಯಿಂದ ಎಳುವುದ್ದನ್ನು ನೋಡಿದಾಗ ನಮ್ಮನ್ನು ಬಲಗಡೆಯಿಂದ ಎಬ್ಬಿಸಲು ಟ್ರೈ ಮಾಡಿರಬಹುದು.

ಬಲ ಭಾಗದಿಂದ ಎದ್ದರೆ ಅದೃಷ್ಟ

ಬಲ ಭಾಗದಿಂದ ಎದ್ದರೆ ಒಳ್ಳೆಯದು ಅನ್ನೋದು ಹೇಳಿದ್ದನ್ನ ನಾವು ಕೇಳಿರಬಹುದು. ಬಲ ಭಾಗದಿಂದ ಎಚ್ಚರಗೊಂಡರೆ ದಿನವಿಡೀ ಅದೃಷ್ಟ ಇತ್ಯಾದಿ ಕಲ್ಪನೆಗಳು ನಮ್ಮಲ್ಲಿ ಇರುತ್ತದೆ. ಇನ್ನೊಂದು ವಿಚಾರ ಏನು ಅಂದ್ರೆ ನಮ್ಮ ದೇಹ ನಿದ್ದೆಗೆ ಜಾರಿದಾಗ ನಮ್ಮ ದೇಹದಲ್ಲಿ ಸ್ನಾಯುಗಳು ರೆಸ್ಟ್ ಅಲ್ಲಿ ಇರುತ್ತವೆ.

ವೈಜ್ಞಾನಿಕ ಕಾರಣ

ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇದೆ. ಅದರ ಸುತ್ತಲೂ ಹಲವಾರು ಸ್ನಾಯುಗಳು ಇವೆ. ನಾವು ಎಡ ಭಾಗದಿಂದ ಧಿಡೀರ್ ಅಂತ ಇದ್ರೆ ನಮ್ಮ ಇಡೀ ದೇಹದ ಒತ್ತಡ ಆ ಸ್ನಾಯುಗಳ ಮೇಲೆ ಬೀಳುತ್ತೆ. ಆ ಸ್ನಾಯುಗಳಿಗೆ ಸ್ವಲ್ಪ ಪೆಟ್ಟು ಬಿದ್ರೆ ಕೂಡ ಅದು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ನಮ್ಮ ಹಿರಿಯರು ಬಲ ಭಾಗದಿಂದ ಏಳಬೇಕು ಅಂತ ಹೇಳುತ್ತಿದ್ದರು.

ಇನ್ನು ಎಡಭಾಗದಿಂದ ಎದ್ದರೆ ದಿನ ಒಳ್ಳೆಯದಿರುವುದಿಲ್ಲ, ಏನಾದರೂ ಕೆಟ್ಟದ್ದು ಆಗುವ ಸಾಧ್ಯತೆಗಳು ಇರುತ್ತದೆ ಎಂಬುದು ಜನರ ನಂಬಿಕೆಯಾಗಿರುತ್ತದೆ. ಹಾಗಾಗಿ ಈಗಲೂ ಹೆಚ್ಚಿನ ಜನರು ಬೆಳ್ಳಗ್ಗಿನ ಜಾವ ಎಡಭಾಗದಿಂದ ಏಳದೇ ಬಲಭಾಗದಿಂದ ಏಳುತ್ತಾರೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.

Continue Reading

LATEST NEWS

Trending