Connect with us

    LATEST NEWS

    ಸಾಕು ಪ್ರಾಣಿಗಳ ಕೃತ್ಯಕ್ಕೆ ಮಾಲೀಕರೇ ಜವಾಬ್ದಾರಿ : ಕರ್ನಾಟಕ ಹೈಕೋರ್ಟ್

    Published

    on

    ಬೆಂಗಳೂರು : ಅಪಾಯಕಾರಿ ತಳಿಯ ಶ್ವಾನಗಳು ಮಾತ್ರ ಜನರಿಗೆ ಗಾಯವನ್ನುಂಟು ಮಾಡಲ್ಲ. ಯಾವ ನಾಯಿಯೂ ಉಗ್ರವಾಗಬಹುದು ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಸಾಕುಪ್ರಾಣಿಗಳ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ಸಂಬಂಧಿತ ನಿಯಮಗಳ ಅಡಿಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸುವುದು ಅಗತ್ಯ ಎಂದು ಹೇಳಿದೆ.


    ಕೇಂದ್ರ ಸರ್ಕಾರದ ಮೂರು ನಿಯಮಗಳಾದ ಪ್ರಾಣಿಗಳ ಜನನ ನಿಯಂತ್ರಣ (ನಾಯಿಗಳು) ನಿಯಮಗಳು, 2001, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ನಾಯಿ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ) ನಿಯಮಗಳು, 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ (ಪೆಟ್ ಶಾಪ್) ನಿಯಮಗಳು, 2018 ಅಡಿಯಲ್ಲಿ ಅಂತಹ ಮಾರ್ಗಸೂಚಿಗಳನ್ನು ನೀಡಲು ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ.

    ಸಾಕು ಪ್ರಾಣಿ ಮಾಲೀಕರ ಹೊಣೆ :

    ನಾಯಿ ಕಚ್ಚಿದರೆ ಅದು ಯಾವುದೇ ನಾಯಿಯಾಗಿದ್ದರೂ ಅದು ನಾಯಿ ಕಚ್ಚಿದ್ದೇ ಆಗಿರುತ್ತದೆ. ಅದು ಬ್ರಾಂಡೆಡ್ ಅಪಾಯಕಾರಿ ನಾಯಿ ಅಥವಾ ಇತರ ಯಾವುದೇ ಸಾಮಾನ್ಯ ನಾಯಿಯಾಗಿರಬಹುದು. ಸಾಕು ಪ್ರಾಣಿ ಮಾಲೀಕರು ತಮ್ಮ ನಾಯಿಗಳ ಕೃತ್ಯಕ್ಕೆ ಸಂಪೂರ್ಣವಾಗಿ ಜವಾಬ್ದಾರರಾಗುತ್ತಾರೆ. ಸಾಕು ಪ್ರಾಣಿಗಳ ಮಾಲೀಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸೂಕ್ತವಾಗಿ ರಚಿಸಲಾದ ಸಮಿತಿಯು ಜವಾಬ್ದಾರಿಯುತ ಸಾಕುಪ್ರಾಣಿಗಳ ಮಾಲೀಕತ್ವದ ಪರಿಕಲ್ಪನೆಯನ್ನು ರಕ್ಷಿಸಬೇಕು ಮತ್ತು ಬೇಜವಾಬ್ದಾರಿಯುತ ಸಾಕುಪ್ರಾಣಿ ಮಾಲೀಕತ್ವವನ್ನು ದಂಡನೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಅಪಾಯಕಾರಿ ಶ್ವಾನಗಳ ಸಾಕಣೆ ನಿಷೇಧಿಸಿ ಮಾರ್ಚ್ 12, 2024 ರಂದು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಏ.10) ರದ್ದುಗೊಳಿಸಿದೆ. ಇಂತಹ ಆಲೋಚನಾ ಪ್ರಕ್ರಿಯೆಯು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಮತ್ತು ನಾಯಿ ಮಾಲೀಕರು ಅಥವಾ ಯಾವುದೇ ಸಾಕುಪ್ರಾಣಿಗಳು ಮಾಲೀಕರು ಯಾವುದೇ ನಾಗರಿಕರಿಗೆ / ಇತರ ಜೀವಿಗಳಿಗೆ ಹಾನಿಯಾಗದಂತೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

    ಇದನ್ನೂ ಓದಿ : ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!
    ಆಯಾ ಪ್ರದೇಶದ ಸುತ್ತಮುತ್ತಲಿನ ನಾಗರಿಕರು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಗೆ ಸಾಕುಪ್ರಾಣಿ ಮಾಲೀಕರು ಜವಾಬ್ದಾರರಾಗಿರುತ್ತಾರೆ. ಸಾಕುಪ್ರಾಣಿಗಳಿಂದಾಗುವ ಯಾವುದೇ ರೀತಿಯ ಬೇಜವಾಬ್ದಾರಿಯುತ ನಡವಳಿಕೆಗೆ ಸಾಕುಪ್ರಾಣಿ ಮಾಲೀಕರೇ ಜವಾಬ್ದಾರರಾಗಿರುತ್ತಾರೆ ಎಂದು ಕೋರ್ಟ್ ತಿಳಿಸಿದೆ.

    LATEST NEWS

    ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪ*ಲ್ಟಿ; ಓರ್ವ ಸಾ*ವು, ಹಲವರ ಸ್ಥಿತಿ ಗಂಭೀ*ರ

    Published

    on

    ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರೊಂದು ಪ*ಲ್ಟಿಯಾಗಿರುವ ಘಟನೆ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕ ಮೃ*ತಪಟ್ಟಿದ್ದಾನೆ. ನೆಲಮಂಗಲದ ಚಂದನ್‌ (26) ಮೃ*ತ ಯುವಕ.

    ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಭತ್ತದ ಗದ್ದೆಗೆ ಪ*ಲ್ಟಿಯಾಗಿದೆ.  ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬವರಿಗೆ ಗಂ*ಭೀರ ಗಾ*ಯವಾಗಿದೆ.

    ಇದನ್ನೂ ಓದಿ : ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್​? ನಿಜಾನಾ ಎಂದು ಕೇಳಿದ್ದಕ್ಕೆ ಎಂಜಾಯ್​ ಮಾಡಿ ಎಂದ ಕಿರಾತಕ ಬೆಡಗಿ

    ಯುವಕರ ತಂಡ ಬೆಂಗಳೂರಿನಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿತ್ತು. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    Continue Reading

    LATEST NEWS

    ಪೊಳಲಿ ಸೇತುವೆ ಬಂದ್: ಮಂಗಳವಾರ ಗ್ರಾಮಸ್ಥರಿಂದ ಪ್ರತಿಭಟನೆ

    Published

    on

    ಮಂಗಳೂರು: ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಸೇತುವೆಯ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿ – ಅಡ್ಡೂರಿನ ಪಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟ ಕಾರಣಕ್ಕೆ ಘನ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಸೇತುವೆಯ ಸಾಮರ್ಥ್ಯವನ್ನು ಯಂತ್ರದ ಮೂಲಕ ಪರಿಶೀಲನೆ ನಡೆಸಿ ಎರಡು ತಿಂಗಳಾದ್ರೂ ಏನಾಗಿದೆ ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ತೊಂದರೆಗೆ ಒಳಗಾಗಿರುವ ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತ್ತು ಸುತ್ತಮುತ್ತಲಿನ ಜನ ಸಭೆ ನಡೆಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದನೆಯೇ ನೀಡದ ಜನಪ್ರತಿಧಿಗಳು, ಹಾಗೂ ಅಧಿಕಾರಿಗಳ ವಿರುದ್ಧ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿಯ ರಾಮಕೃಷ್ಣ ತಪೋವನ ರಾಜರಾಜೇಶ್ವರಿ ಸಭಾಂಗಣದಲ್ಲಿ ಸಭೆ ನಡೆಸಲಾಗಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದು ಹೋರಾಟದ ಬಗ್ಗೆ ಜನಾಭಿಪ್ರಾಯ ಪಡೆದುಕೊಂಡಿದ್ದಾರೆ.

    Continue Reading

    LATEST NEWS

    ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

    Published

    on

    ಬ್ರಹ್ಮಾವರ: ಹೇರಾಡಿ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
    ಮೃತ ವಿದ್ಯಾರ್ಥಿಯು ಮೊಹಮ್ಮದ್ ಜಹೀದ (12) ಎಂದು ಗುರುತಿಸಲಾಗಿದೆ.


    ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮಾಲಿಕ್ ದಿನಾರ್ ಮದರಸ ಹಾಸ್ಟೇಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆಯನ್ನು ಮುಗಿಸಿ ಅ.11 ರಂದು ಹಾಸ್ಟೇಲ್‌ಗೆ ಮರಳಿದ್ದಾನೆ.

    ರಾತ್ರಿ 9 ಗಂಟೆಗೆ ಊಟಕ್ಕೆ ಬಾರದಿದ್ದನ್ನು ಗಮನಿಸಿ ಹಾಡುಕಿದಾಗ ಹಾಸ್ಟೇಲ್‌ನ ಬಾತ್‌ರೂಮ್‌ನಲ್ಲಿ ಸರಳಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ರಾತ್ರಿ 10.40 ರ ಸುಮಾರಿಗೆ ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನ ಮರಣದಲ್ಲಿ ಸಂಶಯವಿರುವುದಾಗಿ ಬಾಲಕನ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಕನಿಗೆ ಹಾಸ್ಟೇಲ್‌ಗೆ ಹೋಗಲು ಮನಸ್ಸಿಲ್ಲವೆಂದು, ಹಾಸ್ಟೇಲ್‌ನ ಇತರ ವಿದ್ಯಾರ್ಥಿಗಳೊಂದಿಗೆ ಸಣ್ನ ಮಟ್ಟಿನ ಜಗಳ ಆಗಿತ್ತು ಎಂದು ತಿಳಿದು ಬಂದಿದದೆ.

    Continue Reading

    LATEST NEWS

    Trending