Connect with us

LATEST NEWS

ಮಲೆ ಮಾದಪ್ಪನ ಹುಂಡಿಯಲ್ಲಿ 54 ದಿನಕ್ಕೆ ಬರೋಬ್ಬರಿ 2.21ಕೋಟಿ ರೂ. ಸಂಗ್ರಹ…!

Published

on

ಮಲೆ ಮಾದಪ್ಪನ ಹುಂಡಿಯಲ್ಲಿ 54 ದಿನಕ್ಕೆ ಬರೋಬ್ಬರಿ 2.21ಕೋಟಿ ರೂ. ಸಂಗ್ರಹ…!

ಚಾಮರಾಜನಗರ : ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟವು ಹೆಚ್ಚು ಆದಾಯ ಹೊಂದುವ ದೇಗುಲಗಳಲ್ಲಿ ಒಂದಾಗಿದ್ದು, ಇಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು,

2 ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಕಾಣಿಕೆಯಲ್ಲಿ 40 ಗ್ರಾಂ ಚಿನ್ನ ಹಾಗೂ 1.667 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗಿದೆ.

ಬೆಟ್ಟದಲ್ಲಿ 54 ದಿನಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 2,21,32,439 ಸಂಗ್ರಹವಾಗಿದೆ.

40 ಗ್ರಾಂ ಚಿನ್ನ ಹಾಗೂ 1.667 ಕೆಜಿ ಬೆಳ್ಳಿಯನ್ಬು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ.

ಇದೇ 25 ಹಾಗೂ 26 ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

Click to comment

Leave a Reply

Your email address will not be published. Required fields are marked *

bangalore

ಸ್ನೇಹಿತ್ ಔಟ್- ನಮ್ರತಾ- ಸ್ನೇಹಿತ್ ಲವ್ ಸ್ಟೋರಿಗೆ ಬ್ರೇಕ್..!

Published

on

ಬಿಗ್ ಬಾಸ್: ಬಿಗ್ ಬಾಸ್ ಮನೆ ಆಟ ಇದೀಗ 60 ದಿನಗಳ ಪೂರೈಸಿದೆ. ಪ್ರತಿ ವಾರವು ಸ್ಪರ್ಧೆಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲಿಮಿನೆಟ್ ಆಗುತ್ತಿದ್ದಾರೆ. ಈ ವಾರವು ಸ್ನೇಹಿತ್ ಔಟ್ ಆಗಿದ್ದಾರೆ.

ಹಿಂದಿನ ವಾರದಲ್ಲಿ ಸ್ನೇಹಿತ್ ನಮ್ರತಾ ಜೊತೆ ಲವ್ವಿ-ಡವ್ವಿ ವಿಷಯಗಳನ್ನು ಮಾತನಾಡುತ್ತಿದ್ದರು. ನಮ್ರತಾ ಜೊತೆ ಬೆಸ್ಟ್ ಫ್ರೇಂಡ್ ಆಗಿದ್ದ ಸ್ನೇಹಿತ್ ಟಾಸ್ಕ್ ಗಳಲ್ಲಿ ಗೆಲ್ಲುತ್ತಿದ್ದರೂ, ಕೊನೆ ಕೊನೆಗೆ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ಕ್ಯಾಪ್ಟನ್ಸಿ ಆಗಿದ್ದಾಗ ಎರಡು ತಂಡಗಳ ಜೊತೆ ಪಕ್ಷಪಾತ ಮಾಡುತ್ತಿದ್ದರು. ಒಂದು ಟೀಮ್ ಗೆ ಮಾತ್ರ ಸಪೋರ್ಟ್ ಮಾಡುತ್ತಿದ್ದರು.

ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಎಂಬ ತಂಡಗಳ ನಡುವೆ ಜಗಳಗಳು ಹೆಚ್ಚಾಗಿತ್ತು. ಇದೇ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಕಣ್ಣಿಗೆ ಪೆಟ್ಟಾಗಿದ್ದು, ಇದಕ್ಕೆ ಪರೋಕ್ಷವಾಗಿ ಸ್ನೇಹಿತೇ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿತ್ತು. ಆದರೆ ಏನೂ ಮಾತನಾಡಲೂ ಮುಂದೆ ಹೋಗಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಿತ್ ನ ನಡೆತೆಯಿಂದ ಇದೀಗ ಅವರ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ.

ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ. ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ.

ಅಂತೂ ಬಿಗ್ ಬಾಸ್ ನಿಂದ ಸ್ನೇಹಿತ್ ಔಟ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ಲವ್ ಸ್ಟೋರಿ ಬ್ರೇಕ್ ಆಗುತ್ತಾ ಅಲ್ಲ ಬಿಗ್ ಮನೆಯಿಂದ ಹೊರ ಹೋದ ಬಳಿಕ ಮುಂದುವರಿಯುತ್ತಾ ಅನ್ನೋದು ಕಾದು ನೋಡಬೇಕಷ್ಟೇ.

Continue Reading

LATEST NEWS

ಕ್ರೇಟ್‌ ಗೆ ಪಿಕಪ್ ಢಿಕ್ಕಿ-ಸಾವಿರಾರು ರೂ. ಮೌಲ್ಯದ ನಂದಿನಿ ಹಾಲು ರಸ್ತೆ ಪಾಲು

Published

on

ಉಡುಪಿ: ಮಿಲ್ಕ್ ಬೂತ್ ಎದುರು ಕ್ರೇಟ್‌ನಲ್ಲಿ ಇರಿಸಿದ್ದ ನಂದಿನಿ ಹಾಲಿನ ಶೇಖರಣೆಗೆ ಪಿಕಪ್‌ ವಾಹನವೊಂದು ಢಿಕ್ಕಿ ಹೊಡೆದು ಸಾವಿರಾರು ರೂಪಾಯಿ ಮೌಲ್ಯದ ನಂದಿನಿ ಹಾಲು ರಸ್ತೆ ಪಾಲಾದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಇಂದು ನಡೆದಿದೆ.

ಈ ಅಪಘಾತದಲ್ಲಿ ಬೈಕ್ ಹಾಗೂ ಸೈಕಲ್ ಸವಾರರಿಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಚಾಲಕನು ದ್ವಿಚಕ್ರ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಇರಿಸಿದ್ದ ಹಾಲಿನ ಕ್ರೇಟ್‌ಗಳಿಗೆ ಪಿಕಪ್‌ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಾಲಿನ ಪ್ಯಾಕೆಟ್‌ ಶೇಖರಿಸಿಟ್ಟಿದ್ದ ಕ್ರೇಟ್‌ಗಳೆಲ್ಲ ಚೆಲ್ಲಾ ಪಿಲ್ಲಿಯಾಗಿದ್ದು, ಅಪಾರ ಪ್ರಮಾಣದ ಹಾಲು ರಸ್ತೆ ಪಾಲಾಗಿದೆ. ಪಿಕಪ್ ವಾಹನ ಚಾಲಕನ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಪಿಕಪ್‌ ಚಾಲಕ ಪರಾರಿಯಾಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Kundapura: ಲಂಚ ಪ್ರಕರಣ- ಸಬ್‌ ಇನ್‌ಸ್ಪೆಕ್ಟ್ರರ್ ಶಂಭುಲಿಂಗಯ್ಯ ಅಮಾನತು

Published

on

ಕುಂದಾಪುರ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಚ್ಚಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕ‌ರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್ ಪಿ ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Continue Reading

LATEST NEWS

Trending