Thursday, August 11, 2022

ರಾಮಪತ್ರೆ ಕೊಯ್ಯಲು ಹೋದವರು ಶವವಾಗಿ ಪತ್ತೆ .. ಕೊಲೆ ಶಂಕೆ..!

ರಾಮಪತ್ರೆ ಕೊಯ್ಯಲು ಹೋದವರು ಶವವಾಗಿ ಪತ್ತೆ .. ಕೊಲೆ ಶಂಕೆ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತನನ್ನು ಸ್ಥಳೀಯ ನಿವಾಸಿ ವೆಂಕಪ್ಪಗೌಡ (62) ಎಂದು ಗುರುತ್ತಿಸಲಾಗಿದೆ. ಈ ಬಗ್ಗೆ ಮೃತ ವೆಂಕಪ್ಪ ಗೌಡ ಅವರ ಮಗ ಸುಬ್ರಹ್ಮಣ್ಯ ಎಂ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಡಿ.5 ರಂದು ವೆಂಕಪ್ಪ ಗೌಡರು ನೆರೆ ಮನೆಯ ನಿವಾಸಿ ಬಾಲಚಂದ್ರ ಎಂಬವರೊಂದಿಗೆ ಕಾಡಿನಲ್ಲಿ ರಾಮಪತ್ರೆ ಎಂಬ ಹೂವುಗಳನ್ನು ಕೊಯ್ಯಲು ಹೋಗಿದ್ದಾರೆ ಎನ್ನಲಾಗಿದೆ.

ಕಾಡಿನಲ್ಲಿ ದೂರಕ್ಕೆ ಎಲ್ಲೋ ಹೋಗಿರಬೇಕು ಎಂದು ಭಾವಿಸಿದ ಮನೆಯವರು ಸುಮ್ಮನೆ ಇದ್ದರು. ಆದರೆ ಡಿ. 10 ರಂದು ವೆಂಕಪ್ಪ ಗೌಡರು ಉಪಯೋಗಿಸುತ್ತಿದ್ದ ಟಾರ್ಚ್‌, ಸಿಗರ್‌ಲೈಟ್‌, ವಾಚ್‌ ಹಾಗೂ ಕತ್ತಿಯನ್ನು ಮನೆಯ ಬಾಗಿಲಿನ ಮೆಟ್ಟಿಲ ಬಳಿ ಯಾರೋ ತಂದಿರಿಸಿದ್ದರು.

ಇದನ್ನು ಗಮನಿಸಿದ ಮನೆಯವರು ಅನುಮಾನಗೊಂಡು ಡಿ.11ರಂದು ನೆರೆಮನೆಯ ನಿವಾಸಿಗಳು ಹಾಗೂ ಸಂಬಂಧಿಕರು ಸೇರಿ ವೆಂಕಪ್ಪ ಗೌಡರನ್ನು ಕಾಡಿನಲ್ಲಿ ಹುಡುಕಾಟ ನಡೆಸುತ್ತಿರುವಾಗ ಅವರ ಮೃತದೇಹವು ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ಅಮೃತ ಮಹೋತ್ಸವ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು-ಶಾಸಕ ಪೂಂಜಾ

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತಮಹೋತ್ಸವ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.ಈ ವೇಳೆ ಮಾಧ್ಯಗಳನ್ನು ಉದ್ದೇಶಿಸಿ ಮಾತನಾಡಿದ...

ಆ.14 ರಂದು ಮಂಗಳೂರು ಪುರಭವನದಲ್ಲಿ ನಾಟಕ ಪ್ರದರ್ಶನ ಮತ್ತು ಮೆಗಾ ಮ್ಯಾಜಿಕ್

ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.14 ರ ಭಾನುವಾರ ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು...