ಮುಂಗೇರ್: ತನ್ನ ಪತ್ನಿಯನ್ನು ನೆರೆ ಮನೆಯ ವೃದ್ಧನೋರ್ವ ಟೊಮೆಟೊ ಎಂದು ಚುಡಾಯಿಸಿದ್ದಕ್ಕಾಗಿ ಆಕ್ರೋಶಗೊಂಡ ಪತಿ ಆತನನ್ನು ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬ್ರಹ್ಮದೇವ್ದಾಸ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಮಹೇಶ್ ದಾಸ್ ಎಂಬಾತ ಬ್ರಹ್ಮದೇವ್ದಾಸ್ನ ಪತ್ನಿಯನ್ನು ‘ಟೊಮೆಟೊ’ ಎಂದು ಚುಡಾಯಿಸುತ್ತಿದ್ದ ಈ ಬಗ್ಗೆ ಆಕೆ ಪತಿ ಬಳಿ ದೂರಿಕೊಂಡಿದ್ದಳು. ಇದರಿಂದ ಕೋಪಗೊಂಡಿರುವ ಪತಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಇದರಿಂದ ಪ್ರಜ್ಞೆ ತಪ್ಪಿಬಿದ್ದಿರುವ ಮಹೇಶ್ನನ್ನು ವೈದ್ಯರ ಬಳಿ ಕರೆದೊಯ್ಯಲಾಗಿದೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ.