Thursday, April 22, 2021

ಸ್ವಂತ ಮಕ್ಕಳಿಂದಲೇ ವಂಚನೆಗೊಳಗಾದ ವೃದ್ಧೆ; ತುತ್ತು ಅನ್ನಕ್ಕೂ ತತ್ವಾರ..!

ಉಡುಪಿ:ವೃದ್ದೆಯೊಬ್ಬರು ಮಕ್ಕಳಿಂದಲೇ ವಂಚನೆಗೊಳಗಾಗಿದ್ದಾರೆ. ಪತಿಬಿಟ್ಟು ಹೋದ ಎಕರೆಗಟ್ಟಲೆ ಆಸ್ತಿ ಇದ್ದರೂ ಆಸ್ತಿಯಲ್ಲಿ ತನ್ನ ಪಾಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕಣ್ಣೆದುರೇ ತನ್ನ ಭೂಮಿ ಪರರ ಪಾಲಾಗುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಹಿರಿಯ ನಾಗರಿಕರ ನ್ಯಾಯ ಮಂಡಳಿಯ ಆದೇಶಕ್ಕೂ ಬೆಲೆ ಕೊಡದ ಮಕ್ಕಳು, ತಾಯಿಗೆ ಹೋರಾಟಕ್ಕಿಳಿಯುವ ಅನಿವಾರ್ಯತೆ ಸೃಷ್ಟಿಸಿದ್ದಾರೆ.  ಗಿಣಿಯಂತೆ ಸಾಕಿದ ಮಕ್ಕಳು ಮುಂದೆ  ಹದ್ದಾಗಿ ಚುಚ್ಚುವುದು ಅಂದ್ರೆ ಇದೇ ಇರಬೇಕು. ಈ ವೃದ್ಧೆಯ ಹೆಸರು ಮೋಂತಿ ಡಿಸಿಲ್ವಾ,ಮಂಗಳೂರಿನ ಕಲ್ಲಮುಂಡ್ಕೂರು ಗ್ರಾಮದ ನಿವಾಸಿ.

ಪತಿ ಬ್ಯಾಪ್ಟಿಸ್ಟ್ ಡಿಸಿಲ್ವರು  ಬದುಕಿದ್ದಾಗ, ದಂಪತಿಗಳು ಸೇರಿ ಸ್ವಂತ ಪರಿಶ್ರಮದಿಂದ ದುಡಿದು, ಮಕ್ಕಳಿಗೆಲ್ಲಾ ಶಿಕ್ಷಣ ನೀಡಿ, ಮದುವೆ ಮಾಡಿದ್ದರು.2006 ರಲ್ಲಿ ಬ್ಯಾಪ್ಟಿಸ್ಟ್ ಡಿಸೋಜರು ಸತ್ತಾಗ, ಕುಟುಂಬಕ್ಕಾಗಿ 6.25 ಎಕರೆ ಜಮೀನು ಹಾಗೂ ಒಂದು ಮನೆ ಬಿಟ್ಟು ಹೋಗಿದ್ದರು. ತಂದೆ ಸತ್ತ ಕೂಡಲೇ ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಆಸ್ತಿ ಪಾಲು ಮಾಡಲು ಒತ್ತಾಯ ಮಾಡಿದರು.

ದಿನನಿತ್ಯದ ಒತ್ತಡದಿಂದ ರೋಸಿ ಹೋದ ಮೋಂತಿಯಮ್ಮ ಪರಸ್ಪರ ಒಪ್ಪಿಗೆ ಮೂಲಕ ಪಾಲು ಮಾಡಿಕೊಳ್ಳಲು ಸೂಚಿಸಿದರು. 2009 ರಲ್ಲಿ ಎಲ್ಲರೂ ವಿಭಾಗದ ಪತ್ರದ ಮೂಲಕ ಆಸ್ತಿಗಳನ್ನು ತಮ್ಮ ಪಾಲಿಗೆ ಮಾಡಿಕೊಂಡರು.

ತಾಯಿಯ ಪಾಲಿಗೆ ಬಂದ 2.25 ಎಕ್ರೆ ಜಮೀನು ವಿಂಗಡಿಸಿದ್ದರೂ ಹಕ್ಕುಪತ್ರಗಳಲ್ಲಿ ಮೋಂತಿಯಮ್ಮನ ಹೆಸರೇ ಸೇರಿಸಿಲ್ಲ.   ಅಮ್ಮನ ಆಸ್ತಿಗೆ ಎಲ್ಲಾ ಮಕ್ಕಳು ಜಂಟಿಯಾಗಿ ಹಕ್ಕುದಾರರು ಎಂದು ವಿಭಾಗ ಪತ್ರದಲ್ಲೇ ದಾಖಲಿಸಿದ್ದರು.

ಅನಕ್ಷರಸ್ಥೆ ಮೋಂತಿಯಮ್ಮನಿಗೆ ಅಕ್ಷರಸ್ಥ ಮಕ್ಕಳು ಮಾಡಿದ ಕಿತಾಪತಿ ಗೊತ್ತೇ ಆಗಿಲ್ಲ. ಮತ್ತೆ 2018ರಲ್ಲಿ ಮೋಂತಿಯಮ್ಮ ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರಿತ್ತಿದ್ದಾರೆ.

ನ್ಯಾಯ ಮಂಡಳಿಯು ವಿಚಾರಣೆ ನಡೆಸಿ, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಪ್ರತೀ ಐವರು ಮಕ್ಕಳೂ ಪ್ರತಿ ತಿಂಗಳು ತಲಾ 2ಸಾವಿರ ರೂಪಾಯಿ ನೀಡುವಂತೆ ಆದೇಶಿಸಿತ್ತು.

ಆದರೆ ಇದಕ್ಕೂ ಒಪ್ಪದ ಮೂವರು ಮಕ್ಕಳು ತಾಯಿಗೆ ಪೋಷಣೆಗ ಹಣ ಕೊಡಲು ಸಾಧ್ಯವಿಲ್ಲವೆಂದು  ಸಹಾಯಕ ಆಯುಕ್ತರಿಗೆ ಲಿಖಿತ ಪತ್ರ ಬರೆದು ತಿಳಿಸಿದ್ದಾರೆ. ಇದರಿಂದ ಚಿಂತೆಗೀಡಾದ ಮೋಂತಿಯಮ್ಮ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.

ತನ್ನ ಕಣ್ಣೆದುರೇ ಆಸ್ತಿಯ ಪರಭಾರೆ ಆಗುವುದನ್ನು ಕಂಡು ಮೋಂತಿಯಮ್ಮ ಕಣ್ಣೀರಿಡುತ್ತಿದ್ದಾರೆ, ಸ್ವಯಾರ್ಜಿತ ಆಸ್ತಿಯಾದ ಕಾರಣ ಪಾಲು ಮಾಡಿಕೊಂಡಿರುವುದನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶ ಇದೆ.

ಆದರೆ ತನ್ನ ಪಾಲು ತನಗೆ ಕೊಟ್ಟರೆ ಸಾಕು,ಅದನ್ನು ಮಾರಿ ಬಂದ ಹಣದಲ್ಲಿ ಉಳಿದ ಜೀವನ ಕಳೆಯುತ್ತೇನೆ ಅನ್ನೋದು ಮೋಂತಿಯಮ್ಮನ ಉದಾರತೆ. ಇನ್ನಾದರೂ ಮಕ್ಕಳು ವೃದ್ಧಾಪ್ಯದಲ್ಲಿ ತಾಯಿಗೆ ಆರ್ಥಿಕವಾಗಿ ಆಸರೆ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...