Connect with us

LATEST NEWS

ನೂಪುರ್‌ ಶರ್ಮಾ ಹೇಳಿಕೆ ನೂರಕ್ಕೆ ನೂರು ಸರಿ: ಸುನಿಲ್‌ ಕೆ.ಆರ್‌

Published

on

ಮಂಗಳೂರು: ಇಸ್ಲಾಮಿಕ್‌ ಪ್ರವಾದಿ ವಿರುದ್ಧ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ನೀಡಿದ ಹೇಳಿಕೆಯನ್ನು ವಿಶ್ವಹಿಂದೂ ಪರಿಷತ್‌ ಬಜರಂಗದಳ ಸಮರ್ಥಿಸಿದೆ. ನೂಪುರ್‌ ಶರ್ಮಾ ಹೇಳಿದ್ದು ನೂರಕ್ಕೆ ನೂರು ಸರಿ. ಇದನ್ನು ಪವಿತ್ರ ಹದೀಸ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಅದು ಧರ್ಮನಿಂದನೆ ಅಲ್ಲ. ಬದಲಾಗಿ ಇದ್ದ ವಿಷಯವನ್ನು ಹೇಳಿದ್ದು ಎಂದು ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್‌ ಹೇಳಿದ್ದಾರೆ.


ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 5-6 ತಿಂಗಳಿಂದ ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ರಾಮನವಮಿ, ಹನುಮ ಜಯಂತಿ ವೇಳೆಯೂ ಕಲ್ಲು ತೂರಾಟ ನಡೆದಿತ್ತು.

ಈ ಬಗ್ಗೆ ಅವರ ಧರ್ಮಗುರು, ಮೌಲ್ವಿಗಳನ್ನು ಪ್ರಶ್ನೆ ಮಾಡಿದಾಗ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅವರನ್ನು ಪ್ರಚೋದಿಸಿದವರು ಯಾರು? ಆದ್ದರಿಂದ ಧರ್ಮಗುರು, ಮೌಲ್ವಿಗಳನ್ನು ರಾಷ್ಟ್ರೀಯ ಸುರಕ್ಷತಾ ಅಡಿಯಲ್ಲಿ ತನಿಖೆಗೆ ಒಳಪಡಿಸಬೇಕು.

ಮಸೀದಿ, ಮದರಸಾಗಳಲ್ಲಿ ಕೋಮು ದ್ವೇಷ ಹರಡುವರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಇಂತಹ ಹಿಂಸಾಚಾರಕ್ಕೆ ಪ್ರಚೋದಿಸುವ ಜಮಾತೆ-ಉಲೇಮಾ-ಎ-ಹಿಂದ್‌ ಮದನಿ, ಪಿಎಫ್‌ಐ, ತಬ್ಲೀಗಿ ಸಂಘಟನೆ ಬಗ್ಗೆ ತನಿಖೆ ನಡೆಸಿ, ನಿಷೇಧವನ್ನು ಮಾಡಬೇಕು.

ನೂಪುರ್‌ ಶರ್ಮಾ ಹೇಳಿಕೆ ನಂತರ ಶುಕ್ರವಾರ ನಮಾಜು ಬಳಿಕ ಇಡೀ ದೇಶದಲ್ಲಿ ಮಾಹಿತಿ ಇಲ್ಲದೆ ಪ್ರತಿಭಟನೆ ನಡೆಯಿತು. ಅಲ್ಲಿ ಸಿಕ್ಕ ಸಿಕ್ಕ ಹಿಂದೂಗಳು, ಹಾಗೂ ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ಹಲ್ಲೆ ನಡೆಯುತ್ತಿದೆ.

ಇದಕ್ಕೆ ಕೇರಳ, ಪಶ್ಚಿಮ ಬಂಗಾಳ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಇದಾದ ನಂತರ ಹಿಂದೂ ನಾಯಕರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಆಗ್ರಹಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಇಸ್ಲಾಮಿಕ್‌ ಚಿಂತಕ ಝಾಕಿರ್‌ ನಾಯ್ಕ್‌ ಹೇಳಿಕೆಗೆ ನಾವು ನಿರಂತರ ಗಲಾಟೆಗಳನ್ನು ಮಾಡಬೇಕಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವ-ದೇವರ ಅವಹೇಳ ಮಾಡಿದ್ದಾರೆ.

ಆದರೆ ಹಿಂದೂಗಳು ಎಲ್ಲೂ ಗಲಭೆ ಮಾಡಿಲ್ಲ ಎಂದ ಅವರು, ಇದರ ಹಿಂದೆ ಇಸ್ಲಾಮೀಕರಣದ ಷಡ್ಯಂತ್ರವಿದೆ. ಎನ್‌ಐಎ ಇದನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದೆ. ದ.ಕ ದಿಂದಲೂ ನಾವು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

FILM

ಮೊದಲ ಬಾರಿ ಮದುವೆ ರಹಸ್ಯ ಬಿಚ್ಚಿಟ್ಟ ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್

Published

on

ಬೆಂಗಳೂರು : ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಹಲವು ಸ್ಪರ್ಧಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದರಲ್ಲಿ ಹುಲಿ ಉಗುರು ಧರಿಸಿದ ಕಾರಣಕ್ಕೆ ಪೊಲೀಸರಿಂದ ಹಳ್ಳಿಕಾರ್‌ ಒಡೆಯ ವರ್ತೂರು ಸಂತೋಷ್‌ ಅವರ ಬಂಧನವಾಗಿತ್ತು. ಈಗ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.

ಬಿಗ್ ಬಾಸ್ ಮನೆಯಲ್ಲಿಯೇ ತಮ್ಮ ಮದುವೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಒಬ್ಬಳು ಹೆಣ್ಣು ಮಗು ಕೂಡ ಇದೆ. ಆದರೆ ಅವರು ಮದುವೆ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲದಿನಗಳ ಹಿಂದೆ ಸೋಷಿಯಲ್‌ಮೀಡಿಯಾದಲ್ಲಿ ಗುಲ್ಲೆದ್ದಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಸ್ವತಃ ವರ್ತೂರ್ ಅವರೇ ತಮ್ಮ ಮದುವೆ, ಪತ್ನಿ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಬಿಗ್‌ಬಾಸ್ ಮನೆ ಸೇರಿದಾಗಿನಿಂದ ಈ ವರೆಗೂ ತನಗೆ ಮದುವೆ ಆಗಿದೆ ಎಂಬ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ ವರ್ತೂರು ಸಂತೋಷ್.  ಈಗ ಗುಟ್ಟು ರಟ್ಟಾಗಿದೆ.

‘ವರ್ತೂರ ಸಂತೋಷ್‌ ಒಳಗಡೇ ಏನೈತೆ ಅನ್ನೋದನ್ನು ಹೇಳ್ತಿದ್ದೇನೆ. ನೋಡು ದೊಡ್ಡಪ್ಪ ನೀನು ಹೀಗು ತಾಳಿಕಟ್ಟು ಅಂದ್ರೆ ಕಟ್ಟಿಬಿಡ್ತಿನಿ. ನಾನು ಅವರಿಗೆ ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಮದುವೆಯೂ ಆಯ್ತು, ದಿನ ಕಳೆದಂತೆ, ಅಮ್ಮನನ್ನು ಇಗ್ನೋರ್‌ ಮಾಡೋಕೆ ಶುರು ಮಾಡಿದ್ರು. ನಾನು ಸಂಪಾದನೆ ಮಾಡಿದ ಜನರನ್ನು ತೊರೆದು ಇವರ ಹಿಂದೆ ಹೋಗಬೇಕು ಎಂದರೆ ಅದು ಸಾಧ್ಯವಾಗದ ಮಾತು. ಆಗ ಹೆಂಡತಿ ಮನೆ ಹತ್ತಿರ ಹೋಗ್ತಿನಿ. ನನ್ನ ಮಾತಿನ ಪ್ರಕಾರ ಬಂದ್ರೆ, ನೀನು ರಾಣಿನೇ ಎಂದು ಕರೆದೆ. ಮೊದಲು ನೀನು ಗೇಟಿಂದ ಆಚೆ ಹೋಗು ಎನ್ನುತ್ತಾರೆ. ಆವತ್ತು ನಾನು ಮಾತು ಕೊಟ್ಟು ಬಂದಿದ್ದೀನಿ ಇವತ್ತು ಆ ಮಾತಿನ ಮೇಲೆ ನಿಂತಿದ್ದೀನಿ’ ಎಂದಿದ್ದಾರೆ ವರ್ತೂರು.

ಮುಂದೇನಾಗುತ್ತೆ ಅನ್ನುವುದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡ್ಬೇಕಷ್ಟೆ..

Continue Reading

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

DAKSHINA KANNADA

ಉಡುಪಿ : ಬೈಕ್ ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ

Published

on

ಉಡುಪಿ : ಉಡುಪಿಯ ಬ್ರಹ್ಮಾವರದ ಧರ್ಮಾವರಂ ಎಂಬಲ್ಲಿ ಬೈಕಿಗೆ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಉಪ್ಪಿನಕೋಟೆಯ 31 ವರ್ಷ ಪ್ರಾಯದ ಪ್ರೀತಮ್‌ ಡಿ’ ಸಿಲ್ವಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.

ಪ್ರೀತಮ್‌ ಅವರು ಬೈಕ್‌ ಚಲಾಯಿಸಿಕೊಂಡು ಬ್ರಹ್ಮಾವರ ಆಕಾಶವಾಣಿ ಪೆಟ್ರೋಲ್‌ ಪಂಪ್‌ ಕಡೆಯಿಂದ ಸರ್ವಿಸ್‌ ರೋಡ್‌ನ‌ಲ್ಲಿ ಆಗಮಿಸಿ ಉಪ್ಪಿನಕೋಟೆಗೆ ತೆರಳಲು ಡಿವೈಡರ್‌ ಬಳಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್‌ ಢಿಕ್ಕಿ ಹೊಡೆಯಿತು. ಅವಿವಾಹಿತರಾಗಿದ್ದ ಪ್ರೀತಮ್‌ ಕೆಟರಿಂಗ್‌ ಉದ್ಯಮ ನಡೆಸುತ್ತಿದ್ದರು. ಪ್ರೀತಮ್‌ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading

LATEST NEWS

Trending