Friday, May 27, 2022

ಕರಾವಳಿ ಮಂದಿಗೆ ಪಡಿತರ ‘ಕುಚ್ಚಲಕ್ಕಿ ಭಾಗ್ಯ’ ಸದ್ಯಕ್ಕಿಲ್ಲ

ಮಂಗಳೂರು: ಕೆಲ ತಿಂಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಪಡಿತರ ವ್ಯವಸ್ಥೆಯಡಿ ಊಟದ ಕೆಂಪು ಕುಚಲಕ್ಕಿಯನ್ನು ವಿತರಿಸುವುದಾಗಿ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರೂ, ಅದು ಸದ್ಯಕ್ಕೆ ಸಿಗುವುದು ಕಷ್ಟಸಾಧ್ಯ.


ಕರಾವಳಿ ಜಿಲ್ಲೆಗಳ ಒಟ್ಟು ಕೆಂಪು ಕುಚ್ಚಲಕ್ಕಿಯ ಬೇಡಿಕೆ ವಾರ್ಷಿಕ 12 ಲಕ್ಷ ಕ್ವಿಂಟಾಲ್. ಈ ಬೇಡಿಕೆ ಪೂರೈಸಲು 20 ಲಕ್ಷ ಕ್ವಿಂಟಾಲ್ ಭತ್ತದ ಅಗತ್ಯವಿದೆ. ಆದ್ದರಿಂದ ಕೆಂಪು ಕುಚ್ಚಲಕ್ಕಿ ಪೂರೈಸಲು ತಳಿಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಜಿಲ್ಲೆಗಳಿಗೆ ಬೇಕಾಗುವಷ್ಟು ಅಕ್ಕಿ ಉತ್ಪಾದನೆ ಆಗುತ್ತಿಲ್ಲ. ಇದರಿಂದ ಇತರ ಜಿಲ್ಲೆಗಳಿಂದ ಭತ್ತ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕರಾವಳಿಯಲ್ಲಿ ಈಗ ನೀಡುತ್ತಿರುವ ಅಕ್ಕಿಯನ್ನು 90% ಜನ ಊಟಮಾಡುವುದಿಲ್ಲ.

ಕೆಲವರು ಈ ಅಕ್ಕಿಯನ್ನು ರೇಷನ್‌ ಅಂಗಡಿಯಲ್ಲೇ ಬಿಟ್ಟು ಬಿಡುತ್ತಾರೆ. ಮತ್ತೆ ಕೆಲವರು ಅಕ್ಕಿ ತೆಗೆದುಕೊಂಡು, ಮಾರಾಟ ಮಾಡುತ್ತಾರೆ.
ಕರಾವಳಿಗೆ ಅಕ್ಕಿ ಪೂರೈಸಲು ಬೇಕಾದಷ್ಟು ಭತ್ತ ಲಭ್ಯವಾಗುತ್ತಿಲ್ಲ. ಹಾಗಾಗಿ ವಿತರಣೆಯಲ್ಲಿ ತಡವಾಗುತ್ತಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಬೆಳೆದ ಅಕ್ಕಿಯನ್ನು ಖರೀದಿಸಿ ಪೂರೈಸಲು ವ್ಯವಸ್ಥೆ ಮಾಡಲಾವುದು ಎಂದು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics