Home ದೇಶ-ವಿದೇಶ ನಿರ್ಭಯಾ ಪ್ರಕರಣ: ಎಲ್ಲ ಅಪರಾಧಿಗಳನ್ನು ಒಟ್ಟಾಗಿ ಗಲ್ಲಿಗೇರಿಸಬೇಕು-ದೆಹಲಿ ಹೈಕೋರ್ಟ್

ನಿರ್ಭಯಾ ಪ್ರಕರಣ: ಎಲ್ಲ ಅಪರಾಧಿಗಳನ್ನು ಒಟ್ಟಾಗಿ ಗಲ್ಲಿಗೇರಿಸಬೇಕು-ದೆಹಲಿ ಹೈಕೋರ್ಟ್

ನಿರ್ಭಯಾ ಪ್ರಕರಣ: ಎಲ್ಲ ಅಪರಾಧಿಗಳನ್ನು ಒಟ್ಟಾಗಿ ಗಲ್ಲಿಗೇರಿಸಬೇಕು-ದೆಹಲಿ ಹೈಕೋರ್ಟ್

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಒಟ್ಟಿಗೆ ಮರಣದಂಡನೆಗೆ ಒಳಪಡಿಸಬೇಕು ಹೊರತು ಪ್ರತ್ಯೇಕವಾಗಿ ಅಲ್ಲವೆಂದು ದೆಹಲಿ ಹೈಕೋರ್ಟ್ ಹೇಳಿದೆ.

ಇದಕ್ಕಾಗಿ ಹೈಕೋರ್ಟ್ ಎಲ್ಲಾ 4 ಅಪರಾಧಿಗಳಿಗೆ ಒಂದು ವಾರ ಕಾಲಾವಕಾಶ ನೀಡಿ ಅವರಿಗೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಆ ಒಂದು ವಾರದಲ್ಲಿ ಕೈಗೊಂಡು ಮುಗಿಸುವಂತೆ ಸೂಚಿಸಿದೆ.ಒಂದು ವಾರದ ನಂತರ ಅವರ ಮರಣದಂಡನೆ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನಿರ್ಭಯಾ ಪ್ರಕರಣದಲ್ಲಿ ಮೇಲಿನ ತೀರ್ಪು ಪ್ರಕಟಿಸಿದ್ದಾರೆ.

ಅಪರಾಧಿಗಳ ಮರಣದಂಡನೆಯನ್ನು ತಡೆಹಿಡಿಯುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು.  ಪ್ರಕರಣದ ನಾಲ್ವರು ಆರೋಪಿಗಳ ಮರಣದಂಡನೆಗೆ  “ಮುಂದಿನ ಆದೇಶದವರೆಗೆ” ತಡೆ ವಿಧಿಸಿ ಚಾರಣಾ ನ್ಯಾಯಾಲಯ ನಿರ್ದೇಶಿಸಿದೆ. ಜನವರಿ 31 ರ ಆದೇಶವನ್ನು  ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಗಳು ಪ್ರಶ್ನಿಸಿದ್ದವು.  ನಿರ್ಭಯಾ ಸಾಮೂಹಿಕ ಅತ್ಯಾಚಾರದ ಅಪರಾಧಿಗಳಾದ ಮುಖೇಶ್ ಕುಮಾರ್ ಸಿಂಗ್ , ಪವನ್ ಗುಪ್ತಾ , ವಿನಯ್ ಕುಮಾರ್ ಶರ್ಮ, ಅಕ್ಷಯ್ ಕುಮಾರ್ ಮತ್ತು ಸಧ್ಯ ತಿಹಾರ್ ಜೈಲಿನಲ್ಲಿದ್ದಾರೆ.

 

- Advertisment -

RECENT NEWS

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್..

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್.. ಮಂಗಳೂರು: ಕೋವಿಡ್-19 ವ್ಯಾಪಿಸುತಿದ್ದಂತೆ ಉಂಟಾದ ಲಾಕ್ ಡೌನ್ ನಿಂದ ತವರಿಗೆ ಮರಳಲು ಆಗದೆ ಬಾಕಿಯಾದ ಸುಮಾರು 49 ಮಂದಿ ನೇಪಾಳ...

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ ಶಿವಮೊಗ್ಗ/ಸಾಗರ:  ತೆರಿಗೆ ವಂಚನೆ ವಿರುದ್ಧದ ದಾಳಿ ಮುಂದುವರಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು,...

ರಾಜ್ಯದಲ್ಲಿ ಇನ್ನುಮುಂದೆ ‘ದಲಿತ’ ಪದದ ಬಳಕೆ ಮಾಡುವಂತಿಲ್ಲ: ಉಪಮುಖ್ಯಮಂತ್ರಿ ಕಾರಜೋಳ ಆದೇಶ..

ರಾಜ್ಯದಲ್ಲಿ ಇನ್ನುಮುಂದೆ 'ದಲಿತ' ಪದದ ಬಳಕೆ ಮಾಡುವಂತಿಲ್ಲ: ಉಪಮುಖ್ಯಮಂತ್ರಿ ಕಾರಜೋಳ ಆದೇಶ.. ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ದಲಿತ ಪದವನ್ನು ಬಳಕೆ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಕಾರಜೋಳ ಆದೇಶಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಹಾಗೂ...

ಜಿಲ್ಲೆಯ ಜನರನ್ನೇ ನಡುಗಿಸಿದ್ದ ತ್ರಿವಳಿ ಕೊಲೆ ಪ್ರಕರಣ ಬೇಧಿಸಿದ ಚಾಮಾರಾಜನಗರ ಪೊಲೀಸರು…!

ಜಿಲ್ಲೆಯ ಜನರನ್ನೇ ನಡುಗಿಸಿದ್ದ ತ್ರಿವಳಿ ಕೊಲೆ ಪ್ರಕರಣ ಬೇಧಿಸಿದ ಚಾಮಾರಾಜನಗರ ಪೊಲೀಸರು…! ಚಾಮರಾಜನಗರ: ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೊಲೀಸರು ಒಂದು ವಾರದಲ್ಲಿಯೇ ಭೇದಿಸಿ 15 ಮಂದಿ ಆರೋಪಿಗಳನ್ನು...