FILM
ತನಿಷಾ-ವರ್ತೂರು ಸಂತೋಷ್ ‘ಬೆಂಕಿಯ ಬಲೆ’ ಜೋಡಿ ಹೇಗಿದೆ?
ಬೆಂಗಳೂರು : ಈಗಾಗ್ಲೇ ದೊಡ್ಮನೆಯಲ್ಲಿ ನಮ್ರತಾ-ಸ್ನೇಹಿತ್, ಕಾರ್ತಿಕ್-ಸಂಗೀತಾ, ಇಶಾನಿ-ಮೈಕಲ್ ಜೋಡಿಯ ಲವ್ವಿ ಡವ್ವಿ ನಡೆಯುತ್ತಿದೆ.ಈಗ ಹೊಸ ಸೇರ್ಪಡೆ ಎಂಬಂತೆ ತನಿಷಾ ಮತ್ತು ವರ್ತೂರು ಸಂತೋಷ್ ಜೋಡಿಯಾಗುವ ಲಕ್ಷಣ ಕಾಣ್ತಿದೆ.
‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಸುದೀಪ್ ಸಂತೋಷ್ ಮತ್ತು ವರ್ತೂರ್ ಗೆ ಸಖತ್ ಆಗಿ ಕಾಲೆಳೆದಿದ್ದಾರೆ.ಅದು ಅಲ್ದೆ ವೀಕೆಂಡ್ ಲ್ಲಿ ಸುದೀಪ್ ಅವ್ರು ‘ಬೆಂಕಿಯ ಬಲೆ’ ಎಂದು ಟೈಟಲ್ ಕೊಟ್ಟು ತನಿಷಾ- ವರ್ತೂರು ಫೋಟೋ ಹಾಕಿದ್ದಾರೆ.
‘ಇದನ್ನ ಎಲ್ಲರೂ ನೋಡ್ತಿದ್ದಂತೆ ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ವರ್ತೂರು, ನಾನು ಮಾಮೂಲಾಗಿ ಕ್ಲೋಸ್ ಆಗಿಯೇ ಇರುತ್ತೀನಿ ಎಂದು ತನಿಷಾ ಬಗ್ಗೆ ಹೇಳಿದ್ದಾರೆ.ಅದಕ್ಕೆ ಸುದೀಪ್, ಓಹೋ ನಿಮಗೆ ಕ್ಲೋಸ್ ಆಗಿರೋದೇ ಮಾಮೂಲಾ ಎಂದು ಕಾಲೆಳೆದಿದ್ದಾರೆ.ಒಟ್ನಲ್ಲಿ ಬಿಗ್ ಬಾಸ್ ಮನೆಲಿ ಸದ್ಯದಲ್ಲೇ ಹೊಸ ಜೋಡಿ ಮೋಡಿ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
FILM
ಶೀಘ್ರದಲ್ಲಿ ತೆರೆಗೆ ಬರಲಿದೆ ‘ದೃಶ್ಯಂ-3’..! ಕ್ಲೂ ಕೊಟ್ಟ ಚಿತ್ರ ತಂಡ..!
ಮಂಗಳೂರು : ಮುಂದೇನಾಗುತ್ತದೆ ಎಂದು ಚಿತ್ರ ಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ ತನ್ನ ಮೂರನೇ ಅಧ್ಯಾಯದಲ್ಲಿ ಉತ್ತರ ನೀಡಲು ಮುಂದಾಗಿದೆ. ಸಿನಿಮಾ ಇಂಡಸ್ಟ್ರೀಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ದೃಶ್ಯಂ’ ಸಿನೆಮಾ ಈಗಾಗಲೇ ‘ದೃಶ್ಯಂ2’ ಮೂಲಕ ಕಥಾನಾಯಕನ ಕ್ರಿಮಿನಲ್ ಮೈಂಡ್ ಬಗ್ಗೆ ಚರ್ಚೆ ಹುಟ್ಟು ಹಾಕಿತ್ತು. ಇದೀಗ ‘ದೃಶ್ಯಂ3’ ಮೂಲಕ ಈ ಕಥೆಗೆ ಅಂತ್ಯ ಹಾಡಲು ಚಿತ್ರ ತಂಡ ಸಿದ್ಧವಾಗಿದೆ.
ಕೇವಲ ಮಲೆಯಾಳಂ ಮಾತ್ರವಲ್ಲದೆ ಇಡೀ ಸಿನೆಮಾ ಇಂಡಸ್ಟ್ರೀಯಲ್ಲೇ ಸಂಚಲನ ಮೂಡಿಸಿದ ಸಿನೆಮಾ ‘ದೃಶ್ಯಂ’. ಸಸ್ಪೆನ್ಸ್ ಥ್ರಿಲರ್ ಸಿನೆಮಾವಾಗಿ ಜನರಿಗೆ ಇಷ್ಟವಾಗಿದ್ದ ಈ ಸಿನೆಮಾ ‘ದೃಶ್ಯಂ2’ ಮೂಲಕ ಇಡೀ ಸಿನೆಮಾ ಇಂಡಸ್ಟ್ರೀಯನ್ನೇ ಅಲ್ಲಾಡಿಸಿತ್ತು. ಕಥೆಯನ್ನೂ ಹೀಗೂ ಬರೆಯಬಹುದು ಅನ್ನೋದನ್ನ ‘ದೃಶ್ಯಂ’ ಮತ್ತು ‘ದೃಶ್ಯಂ2’ ಮೂಲಕ ಜೀತು ಜೋಸೆಫ್ ತೋರಿಸಿಕೊಟ್ಟಿದ್ದರು.
ತನ್ನ ಕುಟುಂಬದ ರಕ್ಷಣೆಗಾಗಿ ಕಥಾನಾಯಕ ಯಾವ ರೀತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯಶಸ್ವಿಯಾಗಿದ್ದ ಮತ್ತು ಮೃತ ದೇಹವನ್ನು ಹೇಗೆ ಅಡಗಿಸಿ ಇಟ್ಟಿದ್ದ ಅನ್ನೋದು ‘ದೃಶ್ಯಂ’ ಸಿನೆಮಾದ ಕಥಾವಸ್ತು. ಇನ್ನು ‘ದೃಶ್ಯಂ2’ ನಲ್ಲಿ ಕಥಾ ನಾಯಕನ ಪ್ಲ್ಯಾನ್ ಬಿ ಪ್ರಕಾರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಅಸ್ತಿಗಳನ್ನು ಬದಲಾಯಿಸಿ ತನ್ನ ಕುಟುಂಬವನ್ನು ಕಾಪಾಡುವುದು ಕಥಾವಸ್ತುವಾಗಿತ್ತು.
ಇದನ್ನೂ ಓದಿ : ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಕಥಾನಾಯಕನ ಈ ಕ್ರಿಮಿನಲ್ ಬುದ್ದಿಗೆ ಕೊನೆ ಇಲ್ಲವಾ ಎಂದು ‘ದೃಶ್ಯಂ2’ ನೋಡಿದ ಚಿತ್ರ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದೀಗ ‘ದೃಶ್ಯಂ3’ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಮೂಲಕ ಉತ್ತರ ನೀಡಲು ಮುಂದಾಗಿದೆ.
2025 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ವೇಳೆ ಚಿತ್ರವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದೆ. ಸಿನೆಮಾದ ಚಿತ್ರೀಕರಣ ಆರಂಭವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದೆ. ಚಿತ್ರದ ಕಥೆ ಸಿದ್ದವಾಗಿದ್ದು, ‘ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್’ ಎಂದು ಅಭಿಮಾನಿಗಳು ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ.
BIG BOSS
ಇತಿಹಾಸದಲ್ಲೇ ಮೊದಲು.. ಬಿಗ್‌ಬಾಸ್ ಕಂಟೆಸ್ಟಂಟ್ ಆಗಿ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?
ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್ಬಾಸ್ನದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್‌ಬಾಸ್ ಸೀಸನ್ ಮುಕ್ತಾಯಗೊಂಡಿದೆ. ಹೀಗೆ ಬಿಗ್‌ಬಾಸ್ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.
ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್‌ಬಾಸ್ ಸೀಸನ್ 18 ಶುರುವಾಗಿದೆ. ಹೌದು, ಹಿಂದಿ ಬಿಗ್‌ಬಾಸ್ ಸೀಸನ್ 18 ಶುರುವಾಗಿದೆ. ಆದರೆ ಬಿಗ್‌ಬಾಸ್ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ.
ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್‌ಬಾಸ್ ಸೀಸನ್ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್‌ಬಾಸ್ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
BIG BOSS
BBK 11: ಜಗದೀಶ್ ಅಲ್ವಂತೆ! ಬಿಗ್ ಬಾಸ್ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!
ಬಿಗ್ ಬಾಸ್ ಕನ್ನಡ ಸೀಸನ್ 11 ಮೊದಲ ವಾರ ಪೂರ್ತಿಗೊಂಡು ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಯಮುನಾ ಮನೆಯಿಂದ ಹೊರಬಂದಿದ್ದಾರೆ. ಹೊರ ಬಂದ ಬಳಿಕ ಬಿಗ್‌ಬಾಸ್ ಕುರಿತು ಮಾತನಾಡಿದ್ದಾರೆ. ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತುಂಬಾ ಡೇಂಜರಸ್ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್ ಜಗದೀಶ್ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್ ಮಾಡುವವರು ಎಂದು ಹೇಳಿದ್ದಾರೆ.
ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ. ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್ ಜಗದೀಶ್ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.
- BIG BOSS4 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS7 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS5 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS6 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ