Connect with us

LATEST NEWS

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಛೋಪ್ರಾ- ಭಾರತದ ಹೊಸ ದಾಖಲೆ

Published

on

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವಮಟ್ಟದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದು, ಭಾರತದ ಧ್ವಜವನ್ನು ಎತ್ತಿ ಹಿಡಿದು ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನವ ದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವಮಟ್ಟದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದು, ಭಾರತದ ಧ್ವಜವನ್ನು ಎತ್ತಿ ಹಿಡಿದು ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಚಿನ್ನದ ಹುಡುಗ ಖ್ಯಾತಿಯ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.17 ಮೀ ದೂರ ಅತೀ ದೊಡ್ಡ ಎಸೆತದೊಂದಿಗೆ ಚಿನ್ನದ ಪದಕ ಗೆದ್ದು ಮೊದಲ ಭಾರತೀಯ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಪಂದ್ಯದ ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್ ಚೋಪ್ರಾ, 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.


ಇದೇ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರೆ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಕಂಚಿನ ಪದಕ ಪಡೆದರು.

Click to comment

Leave a Reply

Your email address will not be published. Required fields are marked *

LATEST NEWS

ಪ್ರಜ್ವಲ್ ರೇವಣ್ಣ ಪ್ರಕರಣ : ಮೌನ ಮುರಿದ ಪ್ರಧಾನಿ ಮೋದಿ; ಹೇಳಿದ್ದೇನು?

Published

on

ನವದೆಹಲಿ : ಸದ್ಯ ದೇಶದಲ್ಲಿ ಹಾಸನ ಜೆಡಿಎಸ್ – ಬಿಜೆಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದೀಗ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.


ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರ ಮಾನ, ಪ್ರಾಣದ ವಿಚಾರದಲ್ಲಿ ಪ್ರಜ್ವಲ್‌ ರೇವಣ್ಣ ಅಂತವರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು ಮತ್ತು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ಇಡಬೇಕಿತ್ತು. ರಾಜಕೀಯ ಲಾಭ ಪಡೆದುಕೊಳ್ಳಲು ಆರೋಪಿ ದೇಶ ಬಿಟ್ಟು ಹೋಗುವವರೆಗೂ ಸುಮ್ಮನಿದ್ದು, ವ್ಯರ್ಥ ಕಾಲಹರಣ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅವಧಿಯ ವೀಡಿಯೋ :

ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕ್ರಮ ಜರುಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ. ಸಹಸ್ರಾರು ವಿಡಿಯೋಗಳ ಇವೆ ಎಂದಾದರೆ ಅವು ಜೆಡಿಎಸ್ ಪಕ್ಷ, ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ ಎನ್ನುವುದು ತಿಳಿದುಬಂದಿದೆ. ಅವರು ಅಧಿಕಾರದಲ್ಲಿ ಇದ್ದಾಗ ಆ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡು, ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಆ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ವೀಡಿಯೋ ಪ್ರಕರಣದಲ್ಲಿ ಎಲ್ಲವೂ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಆರೋಪಿಸಿದ್ದಾರೆ.

Continue Reading

DAKSHINA KANNADA

ಆಂಬುಲೆನ್ಸ್ – ಕಾರು ನಡುವೆ ಭೀಕರ ಅ*ಪಘಾತ..! ಮೂವರ ದುರ್ಮ*ರಣ.!

Published

on

ಕಾಸರಗೋಡು: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ನಡೆದಿದೆ.

accident

ಕಾರಿನಲ್ಲಿದ್ದ ತ್ರಿಶೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

 ಮುಂದೆ ಓದಿ..; ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

accident

 

Continue Reading

FILM

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

Published

on

ಮಂಗಳೂರು/ ಮುಂಬೈ : ಸದ್ಯ ಡೀಪ್ ಫೇಕ್ ಹಾವಳಿ ಮುಗಿಯುವಂತೆ ಕಾಣುತ್ತಿಲ್ಲ. ಅನೇಕ ನಟ – ನಟಿಯರು ಡೀಪ್ ಫೇಕ್ ನಿಂದ ತೊಂದರೆ ಅನುಭವಿಸಿದ್ದಾರೆ. ಕತ್ರೀನಾ ಕೈಫ್, ರಶ್ಮಿಕಾ ಮಂದಣ್ಣ, ಕಾಜಲ್, ಅಲಿಯಾ ಭಟ್ ರ ಡೀಪ್ ಫೆಕ್ ವೀಡಿಯೋ ವೈರಲ್ ಆಗಿತ್ತು. ಕೇವಲ ನಟಿಯರದ್ದು ಮಾತ್ರವಲ್ಲ, ನಟರಾದ ಅಮೀರ್ ಖಾನ್, ಅಲ್ಲು ಅರ್ಜುನ್ ಚುನಾವಣಾ ಪ್ರಚಾರದ ಫೇಕ್ ವೀಡಿಯೋಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಚಿತ್ರರಂಗದ ಅನೇಕರು ಧ್ವನಿ ಎತ್ತಿದ್ದರೂ ಕೂಡ. ಆದ್ರೆ, ಇಲ್ಲಿಗೆ ಮುಕ್ತಾಯವಾಗಿಲ್ಲ. ಇದೀಗ ಮತ್ತೆ ಡೀಪ್ ಫೇಕ್ ಹಾವಳಿ ಮುಂದುವರೆದಿದೆ.

 

ಮತ್ತೆ ಅಲಿಯಾ ಭಟ್ ಡೀಪ್ ಫೇಕ್ :

ಡೀಪ್ ಫೆಕ್ ಗೆ ಮತ್ತೆ ಅಲಿಯಾ ಭಟ್ ಬಲಿಯಾಗಿದ್ದಾರೆ. ಅಲಿಯಾ ಭಟ್ ಹೊಸ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದುವರೆಗೆ ಬೇರೆ ಯಾರು ಯಾರದೋ ವೀಡಿಯೋ ಗಳಿಗೆ ನಟಿಯರ ಮುಖವನ್ನು ಕೂರಿಸಿ ವೀಡಿಯೋ ಮಾಡಲಾಗುತ್ತಿತ್ತು. ಇದೀಗ ನಟಿಯೊಬ್ಬಳ ವೀಡಿಯೋಗೆ ನಟಿ ಮುಖವನ್ನು ಬಳಸಲಾಗಿದೆ. ಹೌದು, ನಟಿಯೊಬ್ಬಳ ಮುಖ ಎಡಿಟ್ ಮಾಡಿ ಅಲ್ಲಿ ಅಲಿಯಾ ಭಟ್ ಮುಖವನ್ನು ಬಳಸಲಾಗಿದೆ.

ಆ ನಟಿಯರು ಯಾರು?


ಇಷ್ಟರ ವರೆಗೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಬೇರೆಯವರ ದೇಹಕ್ಕೆ ಸೆಲೆಬ್ರಿಟಿಗಳ ಮುಖ ಜೋಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈಗ ಬೇರೊಬ್ಬ ನಟಿಯ ವೀಡಿಯೋ ಬಳಸಿಕೊಂಡಿದ್ದಾರೆ. ಈ ಡೀಪ್ ಫೇಕ್ ವೀಡಿಯೋದ ಅಸಲಿ ವೀಡಿಯೋ ನಟಿ ವಾಮಿಕಾ ಅವರದ್ದು. ವಾಮಿಕ ಬಾಲಿವುಡ್ ನಟಿ. 2007 ರಿಂದ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಯಾವುದೂ ಆಕೆಗೆ ಹೆಸರು ಕೊಟ್ಟಿಲ್ಲ. ಈಗ ಡೀಪ್ ಫೇಕ್ ಪ್ರಕರಣದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

ನಟಿ ವಾಮಿಕಾ ವೀಡಿಯೋಗೆ ಅಲಿಯಾ ಭಟ್ ಫೇಸ್ :

ನಟಿ ವಾಮಿಕ ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಅವರು, ಕೆಂಪು ಸೀರೆಯುಟ್ಟು ಮಿಂಚಿದ್ದರು. ನೆಟ್ ಫ್ಲಿಕ್ಸ್ ಸರಣಿ ‘ಹೀರಾಮಂಡಿ’ ಸ್ಕ್ರೀನಿಂಗ್ ಗಾಗಿ ವಾಮಿಕಾ ಕೆಂಪು ಸೀರೆಯುಟ್ಟಿದ್ದರು.
ಇದೀಗ ಈ ವೀಡಿಯೋಗೆ ಅಲಿಯಾ ಭಟ್ ಮುಖ ಬಳಸಿ ವೈರಲ್ ಮಾಡಲಾಗಿದೆ.

ಆಲಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆಲಿಯಾ ಮುಖ ನೀವು ಬಳಸಿರುವುದು ಕಾನೂನುಬದ್ಧವೇ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಕಮೆಂಟ್ಸ್ ಬಾಕ್ಸ್ ನಲ್ಲಿ ಆಲಿಯಾ ಭಟ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

Continue Reading

LATEST NEWS

Trending