Wednesday, May 18, 2022

ನಾರಾಯಣ ಗುರುವಿಗೆ ಗೌರವ ನೀಡುವ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಇದೆ: ಸಚಿವ ಸುನೀಲ್‌ ಕುಮಾರ್‌

ಮಂಗಳೂರು: ನಾರಾಯಣ ಗುರುವಿಗೆ ಗೌರವ ನೀಡುವ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಇದೆ. ನಾರಾಯಣ ಗುರುವಿಗೆ ಟ್ಯಾಬ್ಲೋ ಮಾಡಿ ಗೌರವ ಕೊಡಬೇಕಾಗಿಲ್ಲ.

ನಮ್ಮ ವ್ಯಕ್ತಿಗತ ನಡವಳಿಯಲ್ಲಿ ಅದು ಇದೆ. ಇನ್ನೂ ಗೌರವ ಕೊಡುವುದಿದ್ದರೆ ನಾವು ಮಾಡುತ್ತೇವೆ. ಆದರೆ ರಾಜಕಾರಣ ಮಾಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.


ಗಣರಾಜ್ಯೋತ್ಸವದ ಪರೇಡ್‌ ಬಳಿಕ ಮಾತನಾಡಿ, ಲೇಡಿಹಿಲ್‌ ಸರ್ಕಲ್‌ಗೆ ನಾರಾಯಣಗುರು ಹೆಸರು ಸೂಚಿಸಿದಾಗ ಅಂದು ಕಾಂಗ್ರೆಸ್‌ನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವತ್ತು ಅದೇ ನಾಯಕರು ಅಪಮಾನ ಆಗಿದೆ ಎಂದು ಹೇಳುತ್ತಿದ್ದಾರೆ.

ಇಂದು ನಡೆಯುವ ಸ್ವಾಭಿಮಾನದ ನಡಿಗೆ ಯಾರ ವಿರುದ್ಧವೂ ಅಲ್ಲ. ಹಾಗೂ ಯಾರನ್ನೂ ದ್ವೇಷಿಸಿ ಅಲ್ಲ ಎಂದಿದ್ದಾರೆ. ಅದಕ್ಕೆ ನಾವು ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಪ್ಪಿನಂಗಡಿ: ನಿಯಂತ್ರಣ ತಪ್ಪಿ ಬಸ್‌ ಪಲ್ಟಿ

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ಕಳೆದುಕೊಂಡು ಖಾಸಗಿ ಬಸ್ ರಸ್ತೆ ಬದಿಗೆ ಉರುಳಿದ ಬಿದ್ದ ಘಟನೆ ಉಪ್ಪಿನಂಗಡಿಯ ನೀರಕಟ್ಟೆ ಎಂಬಲ್ಲಿ ಸಂಭವಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ 'ಭಾರತಿ' ಸಂಸ್ಥೆಗೆ ಸೇರಿದ ಖಾಸಗಿ ಬಸ್ ಪಲ್ಟಿ ಹೊಡೆದಿದೆ....

ಉಡುಪಿ: ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ದಾರುಣ ಸಾವು

ಉಡುಪಿ: ಬೈಕ್ ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ಮೃತಪಟ್ಟಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ನಡದಿದೆ.ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ...

ಬಂಟ್ವಾಳ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

ಬಂಟ್ವಾಳ: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ಇಂದು ನಡೆದಿದೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಮೃತಳನ್ನು ವಿಠಲ್ ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ...