Connect with us

    DAKSHINA KANNADA

    ಜನಮನ ಗೆದ್ದ ‘ನಮ್ಮ ಕುಡ್ಲ’ ವಾಹಿನಿಯ 25ನೇ ವರ್ಷದ ‘ಗೂಡುದೀಪ ಸ್ಪರ್ಧೆ’

    Published

    on

    ಮಂಗಳೂರು : ‘ನಮ್ಮ ಕುಡ್ಲ’ ವಾಹಿನಿ ಆಯೋಜಿಸಿದ್ದ 25ನೇ ವರ್ಷದ ಗೂಡುದೀಪ ಸ್ಪರ್ಧೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಿನ್ನೆ(ಅ.30) ವೈಶಿಷ್ಟಪೂರ್ಣವಾಗಿ ನಡೆಯಿತು. ಕುದ್ರೋಳಿ ಕ್ಷೇತ್ರದ ನವೀಕರಣ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಮತ್ತು ಅವರ ಧರ್ಮಪತ್ನಿ ಮಾಲತಿ ಜೆ. ಪೂಜಾರಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಗೂಡುದೀಪವನ್ನು ಏರಿಸಿ ದೀಪ ಉರಿಸುವ ಮೂಲಕ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು.

    ಜನಾರ್ದನ ಪೂಜಾರಿ ಅವರು ಎಲ್ಲರಿಗೂ ದೀಪಾವಳಿಯ ಶುಭ ಕೋರಿದರು. ದೀಪಾವಳಿಯ ಸಂದೇಶ ನೀಡಿದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ನಮ್ಮಕುಡ್ಲ ವಾಹಿನಿ 25 ವರ್ಷಗಳಿಂದ ಗೂಡುದೀಪ ಸ್ಪರ್ಧೆ ಆಯೋಜಿಸಿದ ಕಾರಣ ಇಂದಿಗೂ ಗೂಡುದೀಪದ ಬಗ್ಗೆ ಜನರಲ್ಲಿ ಆಸಕ್ತಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ಕರಾವಳಿಯ ಕಲೆ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಮ್ಮ ಕುಡ್ಲದಿಂದ ಆಗುತ್ತಿದೆ. ಇದರ ಜತೆಗೆ ಇನ್ನಷ್ಟು ಹೆಚ್ಚಿನ ಕಾರ್ಯ ಕರ್ಕೇರ ಸಹೋದರರಿಂದ ಆಗಲಿ ಎಂದು ಶುಭ ಹಾರೈಸಿದರು.

    ಮೇಯರ್ ಮನೋಜ್ ಕೋಡಿಕಲ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ದಾಸ್ ಬೋಳಾರ್, ಕುದ್ರೋಳಿ ಕ್ಷೇತ್ರದ ಹರಿಕೃಷ್ಣ ಬಂಟ್ವಾಳ, ಡಾ. ಬಿ.ಜಿ.ಸುವರ್ಣ,ಮಾಜಿ ಸಚಿವ ಅಭಯಚಂದ್ರ ಜೈನ್, ಕೆಎಂಎಫ್ ನಿರ್ದೇಶಕ ಸುಚರಿತ ಶೆಟ್ಟಿ ಹಾಗೂ ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

    ನಮ್ಮಕುಡ್ಲ ನಿರ್ದೇಶಕರಾದ ಕರ್ಕೇರ ಸಹೋದರರು ಅತಿಥಿಗಳನ್ನು ಸ್ವಾಗತಿಸಿ ಗೌರವ ಸಲ್ಲಿಸಿದರು. ಬಾಸ್ಕರ್ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ ಹಾಗೂ ಎಂ.ಎಸ್. ಕೋಟ್ಯಾನ್  ಕಾರ್ಯಕ್ರಮ ನಿರ್ವಹಿಸಿದರು.

    ದೇಗುಲದ ಅಂಗಣದಲ್ಲಿ ಬೆಳಕಿನ ಚಿತ್ತಾರ :

    ಗೂಡು ದೀಪ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಸಾರ್ವಜನಿಕರು ಗೂಡು ದೀಪಗಳನ್ನು ತಂದು ಪ್ರದರ್ಶಿಸಿದರು. ದೇವಸ್ಥಾನದ ಪ್ರಾಂಗಣದಲ್ಲಿ ಮತ್ತು ಸುತ್ತ ಮುತ್ತ ವಿವಿಧ ಆಕರ್ಷಕ ಗೂಡು ದೀಪಗಳನ್ನು ನೇತು ಹಾಕಲಾಗಿತ್ತು. ಕತ್ತಲಾಗುತ್ತಿದ್ದಂತೆ ವಿದ್ಯುತ್ ದೀಪಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದಾಗ ಎಲ್ಲೆಲ್ಲೂ ಜಗ ಮಗಿಸುವ ಗೂಡುದೀಪಗಳ ಅಲಂಕಾರದಿಂದಾಗಿ ದೇವಳದ ಆವರಣದಲ್ಲಿ ಬೆಳಕಿನ ಚಿತ್ತಾರ ಮೂಡಿ ಬಂತು. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿತು.

    ಪ್ರಶಸ್ತಿ ಪ್ರದಾನ : 

    ಕಾರ್ಯಕ್ರಮದ ಸಮಾರೋಪದಲ್ಲಿ ನಮ್ಮಕುಡ್ಲದಿಂದ ಸಾಧಕರಿಗೆ ಕೊಡಮಾಡುವ 2024ರ ಪ್ರಶಸ್ತಿ ಪ್ರದಾನ ಮತ್ತು ಗೂಡು ದೀಪ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ತುಳನಾಡಿನ ಹೆಮ್ಮೆಯ ಕುವರ ಚಿತ್ರ ನಟ ಸುಮನ್ ತಲ್ವಾರ್ ಅವರಿಗೆ ‘ನಮ್ಮಕುಡ್ಲ’ ಪ್ರಶಸ್ತಿ, ಕೊಲ್ಲಿ ರಾಷ್ಟ್ರಗಳಲ್ಲಿ ತುಳು ಕಂಪು ಪಸರಿಸಿದ ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಸಿದ ಖ್ಯಾತ ಸಂಘಟಕ ಸರ್ವೋತ್ತಮ ಶೆಟ್ಟಿ ಅವರಿಗೆ ‘ನಮ್ಮ ತುಳುವೆರ್‌’ ಪ್ರಶಸ್ತಿ, ಎಂ. ವೇದ ಕುಮಾರ್ ಆಧ್ಯಕ್ಷರಾಗಿರುವ ಬೆಂಗಳೂರಿನ ಬಿಲ್ಲವ ಅಸೋಸಿಯೇಶನ್‌ಗೆ ಬಿ.ಪಿ.ಕರ್ಕೇರಾ ಸೇವಾ ಪ್ರಶಸ್ತಿ, ಶಶಿಲೇಖಾ ಬಾಲಕೃಷ್ಣ ಅವರಿಗೆ ‘ಲಕ್ಷ್ಮೀ ಕರ್ಕೇರ ಸೇವಾ ಪ್ರಶಸ್ತಿ’, ಮಂಗಳೂರು ದಸರಾ ಮೆರವಣಿಗೆಯಲ್ಲಿ ವೀಣಾಪಾಣಿಯಾಗಿ ನಿರಂತರ ಹತ್ತು ಗಂಟೆಗಳ ಕಾಲ ಟ್ಯಾಬ್ಲೋದಲ್ಲಿ ಭಾಗವಹಿಸಿದ ಪುಟಾಣಿ ತ್ರಿಷ್ಣಾ ನವೀನ್ ಅವರಿಗೆ ‘ನಮ್ಮ ಕುಡ್ಲ ಬಾಲ ಪ್ರತಿಭಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

    ರೂಪ್ಸಾದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷ ಪ್ರಶಸ್ತಿ ಪಡೆದ ಶಾರದಾ ವಿದ್ಯಾಲಯದ ಶಿಕ್ಷಕ ದಯಾನಂದ ಕಟೀಲ್ ಅವರಿಗೆ ಗೌರವ ಸನ್ಮಾನ ನೆರವೇರಿತು.

    ಇದನ್ನೂ ಓದು : ಅಯೋಧ್ಯೆಯಲ್ಲಿ ದೀಪೋತ್ಸವ ವೈಭವ: ಏಕಕಾಲದಲ್ಲಿ ಬೆಳಗಿದ 25 ಲಕ್ಷ ಹಣತೆ! 2 ಗಿನ್ನೆಸ್ ವಿಶ್ವದಾಖಲೆ

    ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ಆಶೀರ್ವಚನ ನೀಡಿದರು. ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ,  ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಿರಿಯ ಕಲಾವಿದ ಲಕ್ಷ್ಮಣ್ ಮಲ್ಲೂರು,ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಪದಾಧಿಕಾರಿಗಳು ಅತಿಥಿಗಳಾಗಿದ್ದರು. ನಮ್ಮಕುಡ್ಲ ವಾಹಿನಿಯ ನಿರ್ದೇಶಕರಾದ ಹರೀಶ್ ಕರ್ಕೇರ, ಮೋಹನ್ ಕರ್ಕೇರ, ಲೀಲಾಕ್ಷ ಕರ್ಕೇರ, ಸುರೇಶ್ ಕರ್ಕೇರ, ಸಂತೋಷ್ ಕರ್ಕೇರ ಅವರು ಉಪಸ್ಥಿತರಿದ್ದರು.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ; ವ್ಯಕ್ತಿ ಸಾ*ವು

    Published

    on

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ ಹೊಡೆದು ಪಾದಚಾರಿ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ತೊಕ್ಕೊಟ್ಟು ಆಡಂಕುದ್ರು ಸಮೀಪ ಇಂದು ಮಧ್ಯಾಹ್ನ(ಅ.31) ಸಂಭವಿಸಿದೆ. ಫರಂಗಿಪೇಟೆ ತುಂಬೆ ರೊಟ್ಟಿಗುಡ್ಡೆ ಮನೆಯ ಆದಂ (64) ಸಾ*ವನ್ನಪ್ಪಿದವರು.

    ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಲಾರಿ  ಆಡಂಕುದ್ರು ಸಮೀಪ ಪಾದಚಾರಿ ಆದಂ ಗೆ ಡಿ*ಕ್ಕಿ ಹೊಡೆದು, ನಿಯಂತ್ರಣ ತಪ್ಪಿದ ಪರಿಣಾಮ, ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಇಲೆಕ್ಟ್ರಿಕ್  ಕಾರಿಗೆ ಡಿ*ಕ್ಕಿ ಹೊಡೆದಿದೆ. ಬಳಿಕ ಅಂಗಡಿಯೊಂದರ ನಾಮಫಲಕಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ.  ಕಾರಿನಲ್ಲಿ ಮಕ್ಕಳು ಕುಳಿತಿದ್ದು, ಅದೃಷ್ಟವಶಾತ್ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

    ಇದನ್ನೂ ಓದಿ : ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    ಎದುರುಭಾಗದಲ್ಲಿ ಬಸ್ಸೊಂದು ಕೆಟ್ಟು ನಿಂತಿದ್ದು, ಅದರ ಪ್ರಯಾಣಿಕರನ್ನು ಇನ್ನೊಂದು ಬಸ್ಸಿಗೆ ಹತ್ತಿಸಲಾಗುತಿತ್ತು. ಆದಂ ಬಸ್ಸಲ್ಲಿದ್ದವರೋ ಅಥವಾ ಪಾದಚಾರಿಯೋ ಅನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.  ಅಪಘಾ*ತದ ತಕ್ಷಣ ಟೆಂಪೋ ಚಾಲಕ ಸ್ಥಳದಿಂದ ತೆರಳಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಬಳಿಕ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಉಳ್ಳಾಲ : ಗಾಂ*ಜಾ ಮಾರಾಟ ಮಾಡುತ್ತಿದ್ದ ಆರೋಪ; ದಂಪತಿಯ ಬಂಧನ

    Published

    on

    ಉಳ್ಳಾಲ : ಗಾಂ*ಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ಕಿನ್ಯ ಗ್ರಾಮದ ರಹ್ಮತ್ ನಗರದ ಎಲ್ಲ್ ಪಡ್ಪು ಎಂಬಲ್ಲಿ ನಡೆದಿದೆ.

    ನಝೀರ್ ಹಾಗೂ ಆತನ ಪತ್ನಿ ಅಸ್ಮ ಬಂಧಿತರು. ಅವರು ಕಾರಿನಲ್ಲಿ ಗಾಂ*ಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 6.800 ಕೆಜಿ ಗಾಂಜಾ ಹಾಗೂ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ : ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    ದಂಪತಿ ಮನೆ ಮತ್ತು ಕಾರಿನಲ್ಲಿ ಗಾಂ*ಜಾವನ್ನು ಶೇಖರಿಸಿ ಇಟ್ಟು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 10 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    Published

    on

    ಸುರತ್ಕಲ್ :‌ ಸಹಕರಿಸದಿದ್ದರೆ 24 ತುಂಡುಗಳನ್ನಾಗಿ ಮಾಡುವೆ ಎಂದು ಯುವತಿಯೊಬ್ಬಳಿಗೆ ಬೆದರಿಕೆಯೊಡ್ಡಿದ್ದ ಪ್ರಕರಣ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕ ಶಾರಿಕ್‌ ಗೆ ಜಾಮೀನು ಮಂಜೂರಾಗಿದೆ.

    ಶಾರಿಕ್‌ ತನ್ನ ಮನೆಯ ಸಮೀಪದಲ್ಲಿ ಅಂಗಡಿ ಹೊಂದಿದ್ದ ಯುವತಿಯ ಫೇಸ್ ಬುಕ್ ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿ ಅ.22 ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ.23ರಂದು ಹಿಂದೆ ಕಳುಹಿಸಿದ್ದರು.

    ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು ಎನ್ನಲಾಗಿದ್ದು, ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಇದನ್ನೂ ಓದಿ : ಅಮೆರಿಕದಲ್ಲಿ ನಾಲ್ಕು ಪೆಪ್ಸಿಕೋ ಫ್ಯಾಕ್ಟರಿಗೆ ಬೀಗ – ಉದ್ಯೋಗ ನಷ್ಟ

    ಆರೋಪಿ ಶಾರಿಕ್ ನ ವಿರುದ್ಧ ಭಾರತೀಯ ದಂಡ ಸಂಹಿತೆ 78(1)(i), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದ ಸುರತ್ಕಲ್‌ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪ್ರಕರಣ ಸಂಬಂಧ ಮಂಗಳವಾರ(ಅ.29) ವಿಚಾರಣೆ ನಡೆಸಿದ ಮಂಗಳೂರು  2ನೇ ಜೆಎಂಎಫ್‌ಸಿ ನ್ಯಾಯಾಲಯ ಶಾರಿಕ್‌ ಗೆ ಜಾಮೀನು ಮಂಜೂರು ಮಾಡಿದೆ.

    Continue Reading

    LATEST NEWS

    Trending