Monday, July 4, 2022

ಮೈಸೂರು: ಅತ್ಯಾಚಾರ ಪ್ರಕರಣ ಬೇಧಿಸಲು ಹಿಂಟ್‌ ಕೊಟ್ಟ ‘ಬಸ್‌ ಟಿಕೆಟ್‌’

ಮೈಸೂರು: ಇಲ್ಲಿ ನಡೆದ ಅತ್ಯಾಚಾರ ಪ್ರಕರಣ ನಡೆದ 85 ಗಂಟೆಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಬಾಲಾಪರಾಧಿ ಆಗಿದ್ದಾನೆ ಎಂದು ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಮಾಹಿತಿ ನೀಡಿದ್ದಾರೆ.

ಯಾವುದೇ ಪ್ರಕರಣದಲ್ಲಿ ಆರೋಪಿಗಳು ಯಾವುದಾದರೂ ಸುಳಿವು ಬಿಟ್ಟು ಹೋಗುತ್ತಾರೆ ಎಂಬ ಮಾತಿದೆ. ಅದರಂತೆ ಇಲ್ಲೂ ಸಹ ಒಂದು ಸಣ್ಣ ಸುಳಿವನ್ನು ಆರೋಪಿಗಳು ಬಿಟ್ಟು ಹೋಗಿದ್ದರು.

ಅದರ ಜಾಡು ಹಿಡಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದರು. ಅದರ ಮಾಹಿತಿ ಇಲ್ಲಿದೆ.


ಘಟನಾ ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ತಮಿಳುನಾಡಿನ ಒಂದು ಬಸ್ ಟಿಕೆಟ್ ಸಿಕ್ಕಿತ್ತು. ಇದರ ಆಧಾರದಲ್ಲಿ ಆರೋಪಿಗಳು ತಮಿಳುನಾಡಿನವರು ಆಗಿರಬಹುದು ಎಂದು ಅರಿತ ಪೊಲೀಸರು ಟವರ್ ಲೊಕೇಶನ್ ನೆರವು ಪಡೆದಿದ್ದರು. ಸ್ಥಳದಲ್ಲಿದ್ದ ಸಾವಿರಾರು ಟವರ್ ಲೊಕೇಶನ್ ಗಳಲ್ಲಿ ಫಿಲ್ಟರ್ ಮಾಡಿದ್ದರು.
ಅಷ್ಟೇ ಅಲ್ಲದೆ ಆರೋಪಿಗಳು ತಮಿಳು ಭಾಷೆ ಮಾತನಾಡುತ್ತಿದ್ದರು ಎಂದು ಯುವಕ ಮಾಹಿತಿ ನೀಡಿದ್ದ. ಘಟನೆಯ ಸಂತ್ರಸ್ಥ ಯುವತಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ.

ಆದರೆ ಆ ಯುವತಿ ತನ್ನ ಸ್ನೇಹಿತೆಯೊಬ್ಬರ ಬಳಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು.

ಈ ಮಾಹಿತಿ ಪಡೆದ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದರು.

ಹೀಗಾಗಿ ತಮಿಳುನಾಡಿನತ್ತ ಹೊರಟ ಪೊಲೀಸರು ಸತ್ಯಮಂಗಲದಲ್ಲಿ ಐವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನೂ ಓರ್ವ ಆರೋಪಿಗಾಗಿ ಪೊಲೀಸರು ಶೋಧ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಎಕ್ಕೂರಿನಲ್ಲಿ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು-ಮೂವರಿಗೆ ಗಾಯ

ಮಂಗಳೂರು: ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಎಕ್ಕೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ.ನಿನ್ನೆ ಮಧ್ಯರಾತ್ರಿ...

ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನ ಬಾಳಿಗೆ ಬೆಳಕಾದ ಸಮಾಜ ಸೇವಕ ಈಶ್ವರ್ ಮಲ್ಪೆ

ಉಡುಪಿ: ಸೆಗಣಿ ತಿಂದು ಬದುಕುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಉಡುಪಿಯ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಹೊಸ ಬದುಕು ನೀಡಿದ ಉಡುಪಿ ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಕಾರವಾರ...

ಬೈಂದೂರಿನಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ಸರ್ವೆ ನಂಬ್ರ 170 ರಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ (ಎಸ್.ಎಲ್.ಆರ್.ಎಂ) ನಿರ್ಮಿಸಬಾರದು ಎಂದು ಸ್ಥಳೀಯರು ಬೃಹತ್ ಪ್ರತಿಭಟನೆ...