DAKSHINA KANNADA
ಸಂತ್ರಸ್ತೆ ಖತೀಜ ಜಾಸ್ಮಿನ್ ಗೆ ವೈದ್ಯರುಗಳಿಂದ ಅನ್ಯಾಯದ ಆರೋಪ : ಹೋರಾಟ ಮುಂದುವರಿಯಲಿದೆಯೆಂದ ಮುಸ್ಲಿಮ್ ಒಕ್ಕೂಟ
ಮಂಗಳೂರು : ಸಂತ್ರಸ್ತೆ ಖತೀಜ ಜಾಸ್ಮಿನ್ ಗೆ ವೈದ್ಯರುಗಳಿಂದ ಆದ ಅನ್ಯಾಯದ ವಿರುದ್ದ ಹೋರಾಟ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಮುಸ್ಲಿಮ್ ಒಕ್ಕೂಟ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟದ ಅಧ್ಯಕ್ಷರಾದ ಕೆ ಅಶ್ರಫ್. ಈ ಕ್ಲಿಷ್ಟಕರ ಸಂದರ್ಭದಲ್ಲಿ ವೈದ್ಯಕೀಯ ಕನಿಷ್ಟ ನಿಷ್ಟೆಯನ್ನು ಪಾಲಿಸಲು ವಿಫಲವಾದ ವೈದ್ಯಕೀಯ ಸಮುದಾಯ ಸಂತ್ರಸ್ತೆ ಗರ್ಭಿಣಿ ಖತೀಜ ಜಾಸ್ಮಿನ್ ಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿಸಿದ ರೀತಿ ಅಮಾನವೀಯ ಕ್ರತ್ಯವಾಗಿದೆ.
ಮಂಗಳೂರಿನ ಕೆಲವು ಆಸ್ಪತೆಗಳು ಮತ್ತು ವೈದ್ಯರು ಮೆಡಿಕಲ್ ಮಾಫಿಯಾ ಸ್ರಷ್ಟಿ ಮಾಡಿರುವುದು ದ.ಕ. ಜಿಲ್ಲೆಗೆ ಅವಮಾನ.
ವೈದ್ಯಕೀಯ ನಗರ ಎಂದೇ ಕರೆಯಲ್ಪಡುವ ಮಂಗಳೂರು ಮುಂದಿನ ದಿನಗಳಲ್ಲಿ ವೈದ್ಯೋ – ಡಕಾಯಿತಿ ನಗರ ಆಗದಿರಲಿ. ಕೆಲವು ಕುಖ್ಯಾತಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಹಲವು ನಿಷ್ಟ್ಟಾವಂತ ವೈದ್ಯರ ಸೇವೆಗಳಿಗೆ ಕೂಡ ಕೆಟ್ಟ ಹೆಸರು ಬರುವುವಂತಾಗಿರುವುದೂ ಖೇದಕರ.
ಖತೀಜ ಜಾಸ್ಮಿನ್ ಎಂಬ ತುಂಬು ಗರ್ಭಿಣಿಯನ್ನು ಅವಳು ಕೋರೋಣ ಪಾಸಿಟಿವ್ ಎಂಬ ಕಾರಣವೊಡ್ಡಿ ಡಾಕ್ಟರ್ ಪ್ರಿಯ ಬಲ್ಲಾಳ್ ರಿಂದ ಹಿಡಿದು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಿರ್ಲಕ್ಷಿಸಿ ರುವುದು ಖಂಡನೀಯ, ಮುಂದುವರಿದು ಡಾ.ಪ್ರಿಯ ಬಲ್ಲಾಳ್ ರ ಸಹ ವೈದ್ಯರುಗಳು ಕೂಡ ರೋಗಿಯಲ್ಲಿ ಮರಣ ಭಯ ಹುಟ್ಟಿಸಿ, ರೋಗಿ ಮತ್ತು ಅವಳ ಕುಟುಂಬದವರಿಗೆ ಪ್ರಾಣ ಭಯ ಹುಟ್ಟಿಸಿ, ಬೆದರಿಸಿರುತ್ತಾರೆ, ರೋಗಿ ಸಂಪರ್ಕಿಸಿದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನಿರಾಕರಿಸಿ ಅಲ್ಲಿ ಇಲ್ಲಿ ಅಲೆದಾಡಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ವೈದ್ಯರಾದ ಡಾ. ಪ್ರಿಯಾ ಬಲ್ಲಾಳ್ ಈ ಸಂತ್ರಸ್ತೆ ಯನ್ನು ಆ ಪರಿ ನಿರ್ಲಕ್ಷಿಸಲು ಪ್ರಯತ್ನಿಸಿದ ಕಾರಣವೇನು?, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ತನಿಖೆ ನಡೆಸಬೇಕು. ವೈದ್ಯರು ನಡೆಸಿದ ಈ ಗಂಭೀರ ಅಪರಾಧ ಕೃತ್ಯದ ವಿರುದ್ಧ ಮುಸ್ಲಿಮ್ ಒಕ್ಕೂಟ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರಿಸಲಿದೆ.
ಈಗಾಗಲೇ ಸಂತ್ರಸ್ತೆ ಮತ್ತು ಸಂಘಟನೆಗಳು ಆರಂಭಿಸಿದ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸು ಇಲಾಖೆ ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಸ್ಪತ್ರೆ ಮತ್ತು ವೈದ್ಯರ ಮನೆ, ಕ್ಲಿನಿಕ್ ಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅಶ್ರಫ್ ಅವರು ಹೇಳಿಕೆ ನೀಡಿದ್ದಾರೆ.
ಏನು ಈ ವಿಷಯ..?
ಡಾ.ಪ್ರಿಯಾ ಬಲ್ಲಾಳ್ ಎಂಬುವವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತೆ, ಸುಮಾರು ಒಂಭತ್ತು ಆಸ್ಪತ್ರೆಗಳಿಗೆ ಅಲೆದಾಡಿದ್ದೇನೆ. ಮೇ 20ರ ಮಧ್ಯಾಹ್ನದಿಂದ ರಾತ್ರಿಯವರೆಗೂ ಅಲೆದಾಡಿದ್ದು, ಮೇ 21ರ ಬೆಳಗಿನ ಜಾವ ಸಿಸೇರಿಯನ್ ಮೂಲಕ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಹೀಗಾಗಿ ವೈದ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಸಂತ್ರಸ್ತೆ ಕುಟುಂಬ ನಿರ್ಧಾರ ಮಾಡಿದ್ದು, ಕೇಂದ್ರ, ರಾಜ್ಯ ಆರೋಗ್ಯ ಸಚಿವರಿಗೂ ಈ ಕುರಿತು ಪತ್ರ ಬರೆದಿದ್ದು ಈ ಪ್ರಕರಣ ಇದೀಗ ತೀವ್ರ ಸ್ವರೂಪ ಪಡಯುತ್ತಿದೆ.
ವೈದ್ಯರು ಏನು ಹೇಳ್ತಾರೆ..?
ಘಟನೆಯ ಕುರಿತು ಇದೀಗ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ ನ ಸದಸ್ಯರು ಸುದ್ದಿಗೋಷ್ಠಿ ನಡೆಸಿ ದೂರುದಾರೆ ಮುಳಿಹಿತ್ಲು ನಿವಾಸಿ ಖತೀಜಾ ಜಾಸ್ಮಿನ್ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ತಮ್ಮಿಂದ ಯಾವುದೇ ಲೋಪಗಳಾಗಿಲ್ಲ ಎಂದಿದ್ದಾರೆ. ಸುದ್ದಿಗಾರರಿಗೆ ಮಾಹಿತಿ ನೀಡಿದ ಅಧ್ಯಕ್ಷ ಡಾ. ಕೆ. ಆರ್ ಕಾಮತ್, ಕೆಲವು ದಿನಗಳಿಂದ ಮಂಗಳೂರಿನ ವಿವಿಧ ಆಸ್ಪತ್ರೆಗಳ ಬಗ್ಗೆ ಮಾಡಲಾಗುತ್ತಿರುವ ಆರೋಪಗಳೆಲ್ಲರೂ ಸತ್ಯಕ್ಕೆ ದೂರವಾದ ವಿಚಾರಗಳಾಗಿವೆ.
ಪ್ರಸ್ತುತ ಕೊರೊನಾದ ಕಾಲ ಘಟ್ಟದಲ್ಲಿ ವೈದ್ಯರು ತಮ್ಮ ಕುಟುಂಬಿಕರಿಂದ ದೂರವಿದ್ದು, ತಮ್ಮ ರೋಗಿಗಳನ್ನು ಉಪಚರಿಸುವಲ್ಲಿ ನಿರತರಾಗಿದ್ದರೆ, ಕೆಲವರು ವೈದ್ಯರ ವಿರುದ್ಧವೇ ಆರೋಪಗಳನ್ನು ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.
ಮುಖ್ಯವಾಗಿ ಆಸ್ಪತ್ರೆ ಬೆಡ್‌ಗಳು, ಆಮ್ಲಜನಕದ ಪೂರೈಕೆ, ವೆಂಟಿಲೇಟರ್, ಐಸಿಯು, ಬೆಡ್ ಅಥವಾ ಮತ್ತಿತರ ಅಗತ್ಯ ಔಷಧಿಗಳು ಲಭ್ಯವಿಲ್ಲದೇ ಇದ್ದರೆ ವೈದ್ಯರನ್ನು ಗುರಿ ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಇನ್ನು ಜಾಸ್ಮಿನ್ ಅವರು ಆರೋಪ ಎಸಗಿರುವ ಡಾ ಪ್ರಿಯಾ ಬಲ್ಲಾಳ್, ಡಾ ಜಯಪ್ರಕಾಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದು, ಮಹಿಳೆ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ತಾನು ಹಣ ಮಾಡಲು ವೈದ್ಯಕೀಯ ವೃತ್ತಿಗೆ ಬಂದಿಲ್ಲ. ಸಮಾಜ ಸೇವೆ ಮಾಡಲು ಬಂದ ತನ್ನನ್ನು ಕಾಲರ್ ಪಟ್ಟಿ ಹಿಡಿದು ಗೂಂಡಾಗಿರಿ ಮಾಡುವ ಸಮಾಜವನ್ನು ಕಂಡು ನೊಂದಿದ್ದೇನೆ.
ಕೆಲಸವೇ ಬಿಟ್ಟು ಹೋಗಿ ಮತ್ತೆ ಕೃಷಿ ಕೆಲಸದಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಜಯಪ್ರಕಾಶ್ ನೊಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಡಾ ಸತೀಶ್ ಭಟ್, ಡಾ ಲಕ್ಷ್ಮಣ್ ಪ್ರಭು ಜಿ ಜಿ, ಕೆ ಆರ್ ಕಾಮತ್, ಡಾ ಯೂಸುಫ್ ಕುಂಬ್ಳೆ, ಡಾ ಮುರಳೀಧರ್ ಮೊದಲಾದವರಿದ್ದರು.
DAKSHINA KANNADA
ನೆಲ್ಯಾಡಿ : ಜಾಗದ ವಿಷಯಕ್ಕೆ ಜಗಳ; ಕತ್ತಿಯಿಂದ ವ್ಯಕ್ತಿಯ ಕಡಿದು ಗಲಾಟೆ ಅಂತ್ಯ
ನೆಲ್ಯಾಡಿ : ಜಾಗದ ವಿಷಯಕ್ಕೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ ಕೃಷಿಕರೋರ್ವನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ದ.ಕ.ಜಿಲ್ಲೆ ನೆಲ್ಯಾಡಿ ಸಮೀಪ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ.
ಪ್ರಗತಿಪರ ಕೃಷಿಕ ರಮೇಶ ಗೌಡ (51) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಮೇಶ್ ನ ಹತ್ತಿರದದ ಸಂಬಂಧಿ ಹರೀಶ್ ಆರೋಪಿಯಾಗಿದ್ದು, ಇಂದು (ನ.8) ಮುಸ್ಸಂಜೆ ಸರಿಸುಮಾರು 7 ಗಂಟೆ ವೇಳೆ ಕೃತ್ಯ ಎಸಗಿದ್ದಾನೆ.
ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
DAKSHINA KANNADA
ಮಂಗಳೂರು: ಬೆಳ್ಳಂಬೆಳಗ್ಗೆ ಏರ್‌ಪೋರ್ಟ್ ಪರಿಸರದಲ್ಲಿ ಪ್ರತ್ಯಕ್ಷವಾದ ಚಿರತೆ
ಮಂಗಳೂರು: ಬಜಪೆ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿರುವ ಘಟನೆ ಶುಕ್ರವಾರ(ನ.8) ಮುಂಜಾನೆ ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ವೀಕ್ಷಕರು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಯೊಬ್ಬರು ಶುಕ್ರವಾರ ಮುಂಜಾನೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಚಿರತೆ ರಸ್ತೆ ದಾಟಿದೆ ಕೂಡಲೇ ಅಧಿಕಾರಿ ತನ್ನ ಮೊಬೈಲ್ ನಿಂದ ಚಿರತೆ ದೃಶ್ಯವನ್ನು ಸೆರೆ ಹಿಡಿದ್ದಿದ್ದಾರೆ,
ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
DAKSHINA KANNADA
ಮಂಗಳೂರು: ಜ.22ಕ್ಕೆ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮ
ಮಂಗಳೂರು: ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ಯಕ್ಷಾಭಿಮಾನಿಗಳು ಕಡಬ ನೇತೃತ್ವದಲ್ಲಿ ಯಕ್ಷಗಾನ ಹಾಸ್ಯ ಕಲಾವಿದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ‘ಕಲಾ ಯಾನದ ರಜತ ಸಂಭ್ರಮ- ಬೊಳ್ಳಿ ಪರ್ಬ- 25’ ಕಾರ್ಯಕ್ರಮ ಜ.22ಕ್ಕೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಕ್ಷೇತ್ರದ ವಠಾರದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8ರಿಂದ ಸಪ್ತಶತಿ ಪಾರಾಯಣ ಸಹಿತ ನವಚಂಡಿಕಾ ಯಾಗ, ಮಧ್ಯಾಹ್ನ 2ರಿಂದ ಬೊಳ್ಳಿ ಪರ್ಬ- 25 ಉದ್ಘಾಟನೆ- ಯಕ್ಷಬೊಳ್ಳಿ ಸಂಭ್ರಮಕ್ಕೆ ಚಾಲನೆ, ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ಜಿಲ್ಲೆಯ ಪ್ರಸಿದ್ಧ ಹಿಮ್ಮೇಳ – ಮುಮ್ಮೇಳ ಕಲಾ – ವಿದರ ಕೂಡುವಿಕೆಯಲ್ಲಿ ಯಕ್ಷ ಹಾಸ್ಯ ವೈಭವ, ಸಂಜೆ 5.30 ರಿಂದ 7.30ರವರೆಗೆ ಸಭಾ ಕಾರ್ಯಕ್ರಮ ಗುರುವಂದನೆ, ಗೌರವಾರ್ಪಣೆ, ಸನ್ಮಾನ ನೆರವೇರಲಿದೆ. ರಾತ್ರಿ 7.30 ರಿಂದ 1.30 ರವರೆಗೆ ಶ್ರೀ ಗೆಜ್ಜೆಗಿರಿ ಮೇಳದವರಿಂದ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಕಡಬ ದಿನೇಶ ರೈ ಕಲಾಸೇವೆ ವಿವರ :
ಕಡಬ ದಿನೇಶ ರೈ ಪ್ರಾರಂಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿ, ಬಳಿಕ ಶ್ರೀ ಕ್ಷೇತ್ರ ಕಟೀಲು, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ.
ರವಿ ಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಪಟ ಸ್ವಾಮೀಜಿ, ಪವಿತ್ರ ಪಲ್ಲವಿಯ ಪದ್ಮಾವತಿ, (ಪದ್ದು) ಚೆನ್ನಿ- ಚೆನ್ನಮ್ಮದ ಪುರುಷೋತ್ತಮ, ವಿಜಯಕೇಸರಿಯ ಮಾರುತಿ, ಜೀವನಚಕ್ರದ ನಿಷ್ಠಾವಂತ ಸೇವಕ, ಗುಳಿಗೋದ್ಭವ ಪಂಜುರ್ಲಿ – ಪ್ರತಾಪ ದ ಗೋಪಾಲ, ಹಾಗೂ ಚಂದ್ರ, ಮನ ಸೂರೆಗೊಂಡ ಪಾತ್ರಗಳು. ತೆಂಕು -ಬಡಗಿನಲ್ಲಿ ತುಳು – ಕನ್ನಡದಲ್ಲಿ ಪೌರಾ ಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ಕಥೆಗೆ ಲೋಪ ಬಾರದಂತೆ ತಮ್ಮದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಮಾತ್ರವಲ್ಲದೆ ನಾಟಕ, ತುಳು ಸಿನೆಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಡಬ ದಿನೇಶ ರೈ ಗೆ ಇರುವೈಲು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ‘ಯಕ್ಷ ಬೊಳ್ಳಿ’ ಎಂಬ ಬಿರುದು ನೀಡಿ ಗೌರವಿಸಿದೆ.
- DAKSHINA KANNADA7 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS4 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM3 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್