ಮಂಗಳೂರು: ದ.ಕ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.
ಮಂಗಳೂರಿನ್ ಕಮಿಷನರೇಟ್ ಕಚೇರಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಜಿಲ್ಲಾ ಎಸ್‌ಪಿ ಋಷಿಕೇಶ್ ಸೋನಾವಣೆ, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರ ಜೊತೆ ಸಭೆ ನಡೆಸಿ ಎಲ್ಲಾ ಪ್ರಕರಣಗಳ ಮಾಹಿತಿ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ‘ದ.ಕ ಜಿಲ್ಲೆಯಲ್ಲಿ ನಡೆದ ಎಲ್ಲಾ ಮೂರು ಕೇಸ್‌ನಲ್ಲಿ ಏನು ಪ್ರಗತಿಯಾಗಿದೆ ಅದನ್ನು ರಿವ್ಯೂ ಮಾಡಿದ್ದೇನೆ.
ಮುಂದೆ ಏನು ಮಾಡಬೇಕಾಗಿದೆ ಅದಕ್ಕೂ ಕೂಡಾ ಸಲಹೆ ಸೂಚನೆ ಕೊಟ್ಟಿದ್ದೇನೆ. ಆಗಲೇ ಒಂದು ಕೇಸ್ ಇಮೀಡಿಯೆಟ್ಲಿ ಪತ್ತೆಯಾಗಿತ್ತು.
ಅದರ ಬಗ್ಗೆ ತಾವು ಜಾಸ್ತಿ ಮಾತಾಡಲ್ಲ. ಏಕೆಂದ್ರೆ ಅದು ಪತ್ತೆಯಾಗುತ್ತೆ. ಎರಡನೇ ಕೇಸ್ ಮತ್ತು ಮೂರನೇ ಕೇಸ್ ಹೇಗೆಲ್ಲ ಅಪ್‌ಡೇಟ್ಸ್ ಆಗುತ್ತೆ ಅದನ್ನು ಇಲ್ಲಿನ ಲೋಕಲ್ ಎಸ್‌ಪಿಗಳು ನಿಮಗೆ ತಿಳಿಸಿತ್ತಾರೆ.
ಆದರೆ ನಮ್ಮ ಕಡೆಯಿಂದ ಒಂದು ಭರವಸೆ ಕೊಡ್ತೀನಿ. ಈ ಮೂರೂ ಕೇಸ್‌ನಲ್ಲಿ ಕೂಡಾ ನಾವು ಸರಿಯಾಗಿ ನ್ಯಾಯವಾಗಿ ತನಿಖೆ ಮಾಡ್ತೇವೆ. ಅದು ವ್ಯಕ್ತಿ ವಿಶೇಷ ಇರ್ಲಿ, ಅಥವಾ ಸಂಸ್ಥೆ ಇರಲಿ, ಯಾವುದು ಐಡಿಯಾಲಜಿ ಇರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ದ.ಕ ಮತ್ತು ಕೇರಳ ಗಡಿ ಭಾಗ ಮತ್ತು ಬೇರೆ ಕಡೆಯೆಲ್ಲ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳೋದಿಕ್ಕೆ ಏನೆಲ್ಲ ಕ್ರಮ ವಹಿಸಬೇಕು ಎಂದು ಮೊನ್ನೆ ತಾನೇ ಸಿಎಂ ಹೇಳಿದ್ರು. ಮಂಗಳೂರು ಪೊಲೀಸರು ಇನ್ನು ಕೂಡಾ ಬಲ ಹೆಚ್ಚು ಮಾಡಬೇಕಾಗಿದೆ. ನಿಮ್ಮೆಲ್ಲರ ಸಹಯೋಗದಿಂದ ಇಂತಹ ಘಟನೆಗಳು ಆಗದಂತೆ ಕ್ರಮ ವಹಿಸ್ತೇವೆ.
ಬೆಳ್ಳಾರೆ ಕೇಸ್ ಕಷ್ಟವಾಗುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಆದ್ರೆ ಕೃತ್ಯ ಮಾಡುವವವರಿಗೆ ಏನೂ ಕಷ್ಟ ಅಲ್ಲ ಆದ್ರೆ ಯಾವುದೇ ಕೇಸ್ ಇದ್ರೂ ಕೂಡಾ ಅದನ್ನು ಪತ್ತೆ ಹಚ್ಚೋಕೆ ಕಷ್ಟವಾಗುತ್ತೆ.
ನಮಗೆ ಕಷ್ಟದ ಬಗ್ಗೆ ಭಯ ಇಲ್ಲ. ನಾವು ಹೇಳುವ ಎಲ್ಲ ವಿಚಾರಕ್ಕೂ ಕೂಡಾ ಸಾಕ್ಷಿ ಆಧಾರಗಳನ್ನು ನೀಡಬೇಕಾಗುತ್ತದೆ. ಕಾನೂನಾತ್ಮಕವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇವೆ. ಕೆಲವು ಕೇಸ್ ಒಂದು ದಿನದಲ್ಲಿ ಪತ್ತೆಯಾಗುತ್ತೆ, ಕೆಲವು ಕೇಸ್ ಅದಕ್ಕೂ ಹೆಚ್ಚು ದಿನ ಹಿಡಿಯುತ್ತೆ.
ಸಂಘಟನೆಗಳ ಬಗ್ಗೆ ಇಷ್ಟೇ ಹೇಳ್ತೇನೆ. ಒಂದು ಸ್ಪಷ್ಟವಾಗಿ ಹೇಳ್ತೇನೆ ನಿಮಗೆ ಏನಂದ್ರೆ ಖಾಕಿ ಬಟ್ಟೆ ಹಾಕಿದ ಮೇಲೆ ಯಾವುದೇ ಹೆಣ ಬಿದ್ರೆ ನಾವು ಇದು ಹಿಂದೂ ಹೆಣ, ಕ್ರಿಶ್ಚಿಯನ್ ಹೆಣ, ಮುಸ್ಲಿಂ ಹೆಣ ಅಂತ ನೋಡಲ್ಲ. deadbody is deadbody. ಸತ್ತವರು ಯಾವ ಧರ್ಮದವರು ಆಗಿರಲಿ ನಮಗೆ ಎಲ್ಲಾ ಕೇಸ್ ಒಂದೇ ರೀತಿ.
ಬೆಳ್ಳಾರೆ ಪೊಲೀಸ್ ವರ್ಗಾವಣೆ ಬಗ್ಗೆ ಡಿಜಿಪಿ ಹೇಳಿದ್ದೇನು:
ಪೊಲೀಸ್ ವರ್ಗಾವಣೆಯಿಂದ ಕೇಸ್‌ಗೆ ಹಿನ್ನೆಡೆ ಆಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ‘ ಇಂತಹ ಕೇಸ್ ಇದ್ದಾಗ ಆ ವ್ಯಾಪ್ತಿಯ ಪೊಲೀಸ್ ಸ್ಟೇಷನ್‌ನವರು ಮಾತ್ರ ಪತ್ತೆ ಮಾಡಬೇಕು ಎಂದೇನಿಲ್ಲ.
ಬೇರೆ ರಾಜ್ಯದ ಅಧಿಕಾರಿಗಳು ಬಂದು ಇಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲವೇ ಹಾಗೆಯೇ ಈ ಪ್ರಕರಣದಲ್ಲಿ ಸಾಕ್ಷಿ ಆಧಾರಗಳ ಮೇಲೆ ತನಿಖೆ ನಡೆಯಲಿದೆ.
ಎಡಿಜಿಪಿಯಿಂದ ಹಿಡಿದು ಕಾನ್‌ಸ್ಟೇಬಲ್ ತನಕ ಎಲ್ಲರೂ ಕೂಡಾ ಕೆಲಸ ಮಾಡುತ್ತಾರೆ.
ಕೆಲವು ಮಂದಿ ಪುತ್ತೂರಲ್ಲಿ, ಕೆಲವರು ಇಲ್ಲಿ, ಕೆಲವರು ಬೆಂಗಳೂರು, ಕೆಲವರು ದೆಹಲಿ- ಹೀಗೆ ಯಾವ ಕಡೆಯಲ್ಲಿ ಇದ್ದಾರೆ ಅವರು ಅಲ್ಲಿಂದಲೇ ಕೇಸ್‌ನ ವಿಷಯದಲ್ಲಿ ಕೆಲಸ ಮಾಡಿ ಸಹಾಯ ಮಾಡುತ್ತಿದ್ದಾರೆ.’ ಎಂದು ಹೇಳಿದರು.