Connect with us

    ಖಾಸಗಿ ಬಸ್ಸು ನೌಕರರಿಗೆ ನ್ಯಾಯಯುತ ಪರಿಹಾರ ಒದಗಿಸಲು ಉಸ್ತುವಾರಿ ಸಚಿವರಿಗೆ ಮುನೀರ್ ಕಾಟಿಪಳ್ಳ ಮನವಿ

    Published

    on

    ಖಾಸಗಿ ಬಸ್ಸು ನೌಕರರಿಗೆ ನ್ಯಾಯಯುತ ಪರಿಹಾರ ಒದಗಿಸಲು ಉಸ್ತುವಾರಿ ಸಚಿವರಿಗೆ ಮುನೀರ್ ಕಾಟಿಪಳ್ಳ ಮನವಿ…

    ಮಂಗಳೂರು: ಲಾಕ್ ಡೌನ್ ಸಮಯದಿಂದ ಸಂಕಷ್ಟಕ್ಕೆ ಒಳಗಾದ ಖಾಸಗಿ ಬಸ್ ಗಳ ನಿರ್ವಾಹಕರು ಹಾಗೂ ಕ್ಲೀನರ್ ಗಳಿಗೆ ವೇತನ ನೀಡಿ ಕಷ್ಟಕ್ಕೆ ಸಾಥ್ ನೀಡಬೇಕು ಎಂದು,

    ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ, ಡಿ.ವೈ.ಎಫ್.ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಖಾಸಗಿ ಬಸ್ ಕೆಲಸಗಾರರ ಪರವಾಗಿ ಮನವಿ ಸಲ್ಲಿಸಿದರು.

    ಲಾಕ್ ಡೌನ್ ಆರಂಭಗೊಂಡ ನಂತರದಿಂದ ಸುಮಾರು 70 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ಸುಗಳ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿತ್ತು.

    ಇದರಿಂದ ಒಂದು ಸಾವಿರದಷ್ಟಿರುವ ಖಾಸಗಿ ಬಸ್ಸುಗಳ, ಸುಮಾರು ಏಳೆಂಟು ಸಾವಿರ ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ ಗಳು ಉದ್ಯೋಗ ಇಲ್ಲದೆ ಮನೆಗಳಲ್ಲಿ ಉಳಿಯುವಂತಾಯಿತು.

    ಮಾಲಕರ ಸಂಘಗಳಾಗಲಿ, ಸರಕಾರವಾಗಲಿ ಯಾವುದೇ ನೆರವು ನೀಡದಿರುವುದರಿಂದ ಕುಟುಂಬದ ದೈನಂದಿನ ಖರ್ಚುವೆಚ್ಚಗಳನ್ನೂ ಭರಿಸಲಾಗದೆ ಬಸ್ ನೌಕರರು ಸಂಕಷ್ಟಕ್ಕೊಳಗಾಗಿದ್ದಾರೆ.

    ಲಾಕ್ ಡೌನ್ ಸಂದರ್ಭ ಕಾರ್ಮಿಕರಿಗೆ, ನೌಕರರಿಗೆ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶ ಇದ್ದರೂ ಬಸ್ಸು ಸಿಬ್ಬಂದಿಗಳಿಗೆ ವೇತನವನ್ನು ಪೂರ್ಣವಾಗಿ ನಿರಾಕರಿಸಲಾಗಿದೆ.

    ಇದರಿಂದ ಬಸ್ಸು ಕಾರ್ಮಿಕರ ಕಟುಂಬಗಳು ದಯನೀಯ ಸ್ಥಿತಿಗೆ ತಲುಪಿದೆ.‌ ಸರಕಾರದ ವತಿಯಿಂದಲೂ ಯಾವುದೇ ಪರಿಹಾರಗಳು ಸಿಕ್ಕಿಲ್ಲ.

    ಲಾಕ್ ಡೌನ್ ಅವಧಿಯ ತಾತ್ಕಾಲಿಕ ಪರಿಹಾರವಾಗಿ ಬಸ್ಸು ಮಾಲಕರ ಸಂಘಗಳು ತಿಂಗಳಿಗೆ ಐದು ಸಾವಿರ ರೂಪಾಯಿಯಂತೆ ತಲಾ ಹತ್ತು ಸಾವಿರ ರೂಪಾಯಿ ತಕ್ಷಣ ಒದಗಿಸಬೇಕಿದೆ.

    ಹಾಗೆಯೆ ಜೂನ್ ಒಂದರಿಂದ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಮಾಲಕರ ಸಂಘ ಶೇಕಡಾ ಇಪ್ಪತ್ತರಷ್ಟು ಬಸ್ಸುಗಳನ್ನಷ್ಟೇ ರಸ್ತೆಗಿಳಿಸಿವೆ.

    ಕರ್ತವ್ಯಕ್ಕೆ ತೆರಳಿರುವ ನೌಕರರಿಗೆ ಅರ್ಧ ವೇತನ ಮಾತ್ರ ದೊರೆಯುತ್ತಿದೆ. ಉಳಿದವರು ಯಾವುದೇ ವೇತನ ಇಲ್ಲದೆ ಅಸಹಾಯಕರಾಗಿದ್ದಾರೆ.

    ಹಾಗಿರುವಾಗ ಉಳಿದ ಬಸ್ ನೌಕರರಿಗೆ ಉದ್ಯೋಗ, ವೇತನದ ಸ್ಥಿತಿಯ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರಸ್ತೆಗೆ ಇಳಿಯದ ಬಸ್ ಗಳ ನೌಕರರಿಗೆ ವೇತನದ ಅರ್ಧ ಭಾಗ,

    ಉದ್ಯೋಗಕ್ಕೆ ತೆರಳುವ ನೌಕರರಿಗೆ ವೇತನದಲ್ಲಿ ಯಾವುದೇ ಕಡಿತ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದಿನ ನಿತ್ಯ ನೂರಾರು ಜನರ ಸಂಪರ್ಕಕ್ಕೆ ಬರುವ ಬಸ್ಸು ಸಿಬ್ಬಂದಿಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.‌

    ಮುನ್ನೆಚ್ಚರಿಕೆಯ ಭಾಗವಾಗಿ ಪ್ರತಿಯೊಂದು ಬಸ್ಸು ತಂಗುದಾಣಗಳಲ್ಲಿ ಸ್ಯಾನಿಟೈಜ್ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕಿದೆ.‌

    ಸೇವಾ ಕ್ಷೇತ್ರದಲ್ಲಿ ಪ್ರಸಕ್ತ ಸಂದರ್ಭ ಅತಿ ಅಪಾಯಕಾರಿಯಾಗಿ ದುಡಿಯುವ ಬಸ್ಸು ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ,

    ಸೋಂಕು ಪೀಡಿತರಾದರೆ ಅವರಿಗೆ ಕೊರೊನಾ ವಾರಿಯರ್ಸ್ ಗೆ ದೊರಕುವ ಎಲ್ಲಾ ಸೌಲಭ್ಯ, ಪರಿಹಾರ ದೊರಕುವಂತೆ ಕ್ರಮ ವಹಿಸಬೇಕು ಎಂದು ವಿನಂತಿಸುತ್ತಿದ್ದೇವೆ.

    ಹಾಗೆಯೆ ಆಟೋ, ಟ್ಯಾಕ್ಸಿ ಚಾಲಕರಿಗೆ ಒದಗಿಸಿದಂತೆ ಬಸ್ಸು ನೌಕರರಿಗೂ ರಾಜ್ಯ ಸರಕಾರ ಪರಿಹಾರ ಧನ ಒದಗಿಸಬೇಕಿದೆ.

    ಖಾಸಗಿ ಬಸ್ಸು ಓಡಾಟಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಸತತ ಸಭೆಗಳನ್ನು ಮಾಲಕರ ಸಂಘದ ಜೊತೆಗೆ ನಡೆಸುತ್ತಿದೆ.

    ಆದರೆ ಬಸ್ಸುಗಳನ್ನು ಬೀದಿಯಲ್ಲಿ ಮುನ್ನಡೆಸಬೇಕಾದ ನೌಕರರ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರುವುದು ಖೇದಕರ‌.

    ಮುಂದಿನ ದಿನಗಳಲ್ಲಿ ನೌಕರರ ಸಂಘದ ಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಬೇಕು ಎಂದು ಒತ್ತಾಯಿಸುತ್ತೇವೆ.

    ಮುಂಗಳೂರು ಪೂರ್ವ ವಲಯದಲ್ಲಿ ನೂರಾ ಇಪ್ಪತ್ತೈದು ಬಸ್ಸುಗಳಿದ್ದು, ಸುಮಾರು ಐನೂರಕ್ಕೂ ಹೆಚ್ಚು ಬಸ್ಸು ನೌಕರರರಿದ್ದಾರೆ‌.

    ನಾವು ಸಭೆ ನಡೆಸಿ, ಲಭ್ಯ ಇರುವ ನೌಕರರ ಸಹಿಗಳ‌ನ್ನು ಸಂಗ್ರಹಿಸಿ ಡಿ.ವೈ.ಎಫ್.ಐ ಸಂಘಟನೆಯ ಮೂಲಕ ಈ ಮನವಿ ಪತ್ರವನ್ನು ತಮಗೆ ನೀಡುತ್ತಿದ್ದು,

    ನಮ್ಮ ನ್ಯಾಯಯುತ ಬೇಡಿಕೆಗಳನ್ನು ಆದ್ಯತೆಯಲ್ಲಿ ಈಡೇರಿಸಬೇಕು, ಈ ಕುರಿತು ವಿಶೇಷ ಸಭೆ ಕರೆಯಬೇಕು ಎಂದು ಡಿ.ವೈ.ಎಫ್.ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಸ್‌ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ..! ಧರ್ಮದೇಟು ತಿಂದ ಮುಸ್ಲಿಂ ಯುವಕ..!

    Published

    on

    ಮಂಗಳೂರು ( ಸುಳ್ಯ ) : ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಈ ವಿಚಾರ ತಿಳಿದ ವಿದ್ಯಾರ್ಥಿನಿಯ ಸಹಪಾಠಿಗಳು ಯುವಕನನ್ನು ಹಿಡಿದು ಹಲ್ಲೆ ನಡೆಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

    ಸುಬ್ರಹ್ಮಣ್ಯ ಸಮೀಪದ ಬಿಸಲೆ ಘಾಟ್‌ ಬಳಿ ವಿದ್ಯಾರ್ಥಿನಿ ಬೆಂಗಳೂರಿನಿಂದ ಬಂದಿದ್ದ ಬಸ್ ಹತ್ತಿದ್ದಳು. ಈ ವೇಳೆ ಯುವಕೊನೊಬ್ಬ ಕುಳಿತಿದ್ದ ಸೀಟ್‌ ಪಕ್ಕದ ಸೀಟ್ ಖಾಲಿ ಇದ್ದ ಕಾರಣ ಆಕೆ ಆತನ ಪಕ್ಕದಲ್ಲೇ ಕುಳಿತಿದ್ದಾಳೆ. ಆದ್ರೆ ವಿದ್ಯಾರ್ಥಿನಿ ಪಕ್ಕದಲ್ಲಿ ಕುಳಿತ ಸ್ವಲ್ಪ ಸಮಯದಲ್ಲೇ ಯುವಕ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ. ಈ ವಿಚಾರವನ್ನು ಬಸ್ ನಿರ್ವಾಹಕನಿಗೆ ತಿಳಿಸಿದಾಗ ನಿರ್ವಾಹಕ ಹಾಗೂ ಬಸ್‌ ಪ್ರಯಾಣಿಕರು ಆರೋಪಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿದ್ಯಾರ್ಥಿನಿ ಈ ವಿಚಾರವನ್ನು ಸುಳ್ಯದ ತನ್ನ ಕಾಲೇಜು ಸಹಪಾಠಿಗಳ ಗಮನಕ್ಕೂ ತಂದಿದ್ದಾಳೆ. ಈ ನಡುವೆ ಯುವಕ ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದು ಬೇರೆ ಬಸ್ ಮೂಲಕ ಸುಳ್ಯದತ್ತ ಪ್ರಯಾಣ ಮಾಡಿದ್ದಾನೆ. ಬೆಂಗಳೂರಿನ ಬಸ್‌ನಲ್ಲಿ ಪ್ರಯಾಣಿಸಿ ಸುಳ್ಯ ತಲುಪಿದ್ದ ವಿದ್ಯಾರ್ಥಿನಿ ಈ ವಿಚಾರವನ್ನು ತನ್ನ ಸಹಪಾಠಿಗಳಿಗೆ ತಿಳಿಸಿದ್ದಾಳೆ. ತಕ್ಷಣ ಸುಳ್ಯದ ಪೈಚಾರು ಎಂಬಲ್ಲಿಗೆ ಕಾರಿನಲ್ಲಿ ತೆರಳಿದ ವಿದ್ಯಾರ್ಥಿಗಳು ಅಲ್ಲಿ ಯುವಕ ಪ್ರಯಾಣಿಸುತ್ತಿದ್ದ ಬಸ್‌ನಿಂದ ಆತನನ್ನು ಇಳಿಸಿದ್ದಾರೆ. ಬಳಿಕ ಆತನನ್ನು ಕಾರಿನಲ್ಲಿ ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದು ಬಸ್ ನಿಲ್ದಾಣದಲ್ಲಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

    ವಿದ್ಯಾರ್ಥಿಗೆ ಕಿರುಕುಳ ನೀಡಿದ ಯುವಕ ಕೇರಳ ಮೂಲದವನಾಗಿದ್ದು, ಆತನ ಹೆಸರು ನಿಯಾಜ್‌ ಎಂದು ಗೊತ್ತಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ನಿಯಾಜ್‌ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

    Continue Reading

    BIG BOSS

    Bigg Boss Kannada 11: ದೊಡ್ಮನೆಯಲ್ಲಿ ಸ್ವರ್ಗ, ನರಕ ಎನ್ನುವ ಎರಡು ಥೀಮ್

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆ 2ನೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್‌ ಇಂಟರೆಸ್ಟಿಂಗ್ ಮಾಹಿತಿ  ತಿಳಿಸಿದ್ದಾರೆ.

    ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.

    ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ.

    ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.

    Continue Reading

    BANTWAL

    ವಗ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ

    Published

    on

    ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್‌ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.

    ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್‌ ಒಳಗಿದ್ದ ಪ್ರಯಾಣಿಕರನ್ನು ಬಸ್‌ ನಿಂದ ಹೊರ ತೆಗೆದಿದ್ದಾರೆ.

    ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್‌ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

    ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.

    Continue Reading

    LATEST NEWS

    Trending