BANTWAL
ವಗ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ
ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.
ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್ ಒಳಗಿದ್ದ ಪ್ರಯಾಣಿಕರನ್ನು ಬಸ್ ನಿಂದ ಹೊರ ತೆಗೆದಿದ್ದಾರೆ.
ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.
BANTWAL
ಬಂಟ್ವಾಳ: ಮಂಗಳೂರಿನಿಂದ ಪೊಳಲಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ
ಬಂಟ್ವಾಳ: ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
ಪೊಳಲಿ ಕ್ಷೇತ್ರದ ವಠಾರದಲ್ಲಿ ಕೆಎಸ್ ಆರ್ ಟಿಸಿಗೆ ಪೂಜೆ ನೆರವೇರಿಸಿದ ಬಳಿಕ ಚಾಲನೆಗೊಂಡಿದೆ.ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ ,ಕಡೇಗೋಳಿ, ಫರಂಗಿಪೇಟೆ, ಪಡೀಲಿನ ಮೂಲಕ ಮಂಗಳೂರಿಗೆ ಈ ಸರಕಾರಿ ಬಸ್ ನ ವ್ಯವಸ್ಥೆಯು ಇರಲಿದೆ.
ಇದರಿಂದಾಗಿ ಈ ಭಾಗದ ಜನರ ಬಹುಕಾಲದ ಕನಸು ನನಸಾಗಿದೆ.ಹಲವು ವರ್ಷದಿಂದ ಈ ರೂಟಿನಲ್ಲಿ ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್ ನ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿನ ನಾಗರಿಕರು ಕೆಎಸ್ ಆರ್ ಟಿಸಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.ಬ್ರಹ್ಮರಕೊಟ್ಲು ಯಕ್ಷಮಿತ್ರ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮುತುವರ್ಜಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿಯೇ ಕೆಎಸ್ ಆರ್ ಟಿಸಿಬಸ್ ಬಸ್ ಆರಂಭಗೊಂಡಿದೆ. ನವರಾತ್ರಿಯ ಬಳಿಕವು ಈ ಬಸ್ ನ ವ್ಯವಸ್ಥೆ ಮುಂದುವರಿಯಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
BANTWAL
ಅಕ್ರಮ ಮರಳು ಅಡ್ಡೆಗೆ ದಾಳಿ; 20 ಬೋಟ್ ವಶಕ್ಕೆ
ಬಂಟ್ವಾಳ: ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ದ.ಕ ಜಿಲ್ಲಾಧಿಕಾಗಳ ಆದೇಶದಂತೆ 20 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದರು. ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಪಲಾಯನಗೈದಿದ್ದಾರೆಂದು ವರದಿಯಾಗಿದೆ.
ದೋಣಿಗಳನ್ನು 4ರಂತೆ ಜೋಡಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬೋಟ್‌ನಲ್ಲಿ ಯಾವುದೇ ರೀತಿಯ ಮರಳು ಪತ್ತೆಯಾಗಿಲ್ಲ. ಮರಳುಗಾರಿಕೆಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸಂಬಂಧಟ್ಟದ್ದು ಎಂಬುವುದರ ಕುರಿತು ಅಧಿಕಾರಿಗಳ ತನಿಖೆಯ ಬಳಿಕ ತಿಳಿದುಬರಬೇಕಷ್ಟೇ.
ಸಾಕಷ್ಟು ಸಮಯದಿಮದ ಕೇಳಿ ಬರುತ್ತಿದ್ದ ಆರೋಪ:
ದೋಣಿಗಳ ಸಹಾಯದಿಂದ ನದಿಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಅರೋಪ ಸಾಕಷ್ಟು ಸಮಯದಿಂದ ಕೇಳಿ ಬರುತ್ತಿದ್ದವು. ಈ ಹಿನನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ದಾಳಿ ನಡೆಸಿ ಆಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶವನ್ನು ನೀಡಿದ್ದರು.
ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಹಿರಿಯ ಭೂ ವಿಜ್ಞಾನಿ ಗಿರಿಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ಧನ್ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
BANTWAL
ಸಜಿಪದಲ್ಲಿ ರಸ್ತೆ ಅಪಘಾತ: ಯುವಕ ಮೃ*ತ್ಯು
ಬಂಟ್ವಾಳ: ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃ*ತಪಟ್ಟಿದ್ದಾರೆ.
ಬರಿಮಾರು ನಿವಾಸಿ ಸರ್ಫ್ರಾಝ್ ( 33) ಮೃ*ತಪಟ್ಟ ಯುವಕ. ಬೈಕ್ ಸವರಳಾಗಿದ್ದ ಸಹೋದರಿ ಜಾಸ್ಮೀನ್ (18) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಫ್ರಾಝ್ ವಿದ್ಯಾರ್ಥಿನಿಯಾಗಿರುವ ತಂಗಿ ಜಾಸ್ಮೀನ್ ರನ್ನು ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ತಲುಪಿದಾಗ ಇವರ ಸ್ಕೂಟರ್ ಗೆ ಎದುರಿನಿಂದ ಇಮ್ತಿಯಾಝ್ ಎಂಬಾತ ಚಲಾಯಿಸಿಕೊಂಡು ಬಂದ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ನಲ್ಲಿದ್ದ ರಸ್ತೆಗೆ ಎಸೆಯಲ್ಪಟ್ಟಿದ್ದರು.
ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸರ್ಫ್ರಾಝ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- BIG BOSS3 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS6 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS4 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS5 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ