Connect with us

  FILM

  Mumbai: ರಾಹುಲ್ ಗಾಂಧಿಯನ್ನು ಮದುವೆಯಾಗಲು ಸೈ ಎಂದ ಬಾಲಿವುಡ್ ನಟಿ..!

  Published

  on

  ‘ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ಹೇಳಿಕೆ ವೈರಲ್ ಆಗುತ್ತಿದೆ.

  ಮುಂಬೈ: ‘ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ಹೇಳಿಕೆ ವೈರಲ್ ಆಗುತ್ತಿದೆ.

  ಮುಂಬೈನ ಬಾಂದ್ರಾಬ್ಯಾಂಡ್‌ಸ್ಟಾಂಡ್‌ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್‌ ಛೋಪ್ರ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

  ಅದಕ್ಕೆ ನಟಿ ‘ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಆದರೆ ಒಂದು ಖಂಡಿಷನ್ ಇದೆ ಎಂದಿದ್ದಾರೆ.

  ಮದುವೆಯಾದರೆ ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ.

  ಇದೀಗ ಛೋಪ್ರಾ ಎಂಬ ಕುಲನಾಮ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

  ಈ ವಿಡಿಯೋ ಈಗ ವೈರಲ್‌ ಆಗಿದೆ.

  FILM

  ಯಶ್ ‘ಟಾಕ್ಸಿಕ್’ ಚಿತ್ರಕ್ಕೆ ಸಂಕಷ್ಟ; ಹೈಕೋರ್ಟ್ ನೋಟೀಸ್!

  Published

  on

  ಮಂಗಳೂರು / ಬೆಂಗಳೂರು : ಕೆಜಿಎಫ್ ಸಿನಿಮಾ ಹಿಟ್ ಆದ ಮೇಲೆ ಯಶ್ ನತ್ತ ಎಲ್ಲರ ಚಿತ್ತ ತುಸು ಹೆಚ್ಚಾಗೇ ವಾಲಿದೆ. ಯಶ್ ಮುಂದಿನ ಚಿತ್ರದ ಬಗ್ಗೆ ಎಲ್ಲರ ಕಣ್ಣಿದೆ. ಸದ್ಯ ರಾಕಿಂಗ್ ಸ್ಟಾರ್ ‘ಟಾಕ್ಸಿಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇತ್ತೀಚೆಗೆ ಅವರ ಹೊಸ ಹೇರ್ ಸ್ಟೈಲ್ ಗಮನ ಸೆಳೆದಿತ್ತು. ಆದರೆ, ಈಗ ಯಶ್ ‘ಟಾಕ್ಸಿಕ್’ಗೆ ಸಂಕಷ್ಟ ಎದುರಾಗಿದೆ.


  ಹೌದು, ಇದೀಗ ಟಾಕ್ಸಿಕ್ ಚಿತ್ರದ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್ ನಿಂದ ಸಮಸ್ಯೆ ಎದುರಾಗಿದೆ ಎಂಬ ಆರೋಪ ಮಾಡಿದ್ದಾರೆ. ಪೀಣ್ಯ ಪ್ಲಾಂಟೇಷನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ, ವಕೀಲ ಜಿ. ಬಾಲಾಜಿ ನಾಯ್ಢು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಈ ಸಂಬಂಧ ಹೈಕೋರ್ಟ್ ಟಾಕ್ಸಿಕ್ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮತ್ತು ಎಚ್ ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.

  ಇದನ್ನೂ ಓದಿ : ವಿವಾಹಿತ ನಾಯಕ ನಟನ ಜೊತೆ ‘ಸಾಯಿ ಪಲ್ಲವಿ’ ಡೇಟಿಂಗ್..!
  ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಗೆ ಕಿಯಾರಾ ಅಡ್ವಾಣಿ ನಾಯಕಿ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕರೀನಾ ಕಪೂರ್ ಸೇರಿದಂತೆ ದೊಡ್ಡ ತಾರಾಂಗಣವಿದೆ.

  Continue Reading

  FILM

  ವಿವಾಹಿತ ನಾಯಕ ನಟನ ಜೊತೆ ‘ಸಾಯಿ ಪಲ್ಲವಿ’ ಡೇಟಿಂಗ್..!

  Published

  on

  Sai Pallavi: ಮಳಯಾಲಂ ಚಿತ್ರ ‘ಪ್ರೇಮಂ’ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ಚೊಚ್ಚಲ ಸಿನೆಮಾದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದರು. ವಿಭಿನ್ನ ರೀತಿಯ ಕಥೆಗಳನ್ನು ಆರಿಸಿಕೊಳ್ಳುವ ಈಕೆ ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿಯಾಗಿದ್ದಾರೆ. ಮೊಡವೆ ಅಂದ್ರೆ ಎಲ್ಲಾ ಹುಡುಗಿಯರು ಮುಜುಗರ ಪಟ್ಟುಕೊಂಡ್ರೆ ಸಾಯಿ ಪಲ್ಲವಿಗೆ ಮಾತ್ರ ವರದಾನ ಅಂದ್ರೆ ತಪ್ಪಾಗಲ್ಲ. ಇತ್ತೀಚೆಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟಿಯರ ಸಾಲಿನಲ್ಲಿ ಸಾಯಿ ಪಲ್ಲವಿ ಕೂಡಾ ಸೇರಿದ್ದಾರೆ. ಚಿತ್ರರಂಗದ ಘಟಾನುಘಟಿ ನಾಯಕ ನಟರುಗಳು ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.

  ನಿವಿನ್ ಪೌಲ್ ನಟನೆಯ ‘ಪ್ರೇಮಂ’ ಸಿನೆಮಾದಲ್ಲಿ ಮಲಾರ್‌ ಆಗಿ ಕಾಣಿಸಿಕೊಂಡ ಪಲ್ಲವಿ ಎಲ್ಲರ ಫೇವರೆಟ್ ಆಗಿದ್ದರು. ಬಳಿಕ ತೆಲುಗುವಿನ ‘ಫಿದಾ’ ಸಿನೆಮಾ ಕೂಡಾ ಸೂಪರ್‌ ಹಿಟ್ ಆಗಿತ್ತು. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಈಕೆ ಸಾಂಪ್ರದಾಯಿಕ ಉಡುಗೆಯಲ್ಲೇ ಹೆಚ್ಚು ಜನರ ಗಮನ ಸೆಳೆದಿದ್ದಾರೆ.

  ಸುಸಂಸ್ಕೃತ ಕುಟುಂಬದಿಂದ ಬಂದ ಸಾಯಿ ಪಲ್ಲವಿ ಡೀಪ್‌ ಡ್ರೆಸ್‌ಗಳನ್ನು ಇಷ್ಟ ಪಡುವುದಿಲ್ಲ. ಆದರೆ ಈ ಹಿಂದೆ ಟ್ಯಾಂಗೊ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ ನಟಿ ಈ ನೃತ್ಯಕ್ಕೆ ಅನುಗುಣವಾಗಿ ಬಟ್ಟೆಯನ್ನು ಧರಿಸಬೇಕಿತ್ತು. ಮನೆಯವರ ಅನುಮತಿಯೊಂದಿಗೆ ಸ್ಲೀವ್‌ಲೆಸ್‌ ಬಟ್ಟೆಯನ್ನು ತೊಟ್ಟಿದ್ದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಲ್ಲದೇ ಯಾವುದೇ ಸಿನೆಮಾ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಸಾಯಿ ಪಲ್ಲವಿ ದೇಸೀ ಉಡುಗೆ ಸೀರೆಯಲ್ಲಿ ಮಿಂಚುತ್ತಾರೆ.

  ರಾಮ-ಸೀತೆಯಂತೆ ಕಾಣಿಸಿಕೊಂಡ ರಣ್​ಬೀರ್​, ಸಾಯಿ ಪಲ್ಲವಿ.. ರಾಮಾಯಣ ಸಿನಿಮಾ ಸೆಟ್ಟಿನ ಫೋಟೋ ಲೀಕ್​

  ತುಂಬಾನೇ ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ನಟಿ ಇದೀಗ ಚರ್ಚೆಗೆ ಕಾರಣವಾಗಿದ್ದಾರೆ. ಕೆಲ ತಿಂಗಳ ಹಿಂದೆ ಸಾಯಿ ಪಲ್ಲವಿಯವರ ಸಹೋದರಿಯ ವಿವಾಹ ನಿಶ್ಚಿತಾರ್ಥ ನಡೆದಿದೆ. ಈ ವೇಳೆ ಸಾಯಿ ಪಲ್ಲವಿ ಮದುವೆ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನು ಹರಿಸಿದ್ದರು. ಈ ನಡುವೆ ಸಾಯಿ ಪಲ್ಲವಿಯವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ನಟಿ ಸಾಯಿ ಪಲ್ಲವಿ ವಿವಾಹಿತ ನಾಯಕನಟನೊಬ್ಬನ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಅದೂ ಅಲ್ಲದೆ ನಾಯಕನಿಗೆ ಈಗಾಗಲೇ ಮದುವೆಯಾಗಿ ಇಬ್ಬರೂ ಮಕ್ಕಳಿದ್ದಾರೆ. ಆದರೆ, ಇದನ್ನು ಕೇಳಿದ ಸಾಯಿ ಪಲ್ಲವಿ ಆಭಿಮಾನಿಗಳು ಶಾಕ್ ಆಗಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

  Continue Reading

  FILM

  ಯಶ್ ಹೊಸ ಲುಕ್ ಹಿಂದಿನ ಅಸಲಿ ಕಥೆ ಹೇಳಿದ ಹೇರ್​ಸ್ಟೈಲಿಸ್ಟ್

  Published

  on

  ಯಶ್ ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಯಶ್ ಅವರು ಹೊಸ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ತಲೆ ಕೂದಲನ್ನು ಶಾರ್ಟ್ ಮಾಡಿಸಿದ್ದರು. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಯಶ್ ಹೇರ್​ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

  ‘ನಾವು ಇನ್ನೂ ಹೋಟೆಲ್ ತಲುಪಿರಲಿಲ್ಲ. ಆಗಲೇ ಫೋಟೋಗಳು ಹರಿದಾಡಲು ಆರಂಭಿಸಿದ್ದವು. ಕೆಲವೇ ನಿಮಿಷಗಳಲ್ಲಿ ಇಂಟರ್​ನೆಟ್​ನಲ್ಲಿ ಫೋಟೋ ವೈರಲ್ ಆಯಿತು. ಪ್ರತಿಕ್ರಿಯೆ ಅಗಾಧವಾಗಿತ್ತು. ಈ ಲುಕ್ ಸಾಕಷ್ಟು ಪರಿಣಾಮ ಬೀರಿತ್ತು’ ಎಂದು ಅಲೆಕ್ಸ್ ವಿಜಯಕಾಂತ್ ಹೇಳಿಕೊಂಡಿದ್ದಾರೆ.

  ‘ಸ್ಕ್ರಿಪ್ಟ್​ನಿಂದ ಸ್ಫೂರ್ತಿ ಪಡೆದು ಈ ಹೇರ್​ಸ್ಟೈಲ್​ ಮಾಡಿದ್ದೇನೆ. ನಾನು ಮೊದಲು ಸ್ಕ್ರಿಪ್ಟ್ ಕೇಳಿದೆ. ಈ ಕಥೆಗೆ ಸಣ್ಣ ತಲೆಗೂದಲು ಹೊಂದುತ್ತದೆ ಎಂದುಕೊಂಡೆ. ಸಿನಿಮಾದ ಪಾತ್ರ ಏನನ್ನು ಬೇಡುತ್ತದೆಯೋ ಅದೇ ರೀತಿಯಲ್ಲಿ ಹೇರ್​ಸ್ಟೈಲ್ ಮಾಡಿರುವೆ’ ಎಂದು ಮಾಹಿತಿ ನೀಡಿದ್ದಾರೆ ಅವರು.

  ಹೇರ್​ಸ್ಟೈಲ್​ನ ನೋಡಿ ಯಶ್ ಅವರು ಯಾವ ರೀತಿಯ ರಿಯಾಕ್ಷನ್ ನೀಡಿದರು ಎನ್ನುವ ಬಗ್ಗೆಯೂ ವಿಜಯಕಾಂತ್ ಅವರು ಮಾತನಾಡಿದ್ದಾರೆ. ‘ಅವರು ನನ್ನನ್ನು ಹಗ್ ಮಾಡಿದರು. ಅಲೆಕ್ಸ್ ನೀವು ಸಾಧಿಸಿದಿರಿ ಎಂದರು’ ಎಂಬುದು ವಿಜಯಕಾಂತ್ ಮಾತು.

  ಯಶ್​ಗೆ ಹೇರ್​ಸ್ಟೈಲ್ ಮಾಡುತ್ತಿರುವ ಫೋಟೋನ ಅಲೆಕ್ಸ್ ವಿಜಯಕಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅವರು ‘ಕೆಜಿಎಫ್’ ಚಿತ್ರಗಳಿಗಾಗಿ ಉದ್ದ ಕೂದಲು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಇದೇ ರೀತಿಯ ಹೇರ್​ಸ್ಟೈಲ್​ನ ಕಾಯ್ದುಕೊಂಡು ಬಂದಿದ್ದರು. ಈಗ ಅದಕ್ಕೆ ಕತ್ತರಿ ಹಾಕಿದ್ದಾರೆ.

  ಯಶ್ ಹೇರ್​ಸ್ಟೈಲ್ ಮೊದಲು ರಿವೀಲ್ ಆಗಿದ್ದು ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ. ಇದಾದ ಬಳಿಕ ಅನೇಕರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಅನೇಕರು ಈ ಹೇರ್​ಸ್ಟೈಲ್​ನ ಫಾಲೋ ಮಾಡಿದ್ದಾರೆ.

  Continue Reading

  LATEST NEWS

  Trending