Connect with us

LATEST NEWS

ರಾಣೆಬೆನ್ನೂರು ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಏಕಾಂಗಿಯಾಗಿ ಕುಳಿತ ಎಂಎಲ್‌ಸಿ ಶಾಂತಾರಾಮ್ ಸಿದ್ಧಿ

Published

on

ಕಾರವಾರ: ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಮೆಂಬರ್‌ ಆದರೆ ಸಾಕು ಬೆಲೆಬಾಳುವ ಕಾರಿನಲ್ಲಿ ಓಡಾಡುವ ಹೊತ್ತಿನಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆಗೆ ಸಾಕ್ಷಿ ಒದಗಿಸಿದ್ದಾರೆ.


ರಾಣೆಬೆನ್ನೂರಿನ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಶಾಂತಾರಾಮ್ ಸಿದ್ಧಿಯವರು ಸಾಮಾನ್ಯ ಪ್ರಯಾಣಿಕರಂತೆ ಕುಳಿತು ಬಸ್‌ಗಾಗಿ ಕಾಯುತ್ತಿದ್ದರು. ಅವರನ್ನು‌ ನೋಡಿದವರು ಯಾರೂ ಕೂಡ ಇವರು ರಾಷ್ಟ್ರೀಯ ಪಕ್ಷವೊಂದರ ವಿಧಾನ ಪರಿಷತ್ ಸದಸ್ಯರು ಎಂಬುದನ್ನು ‌ಗುರುತಿಸುವಂತಿರಲಿಲ್ಲ.

ಅಷ್ಟು ಸರಳವಾಗಿ ಬದುಕುತ್ತಿರುವ ಶಾಂತಾರಾಮ್ ಸಿದ್ಧಿ ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ತಮ್ಮ ಓಡಾಡಕ್ಕೆ ಸಾರ್ವಜನಿಕ ಸಂಪರ್ಕವಾದ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಮಾತ್ರವಲ್ಲ ಶಾಂತಾರಾಮ್ ಸಿದ್ಧಿಯವರ ಬಳಿಕ ದುಬಾರಿ ವಾಚ್, ಶೂ, ಪೋನ್, ಬೆಲೆಬಾಳುವ ಉಡುಪು, ಸಹಾಯಕರು ಕೂಡ ಇಲ್ಲ.

ಶಾಂತಾರಾಮ್ ಸಿದ್ದಿ ರಾಣೆಬೆನ್ನೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತಿರುವ ಪೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಆಗ್ತಿದ್ದು ಇಷ್ಟು ಸರಳ ವ್ಯಕ್ತಿತ್ವ ಹಾಗೂ ಇಷ್ಟು ಸರಳ ಯಾವುದೇ ಶ್ರೀಮಂತ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ವಿಧಾನಪರಿಷತ್ ಸ್ಥಾನಕ್ಕೆ ಆರಿಸುವಂತಹದ್ದು ಕೂಡಾ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾದ್ಯ ಎಂದು ಬಿಜೆಪಿ ಬೆಂಬಲಿಗರು ಟ್ವೀಟ್, ಪೋಸ್ಟ್ ಮಾಡ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಶಾಂತಾರಾಮ್ ಸಿದ್ದಿ ಯಲ್ಲಾಪುರದ ಹಿತ್ಲಳ್ಳಿಯ ಸಣ್ಣ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾರೆ.
ಆರಂಭದಿಂದಲೂ ಬಿಜೆಪಿ ಹಾಗೂ ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡ ಶಾಂತಾರಾಮ್ ಸಿದ್ಧಿಯವರನ್ನು ಬಿಜೆಪಿ ಗುರುತಿಸಿ ಪರಿಷತ್ ಗೆ ನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿತ್ತು.

ಇದು ಅಚ್ಚರಿಗೂ ಕಾರಣವಾಗಿತ್ತು. ವಿಧಾನ ಪರಿಷತ್ ಗೆ ನೇಮಕವಾದ ಮೇಲೂ ಶಾಂತಾರಾಮ್ ಸಿದ್ಧಿ ಹಿಂದಿನಂತೆ ಸರಳ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

LATEST NEWS

ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

Published

on

ಬೆಂಗಳೂರು : ಆ ಬಾಲಕ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದ. ಬೇಸಿಗೆ ರಜೆಯ ಹಿನ್ನೆಲೆ ತಂದೆ – ತಾಯಿ, ಅಣ್ಣನೊಂದಿಗೆ ಸಮಯ ಕಳೆಯಲು ಬಂದಿದ್ದ. ಆದರೆ ವಿಧಿಯಾಟ ಬೇರೆಯಾಗಿತ್ತು. ರಜೆಯ ಸಂಭ್ರಮದಲ್ಲಿ ಬಂದಿದ್ದವನಿಗೆ ಅಣ್ಣನೇ ಪರಲೋಕದ ದಾರಿ ತೋರಿಸಿದ್ದ.

ಪ್ರಕರಣಕ್ಕೆ ಟ್ವಿಸ್ಟ್ , ಅಣ್ಣನೇ ಹಂ*ತಕ:


ಆನೇಕಲ್ ತಾಲೂಕಿನ ನೆರಿಗಾ ಗ್ರಾಮ ಅಂದು ಬೆಚ್ಚಿ ಬಿದ್ದಿತ್ತು. ಬಹಿರ್ದೆಸೆಗೆ ತೆರಳಿದ್ದ ಬಾಲಕ ಪ್ರಾಣೇಶ್(15) ಶ*ವವಾಗಿ ಪತ್ತೆಯಾಗಿದ್ದ. ಯಾರು ಈ ದುಷ್ಕೃತ್ಯ ಮೆರೆದವರು ಎಂದು ಪ್ರಕರಣ ಬೆಂಬತ್ತಿದ ಪೊಲೀಸರಿಗೆ ಸಾಕ್ಷಿಗಳು ಬಾಲಕನ ಅಣ್ಣನತ್ತ ಬೆಟ್ಟು ಮಾಡಿ ತೋರಿಸಿದ್ದವು.
ತಮ್ಮನನ್ನೇ ಕೊ*ಲೆಗೈದಿದ್ದ ಅಣ್ಣ 18 ವರ್ಷದ ಅಣ್ಣ ಶಿವಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಮೊಬೈಲ್ ಚಟವೇ ಈ ಕೊ*ಲೆಗೆ ಕಾರಣ ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ.

ಮೊಬೈಲ್ ನಿಂದಾಗಿ ಹೋಯ್ತು ಜೀವ:

ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ಎಂಬ ಕೂಲಿಕಾರ್ಮಿಕ ದಂಪತಿ 3 ತಿಂಗಳ ಹಿಂದೆ ಗಾರೇ ಕೆಲಸಕ್ಕೆಂದು ಆಂಧ್ರದಿಂದ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ದೊಡ್ಡ ಮಗನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ತಮ್ಮೊಂದಿಗೆ ಕರೆದುಕೊಂಡು ಬಂದು ಗಾರೇ ಕೆಲಸಕ್ಕೆ ಹಾಕಿದ್ದರು. ಚಿಕ್ಕ ಮಗನಿಗೆ ಓದಿನಲ್ಲಿ ಆಸಕ್ತಿ ಇದ್ದ ಕಾರಣ ಅಜ್ಜಿ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು. ಆಂಧ್ರದ ಕರ್ನೂಲ್​ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಪ್ರಾಣೇಶ್ ಏಳನೇ ತರಗತಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ.

ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್​ನ ಮೊಬೈಲ್​ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್​ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15 ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್​ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಹ*ತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ ಎಂಬಂತೆ ಓಡಾಡಿಕೊಂಡಿದ್ದ.

ನಾಟಕವಾಡಿದ್ದ ಶಿವಕುಮಾರ್ :

ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶ*ವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಪೋಷಕರು ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

ಈ ವೇಳೆ ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಠಾಣೆಗೆ ಕರೆದು ಕೊಂಡು ಹೋಗಿ ಬಾಯಿ ಬಿಡಿಸಿದ್ದಾರೆ. ಈ ವೇಳೆ ಸತ್ಯಾಂಶ ಬಯಲಾಗಿದೆ. ಅಲ್ಲದೇ,  ಆರೋಪಿ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಒಬ್ಬ ಮಗ ಇಹಲೋಕ ತ್ಯಜಿಸಿದ, ಇನ್ನೊಬ್ಬ ಮಗ ಜೈಲು ಪಾಲಾದ ನೋವಿನಿಂದ ಪೋಷಕರು ಕಣ್ಣೀರು ಹಾಕ್ತಿದ್ದಾರೆ.

Continue Reading

LATEST NEWS

ಕನ್ಹಯ್ಯಾ ಕುಮಾರ್‌ಗೆ ಕಪಾಳಮೋಕ್ಷ..! ಬಿಜೆಪಿ ಅಭ್ಯರ್ಥಿಯ ಕೈವಾಡ..!

Published

on

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ನಡುವೆ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಗಲಭೆ ನಡೆದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಕನ್ಹಯ್ಯಾ ಕುಮಾರ್ ಶುಕ್ರವಾರ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರ ಬರುತ್ತಿದ್ದಾಗ ಈ ಹಲ್ಲೆ ನಡೆಸಲಾಗಿದೆ. ಈ ವೇಳೆ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಪೋರೇಟರ್ ಛಾಯಾ ಶರ್ಮಾ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾರೆ.
ಈಶಾನ್ಯ ದೆಹಲಿಯ ಉಸ್ಮಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಆರೋಪಿಗಳ ಬಂಧನ :

ಈ ಬಗ್ಗೆ ದೂರು ನೀಡಿರುವ ಛಾಯಾ ಶರ್ಮಾ “ಕೆಲವರು ಬಂದು ಕನ್ಹಯ್ಯಾ ಕುಮಾರ್‌ಗೆ ಹಾರ ಹಾಕಿದರು. ಅವರಿಗೆ ಮಾಲೆ ಹಾಕಿದ ನಂತರ, ಕನ್ಹಯ್ಯಾ ಕುಮಾರ್ ಮೇಲೆ ಶಾಯಿ ಎಸೆದು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ನನ್ನ ಜೊತೆ ಅನುಚಿತವಾಗಿ ವರ್ತಿಸಿದರು” ಎಂದು ಹೇಳಿದ್ದಾರೆ.

ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆಯಾಗುತ್ತಿದ್ದಂತೆ ಅಭಿಮಾನಿಗಳು ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿ ಯುವಕನನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಆರೋಪ :

ಈ ಹಲ್ಲೆಯ ಹಿಂದೆ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಇದ್ದಾರೆ ಎಂದು ಕನ್ಹಯ್ಯಾ ಕುಮಾರ್ ಬೆಂಬಲಿಗರು ಆರೋಪಿಸಿದ್ದಾರೆ. ಕನ್ಹಯ್ಯಾ ಅವರಿಗೆ ಸಿಗುತ್ತಿರುವ ಭಾರೀ ಜನ ಬೆಂಬಲ ಹಾಗೂ ಸೋಲಿನ ಭೀತಿಯಿಂದ ಮನೋಜ್ ತಿವಾರಿ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಮೇ 25 ರಂದು ಇದಕ್ಕೆ ಜನರು ಮತದಾನ ಮಾಡುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

ದೆಹಲಿಯಲ್ಲಿ ಮೇ 25 ರಂದು ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 2019ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಮನೋಜ್ ತಿವಾರಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಮತ್ತೊಂದೆಡೆ, ಕನ್ಹಯ್ಯಾ ಕುಮಾರ್ ಅವರನ್ನು ಐಎನ್‌ಡಿಐಎ ಬ್ಲಾಕ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕನ್ಹಯ್ಯ ಜೆಎನ್‌ಯುನಿಂದ ರಾಜಕೀಯವನ್ನು ಪ್ರಾರಂಭಿಸಿದರು, ಮನೋಜ್ ತಿವಾರಿ ಪ್ರಸಿದ್ಧ ನಟ ಮತ್ತು ಗಾಯಕರಾಗಿದ್ದರು. ಬಳಿಕ ರಾಜಕೀಯಕ್ಕೆ ಪ್ರವೇಶಿಸಿದರು.

Continue Reading

DAKSHINA KANNADA

”ನಮ್ಮ ಕಂಬಳ ಪ್ರಶಸ್ತಿ ಪ್ರದಾನ 2024”ರ ಸಂಭ್ರಮ; ಕಂಬಳ ಸಾಧಕರನ್ನು ಗುರುತಿಸಿ ಗೌರವಿಸಿದ “ನಮ್ಮ ಕುಡ್ಲ”

Published

on

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2023/24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಒಟ್ಟು 24 ಕಂಬಳಗಳ 6 ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ವಿಶೇಷ ಕಾರ್ಯಕ್ರಮ ಶುಕ್ರವಾರ (ಮೇ 17) ಮಂಗಳೂರಿನ ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.


ನಮ್ಮಕುಡ್ಲ ಟಿವಿ ಚಾನೆಲ್, ನಮ್ಮ ಕಂಬಳ ಟೀಮ್ ದುಬಾಯಿ ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ಉದ್ಘಾಟಿಸಿದರು. ನಮ್ಮಕುಡ್ಲ ಚಾನೆಲ್ ನ ಸಿಒಒ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು ‘ನಮ್ಮಕಂಬಳ ಪ್ರಶಸ್ತಿ 2024’ ರ ಬಗ್ಗೆ ಮಾಹಿತಿ ನೀಡಿದರು.

‘ನಮ್ಮ ಕಂಬುಲ ನನ ದುಂಬುಲ’ ಕೈಪಿಡಿ ಬಿಡುಗಡೆ

ಕದ್ರಿ ನವನೀತ ಶೆಟ್ಟಿ ಮತ್ತು ಸನತ್ ಕುಮಾರ್ ಶೆಟ್ಟಿ ದುಬಾಯಿ ಸಂಪಾದಿತ ‘ನಮ್ಮ ಕಂಬುಲ ನನ ದುಂಬುಲ’ ಎಂಬ 2023/24 ನೇ ಸಾಲಿನ ಕಂಬಳದ ಮಾಹಿತಿ ಕೈಪಿಡಿಯನ್ನು ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಬಿಡುಗೆಡೆ ಮಾಡಿದರು. ರಿಯಲ್‌ಎಸ್ಟೇಟ್‌ಉದ್ಯಮಿ ಹಾಗೂ ಬಿಲ್ಡರ್ ಕ್ಷೇತ್ರದ ಹಿರಿಯ ಸಾಧಕ ರೋಹನ್ ಕಾರ್ಪೋರೇಷನಿನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಅವರಿಗೆ ಪೇಟ ಧರಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವ ಸನ್ಮಾನ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಡಾ.ಮೋಹನ್ ಆಳ್ವ ಮಾತನಾಡಿ, ಕಾಲದೊಂದಿಗೆ ಬದಲಾದ ಕಂಬಳ ಇಂದು ಜಗತ್ತಿನ ಗಮನ ಸೆಳೆದೆದಿದೆ. ಹಂತ ಹಂತವಾಗಿ ಕಂಬಳ ಬದಲಾಗಿ ಇಂದು ಲಕ್ಷಾಂತರ ಜನರನ್ನು ತಲುಪಿದೆ. ಇಂತಹ ಬದಲಾವಣೆಗಳ ಜತೆಗೆ ಕಂಬಳದಲ್ಲಿ ಕೋಣಗಳನ್ನು ಬಿಡುವ ವಿಚಾರದಲ್ಲೂ ಬದಲಾವಣೆ ಆಗ ಬೇಕು ಎಂದರು.

ರೋಹನ್ ಮೊಂತೆರೊ ಅವರು ಮಾತನಾಡಿ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಬಾಲ್ಯದಲ್ಲಿ ತಾನು ಕೂಡಾ 2 ವರ್ಷ ಗದ್ದೆಯಲ್ಲಿ ಉಳುಮೆ ಮಾಡಿದ್ದೇನೆ. ಕೋಣಗಳನ್ನು ಸಾಕುವ ಕಷ್ಟ ನನಗೂ ಗೊತ್ತು ಎಂದು ಹೇಳಿ ನಮ್ಮಕುಡ್ಲ ಚಾನೆಲ್ ಮತ್ತು ಸಂಘಟಕರನ್ನು ಅಭಿನಂದಿಸಿದರು.

ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪುತ್ತೂರು ಶಾಸಕ, ಬೆಂಗಳೂರು ಕಂಬಳದ ಸಾರಥಿ ಅಶೋಕ್‌ ಕುಮಾರ್ ರೈ, ಆಭರಣ ಟೈಮ್ ಲೆಸ್ ಜುವೆಲ್ಲರಿ ಬೆಂಗಳೂರು ಇದರ ಮಾಲಕ ಪ್ರತಾಪ್ ಮಧುಕರ ಕಾಮತ್, ಎಸ್.ಎಲ್. ಡೈಮಂಡ್ ಹೌಸ್ ನ ಮಾಲಕ ಪ್ರಶಾಂತ್ ಶೇಟ್, ಜನಪದ ವಿದ್ವಾoಸ ಹಾಗೂ ಕಂಬಳದ ಪ್ರಧಾನ ತೀರ್ಪುಗಾರ ಗುಣಪಾಲ ಕಡoಬ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಡೀನ್ ಡಾ. ಆದರ್ಶ ಗೌಡ, ಅದಾನಿ ಸಂಸ್ಥೆಯ ಸಿಇಒ ಕಿಶೋರ್ ಆಳ್ವ, ಪಟ್ಲ ಫೌಂಡೇಶನಿನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿ, ವಂದಿಸಿದರು. ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುದರ್ಶನ್, ಅಮಿತಾ, ಸುರೇಖಾ ಶೆಟ್ಟಿ ಮತ್ತಿತರರು ಇದ್ದರು. ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

120 ಪ್ರಶಸ್ತಿ ಪ್ರದಾನ :

ಕಂಬಳದ ಚಾಂಪಿಯನ್ ಕೋಣ ಹಾಗೂ ಕೋಣದ ಯಜಮಾನರಿಂದ ಹಿಡಿದು ತಂಡದ ಎಲ್ಲಾ ಸದಸ್ಯರನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಒಟ್ಟು ಸುಮಾರು 120 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕನೆ ಹಲಗೆ ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್, ಹಗ್ಗ ಕಿರಿಯ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ, ನೇಗಿಲು ಹಿರಿಯ ಬೋಳದ ಗುತ್ತು ಸತೀಶ್ ಶೆಟ್ಟಿ, ನೇಗಿಲು ಕಿರಿಯ ಮುನಿಯಾಲ್ ಉದಯಕುಮಾರ್ ಶೆಟ್ಟಿ ಸೇರಿದಂತೆ ಕೋಣಗಳ ಯಜಮಾನರಿಗೆ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ : ಕೊನೆಗೂ ಮೌನ ಮುರಿದ ಎಚ್‌ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?

ಬೈಂದೂರು ಮಹೇಶ್ ಪೂಜಾರಿ, ಭಟ್ಕಳ ಹರೀಶ್, ಬಂಬ್ರಾಣ ಬೈಲ್ ವಂದಿತ್ ಶೆಟ್ಟಿ, ಭಟ್ಕಳ ಶಂಕರ ನಾಯ್ಕ್, ಕಕ್ಕೆ ಪದವು ಪೆರ್oಗಾಲ್ ಕೃತಿಕ್ ಗೌಡ ಮತ್ತು ಮಾಸ್ತಿಕಟ್ಟೆ ಸ್ವರೂಪ್ ಸಹಿತ 6 ವಿಭಾಗಗಳಲ್ಲಿ ಕೋಣ ಓಡಿಸುವವರನ್ನು ನಮ್ಮ ಕಂಬಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6 ವಿಭಾಗಗಳ ಕೋಣಗಳಿಗೆ ಚಾoಪಿಯನ್ ಅವಾರ್ಡ್ ಪ್ರದಾನ ಮಾಡಲಾಯಿತು. ಕಂಬಳ ಸಂಯೋಜಕರು ಮತ್ತು ತೀರ್ಪುಗಾರರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Continue Reading

LATEST NEWS

Trending