ನೆರೆಗೆ ಕೊಚ್ಚಿಹೋಗಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ರಘುಪತಿ ಭಟ್
ಉಡುಪಿ : ನೆರೆಗೆ ಕೊಚ್ಚಿಹೋಗಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಶಾಸಕ ಕೆ. ರಘುಪತಿ ಭಟ್ ಪರಿಹಾರ ವಿತರಣೆ ಉಡುಪಿ ವಿಧಾನಸಭಾ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಸುಧಾಮ ಪೂಜಾರಿ ಎಂಬುವವರು ಇತ್ತೀಚೆಗೆ ಸುರಿದ ಭಾರಿ ಮಳೆಯ ನೆರೆಗೆ ಕೊಚ್ಚಿಹೋಗಿ ಮೃತಪಟ್ಟಿರುತ್ತಾರೆ.
ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಶಿಫಾರಸ್ಸು ಮಾಡಿರುವಂತೆ ಪ್ರಾಕೃತಿಕ ಪರಿಹಾರ ನಿಧಿಯಿಂದ ರೂ. 5 ಲಕ್ಷ ಮಂಜೂರಾಗಿರುತ್ತದೆ.
ಮೃತರ ಮನೆಗೆ ಭೇಟಿ ನೀಡಿದ ಶಾಸಕ ಕೆ. ರಘುಪತಿ ಭಟ್ ರವರು ಮೃತ ಸುಧಾಮ ಪೂಜಾರಿ ಅವರ ಕುಟುಂಬದವರಿಗೆ ರೂ. 5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.
ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕರಾದ ವಿಶ್ವನಾಥ್, ಕಲ್ಯಾಣಪುರ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.