Connect with us

DAKSHINA KANNADA

ಸುಳ್ಯ: ಸ್ನೇಹಿತನ ರೂಮಿಗೆ ಕರಕೊಂಡು ಹೋಗಿ ವಿದ್ಯಾರ್ಥಿನಿಯನ್ನು ಬಸುರಿ ಮಾಡಿದ ಉಬರಡ್ಕದ ತೀರ್ಥಪ್ರಸಾದ..!

Published

on

ಸುಳ್ಯ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನು ತನ್ನ ಸ್ನೇಹಿತನ ಕೋಣೆಗೆ ಕರಕೊಂಡು ಹೋಗಿ ಲೈಂಗಿಕವಾಗಿ ಬಳಸಿ ಗರ್ಭವತಿ ಮಾಡಿದ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ವಾಟ್ಸ್‌ ಅಪ್ ಗ್ರೂಪ್ ನಲ್ಲಿ ಯುವಕನ ಪರಿಚಯವಾಗಿತ್ತು.

ವಿದ್ಯಾರ್ಥಿನಿ ತನಗೆ ಆಗಾಗ ಹೊಟ್ಟೆನೋವು ಬರುತ್ತಿದೆ ಎಂದು ಮನೆಯವರಿಗೆ ಹೇಳಿದ್ದಳು. ಈ ಬಗ್ಗೆ ವೈದ್ಯರಲ್ಲಿ ತಪಾಸಣೆ ನಡೆಸಿದಾಗ ವಿದ್ಯಾರ್ಥಿನಿ  ಬಸುರಿ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ವಾಟ್ಸ್​ಆ್ಯಪ್​ ಗ್ರೂಪ್ ಒಂದರಲ್ಲಿ ಪರಿಚಯವಾದ ಇಲ್ಲಿನ ಉಬರಡ್ಕದ ತೀರ್ಥಪ್ರಸಾದ್ (25) ಎಂಬಾತ ನಾಲ್ಕು ತಿಂಗಳ ಹಿಂದೆ ತನ್ನನ್ನು ಇಲ್ಲಿನ ಕಾಲೇಜೊಂದರ ಬಳಿ ಇರುವ ಆತನ ಸ್ನೇಹಿತನ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ವಿಚಾರವನ್ನು ಹೇಳಿಕೊಂಡಿದ್ದಾಳೆ .

ಈ ಬಗ್ಗೆ  ವಿದ್ಯಾರ್ಥಿನಿಯ ತಂದೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಯುವಕನ ವಿರುದ್ಧ  ಪೋಕ್ಸೋ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಚುನಾವಣಾ ಆಯೋಗಕ್ಕೆ ದೂರು

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

DAKSHINA KANNADA

ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ

Published

on

ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.

Continue Reading

LATEST NEWS

Trending