Connect with us

  DAKSHINA KANNADA

  ಮಂಗಳೂರು: ನಿಗದಿತ ಕಾಲಾವಧಿಯಲ್ಲಿ ಕಾಮಾಗಾರಿ ಪೂರ್ಣಗೊಳಿಸಿ-ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಸೂಚನೆ.!

  Published

  on

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆಗಳು, ಕುಡಿಯುವ ನೀರು ಪೂರೈಕೆ, ಅರಣ್ಯ ಪ್ರದೇಶದ ಸಮಸ್ಯೆಗಳು, ಕಡಲ್ಕೊರೆತ , ಪ್ರಕೃತಿ ವಿಕೋಪದ ಬಗ್ಗೆ ಇವತ್ತು ನಡೆದ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ.

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆಗಳು, ಕುಡಿಯುವ ನೀರು ಪೂರೈಕೆ, ಅರಣ್ಯ ಪ್ರದೇಶದ ಸಮಸ್ಯೆಗಳು, ಕಡಲ್ಕೊರೆತ , ಪ್ರಕೃತಿ ವಿಕೋಪದ ಬಗ್ಗೆ ಇವತ್ತು ನಡೆದ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ.

  ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.

  ಮುಂದಿನ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಲಾಗುವುದು. ಮೀಸಲಿಟ್ಟ ಅನುದಾನ ಆಯಾ ಕಾಮಗಾರಿಗಳಿಗೆ ಬಳಕೆ ಆಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.
  ಮಂಗಳೂರಿನಲ್ಲಿ ಇಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
  ಸರಕಾರಿ ಯೋಜನೆಯ ಅಕ್ಕಿ ಖರೀದಿ ವಿಚಾರದಲ್ಲಿ ಕೇಂದ್ರ ಸರಕಾರ ಅಡ್ಡಿ ಪಡಿಸುತ್ತಿದೆ ಎನ್ನುವ ವಿಚಾರದಲ್ಲಿ ಮಾತನಾಡಿದ ಅವರು ಬಿಜೆಪಿ ನಮ್ಮ ಜೊತೆ ಕೈಜೋಡಿಸಬೇಕು. ಅಕ್ಕಿ ಖರೀದಿ ವಿಚಾರದಲ್ಲಿ ಬಿಜೆಪಿ ನಾಯಕರು ಸಕಾರಾತ್ಮವಾಗಿ ಮಾತನಾಡಬೇಕು.

  ಕೇಂದ್ರ ಸರಕಾರದಲ್ಲಿ ಬೇಕಾದಷ್ಟು ಸ್ಟಾಕ್ ಇದೆ. ಅಕ್ಕಿ, ಗೋಧಿ ಕೊಡಲು ಕೇಂದ್ರಕ್ಕೆ ಕಷ್ಟ ಏನೂ ಇಲ್ಲ. ಓಪನ್ ಮಾರ್ಕೆಟ್ ಸ್ಕೀಮ್‌ ಇದೆ.

  ನಾವು ದುಡ್ಡು ಕೊಟ್ಟು ತೆಗೆದುಕೊಳ್ಳುವುದು ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಅವರ ಹೇಳಿಕೆಯಿಂದ ಅವರಿಗೆ ಜನರ ಹಿತಾಸಕ್ತಿಗೆ ಮಾತನಾಡುವುದಕ್ಕಿಂತ ಕಾಂಗ್ರೆಸ್‌ಗೆ ಅಕ್ಕಿ ಸಿಗದೇ ಕಷ್ಟ ಆಗುತ್ತಿದೆಯಲ್ಲಾ ಅದು ಖುಷಿ ಕಾಣುತ್ತಿದೆ ಎಂದರು.

  ಅಕ್ಕಿ ಖರೀದಿ ಮಾಡಲು ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಏನುಮಾಡಬೇಕೆಂದು ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತಾರೆ.

  ಕೇಂದ್ರದಲ್ಲಿ ಅಕ್ಕಿ ಇಲ್ಲದೇ ಇದ್ದರೆ ಸರಿ, ಆದರೆ ಅವರಲ್ಲಿ ಬೇಕಾದಷ್ಟು ಅಕ್ಕಿ ಇದೆ. ಆದರೆ ಅವರು ಈ ರೀತಿ ಮಾಡುವ ಉದ್ದೇಶ ಏನು ಎಂದು ಗುಂಡೂರಾವ್ ಪ್ರಶ್ನಿಸಿದರು.
  ಇಂದಿರಾ ಕ್ಯಾಂಟೀನ್ ಸದೃಢ ಮಾಡಲು ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಆದರೆ ಕ್ಯಾಂಟೀನ್ ಕಟ್ಟಡದಲ್ಲಿ ಸೋರಿಕೆ ಆಗುತ್ತದೆ ಎಂದಾದರೆ ನಾನು ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸುತ್ತೇನೆ ಎಂದರು.
  ಗಡಿ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳಲ್ಲಿ ಕನ್ನಡ ಬಾರದ ಶಿಕ್ಷಕಿಯರನ್ನು ನೇಮಿಸಿದರೆ ಏನೂ ಪ್ರಯೋಜನವಿಲ್ಲ.

  ರಾಜ್ಯ ಸರಕಾರದ ಜೊತೆ ಮಾತನಾಡಿ, ಕನ್ನಡ ಭಾಷೆ ಓದುವವರಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಬೇಕಾಗಿದೆ.

  ಅಲ್ಲಿ ಕನ್ನಡ ಶಿಕ್ಷಕರನ್ನೇ ನಿಯೋಜಿಸಲು ಈ ಬಗ್ಗೆ ಕೇರಳ ಸರಕಾರದ ಜೊತೆ ಮಾತನಾಡಲು ನಾನು ಸಂಬಂಧಪಟ್ಟವರಿಗೆ ಸೂಚಿಸುವೆ ಎಂದರು.

  DAKSHINA KANNADA

  ಬಜಪೆ: ಅದ್ಯಪಾಡಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತ

  Published

  on

  ಬಜಪೆ ಸಮೀಪದ ಅದ್ಯಪಾಡಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 80 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಸಿದ ಕಿಂಡಿ ಅಣೆಕಟ್ಟು ಈ ನೆರೆಗೆ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ.

  ಕಳೆದ ಹತ್ತು ವರ್ಷದಿಂದ ಈ ಗ್ರಾಮದ ಜನರು ಮಳೆಗಾಲದಲ್ಲಿ ಸಂಕಷ್ಟಕ್ಕೆ ಗುರಿಯಾಗುತ್ತಿದ್ದು, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ರೈತರು ಈಗಾಗಲೇ ತಮ್ಮ ಕೃಷಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಉಂಟಾಗುವ ನೆರೆಯಿಂದ ಮನೆಗಳೂ ಕುಸಿಯುವ ಭೀತಿ ಎದುರಾಗಿದೆ.

  ಈ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಜನರ ಸಂಕಷ್ಟ ಕೇಳಿದ್ದಾರೆ. ದೋಣಿಯ ಮೂಲಕ ಇಲ್ಲಿನ ಮನೆಗಳಿಗೆ ತೆರಳಿದ ಜಿಲ್ಲಾದಿಕಾರಿ ಮನೆಯಲ್ಲಿದ್ದ ವೃದ್ಧರಿಗೆ ಸಾಂತ್ವಾನ ಹೇಳಿದ್ದಾರೆ. ಸುಮಾರು 80 ಜನರು ಇಲ್ಲಿ ವಾಸವಾಗಿದ್ದು, ಜನರನ್ನು ಸ್ಥಳಾಂತರ ಮಾಡಿ ಸುರಕ್ಷಿತ ಜಾಗಕ್ಕೆ ಕಳುಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

  ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ಥಳೀಯ ಜನರ ಬಳಿ ಮಾತನಾಡಿದ್ದು, ಅವರು ಪ್ರಮುಖ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಗಮನ ಹರಿಸಲಾಗುವುದು ಆದ್ರೆ ಅದಕ್ಕೂ ಮೊದಲು ಈಗ ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

  Continue Reading

  BANTWAL

  ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

  Published

  on

  ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

  ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

  ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

  Continue Reading

  DAKSHINA KANNADA

  ಒಂದೇ ಗಂಟೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ

  Published

  on

  ಮಂಗಳೂರು: ರೈಲ್ವೇ ಇಲಾಖೆಗೆ ಹೆಚ್ಚುವರಿ ರೈಲು ಓಡಿಸುವಂತೆ ಸಂಸದ ಬ್ರಿಜೇಶ್ ಚೌಟ ಮಾಡಿದ ಮನವಿಗೆ ನೈರುತ್ಯ ರೈಲ್ವೇ ಇಲಾಖೆ ಸ್ಪಂಧಿಸಿದೆ.

  ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ಆದೇಶ ಹೊರಡಿಸಿದೆ. ಶುಕ್ರವಾರ ಹಾಗೂ ಶನಿವಾರದಂದು ತಲಾ ಒಂದು ಹಾಗೂ ಶನಿವಾರ ಹಾಗೂ ಭಾನುವಾರದಂದು ತಲಾ ಎರಡು ಹೆಚ್ಚುವರಿ ರೈಲು ಓಡಿಸುವ ಬಗ್ಗೆ ರೈಲ್ವೇ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

  ಮಂಗಳೂರು ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಿದ್ದು, ಮಳೆಯ ಕಾರಣ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದ ವಿಧಿಸಲಾಗಿದೆ. ಹೀಗಾಗಿ ಜನರ ಅಗತ್ಯತೆ ಪೂರೈಸಲು ಹೆಚ್ಚುವರಿ ರೈಲು ಓಡಿಸುವಂತೆ ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು.

  ಸಂಸದರ ಪತ್ರ ಕೈ ಸೇರಿದ ಒಂದೇ ಘಂಟೆಯಲ್ಲಿ ನೈರುತ್ಯ ರೈಲ್ವೇ ಇಲಾಖೆ ಹೆಚ್ಚುವರಿ ರೈಲು ಓಡಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದು, ಹೆಚ್ಚುವರಿ ರೈಲು ಓಡಾಟದ ಸಮಯವನ್ನು ನಿಗಧಿ ಪಡಿಸಿದೆ. ಈ ಕಾರಣದಿಂದ ಮಾಮೂಲ ರೈಲಿನಲ್ಲಿ ಪ್ರಯಾಣಿಕರಿಗೆ ಸೀಟು ಸಿಗದ ಪರದಾಡುವುದು ಕೂಡಾ ತಪ್ಪಿದಂತಾಗಿದೆ.

  Continue Reading

  LATEST NEWS

  Trending