Friday, June 2, 2023

ಎಮ್ಮೆಕೆರೆಯ ಕೋಳಿ ಕಲದ ಕಾದಾಟದಲ್ಲಿ ಕಕ್ಕೆ ರಾಹುಲ್‌ ಅಂತ್ಯ..!

ಮಂಗಳೂರು: ಅವ್ನಿಗೆ ಕೋಳಿ ಕಟ್ಟ ಅಂದ್ರೆ ಹುಚ್ಚು. ಎಮ್ಮೆಕೆರೆಯಲ್ಲಿ ನಡೆಯುವ ಕೋಳಿ ಕಟ್ಟಕ್ಕೆ ಆತ ಬಂದೇ ಬರ್ತಾನೆ ಎಂದು ಮುಹೂರ್ತ ಇಟ್ಟು

ಕಾಯ್ತಾ ಇದ್ದಾಗಲೇ ಸ್ಕೂಟಿಯಲ್ಲಿ ಬಂದಿಳಿದ ರಾಹುಲ್‌ನನ್ನು ಮಹೇಂದ್ರ ಆ್ಯಂಡ್‌ ಗ್ಯಾಂಗ್‌ ಅಟ್ಟಾಡಿಸಿ ನಿನ್ನೆ ಎತ್ತೇಬಿಟ್ಟಿತು.


ಕೊಲೆಯಾದ ರಾಹುಲ್‌ ತಿಂಗಳಾಯ ಅಲಿಯಾಸ್‌ ಕಕ್ಕೆ ರಾಹುಲ್‌ (29) ಪೊಲೀಸ್ ಇಲಾಖೆಗೆ ಅವನೊಬ್ಬ ರೌಡಿಶೀಟರ್.

ಹೊಯ್ಗೆ ಬಜಾರ್‌ನ ಪರಿಸರದಲ್ಲಿ ಓಡಾಡಿ ಬೆಳೆದ ಕಕ್ಕೆ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮತ್ತು ಸಕ್ರೀಯನಾಗಿದ್ದ.

ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈತನ ಮೇಲೆ ಕೊಲೆಯತ್ನ, ಹಲ್ಲೆ ಸೇರಿ 12ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಈತ ಆರೋಪಿಯಾಗಿದ್ದ. ಆದ್ರೆ ಮಹೇಂದ್ರ ಹಾಗಲ್ಲ ತಾನಾಯಿತು.

ತನ್ನ ಫ್ರೆಂಡ್ಸ್‌ ಆಯಿತು ಅಂತಿದ್ದವ. ಕೊಲೆಯಾದ ರಾಹುಲ್‌ ಮತ್ತು ಕೊಲೆಗೈದ ಮಹೇಂದ್ರ ಇಬ್ಬರೂ ಸಣ್ಣ ವಯಸ್ಸಿಂದಲೇ ಚಿರಪರಿಚಿತರು.

ಆದರೆ 2019ರಲ್ಲಿ ಬೋಳಾರದಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿಗೆ

ಮಾತು ಬೆಳೆದು ವಿಕೋಪಕ್ಕೆ ಹೋಗಿ ರಾಹುಲ್‌ ಮಹೇಂದ್ರನ ಮೇಲೆ ಬಾಟಲಿ, ಚೂರಿಯಿಂದ ಹಲ್ಲೆ ನಡೆಸಿದ್ದ. ಈ ದ್ವೇಷ ಮಹೇಂದ್ರನ ಮನಸಿನಲ್ಲಿ ಕುದಿಯುತ್ತಿತ್ತು.

ಆತ ತನ್ನ ಮೇಲೆ ಹಲ್ಲೆ ನಡೆಸಿ ರಿವೇಂಜ್‌ ತೆಗೆಯಲು ಮಹೇಂದ್ರ ಕಾಯ್ತಾ ಇದ್ದ. ಕಕ್ಕೆಗೆ ಕೋಳಿ ಅಂಕ ಅಂದ್ರೆ ಹುಚ್ಚು. ಕೋಳಿ ಕಟ್ಟ ಎಲ್ಲಿ ನಡಿತಿದೆಯೋ ಅಲ್ಲಿ ಕಕ್ಕೆ ಹಾಜರಿರುತ್ತಿದ್ದ.

ಈ ವಿಷಯ ಎದುರಾಳಿ ಮಹೇಂದ್ರನಿಗೆ ಪಕ್ಕಾ ಗೊತ್ತಿತ್ತು . ಅದರಂತೆ ನಿನ್ನೆ ನಗರದ ಎಮ್ಮೆಕೆರೆಯಲ್ಲಿ ಕೋಳಿ ಕಟ್ಟ ನಡೆಯುತ್ತಿತ್ತು.

ಅಲ್ಲಿಗೆ ಕಕ್ಕೆ ಬಂದೇ ಬರ್ತಾನೆ ಎಂಬುವುದು ಮಹೇಂದ್ರನಿಗೆ ಖಾತರಿ ಇತ್ತು.

ಅದಕ್ಕಾಗಿ ಮೊದಲೇ ಎರಡು ಬೈಕಿನಲ್ಲಿ ತಲವಾರು ಮತ್ತು ಕತ್ತಿಯೊಂದಿಗೆ ಬಂದಿದ್ದ ಮಹೇಂದ್ರ, ಅಕ್ಷಯ್‌, ಸುಶಿತ್‌ ಹಾಗೂ ಮತ್ತೋರ್ವ ಆರೋಪಿ ಕಕ್ಕೆಗಾಗಿ ಹೊಂಚು ಹಾಕ್ತಾ ಇದ್ರು.

ಮಹೇಂದ್ರನ ಯೋಜನೆಯಂತೆ ಸಂಜೆ 5 ಗಂಟೆ ಸುಮಾರಿಗೆ ಕಕ್ಕೆ ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಕೋಳಿ ಅಂಕದ ಬಳಿ ಬಂದು ಅದೇನೋ ಸ್ಕೂಟಿ ಸ್ಟ್ಯಾಂಡ್‌ ಹಾಕ್ತಿದ್ದಂತೆ ಆತನ ಮೇಲೆ ಮಹೇಂದ್ರ ಆ್ಯಂಡ್‌ ಗ್ಯಾಂಗ್‌ ಮಿಂಚಿನಂತೆ ಎರಗಿದೆ.

 ತಕ್ಷಣ ಸ್ಕೂಟಿ ಅಲ್ಲೇ ಬಿಟ್ಟು ಗ್ರೌಂಡ್‌ ಉದ್ದಕೂ ಕಕ್ಕೆ ಜೀವ ಉಳಿಸಲು ಓಡಲು ಪ್ರಾರಂಭಿಸಿದ್ದಾನೆ. ಮಹೇಂದ್ರ ಮತ್ತು ಟೀಂ ತಕ್ಷಣ ಕಳ್ವೆ ಕಳ್ವೆ(ಕಳ್ಳ ಕಳ್ಳ) ಎಂದು ಬೊಬ್ಬೆ ಹಾಕಿ ಬೆನ್ನಟ್ಟಿದ್ದಾನೆ.

ಇತ್ತ ಕೋಳಿ ಕಟ್ಟದ ಕಲದಲ್ಲಿ ಹುಂಜಗಳು ಬಾಲ್‌ (ಚೂಪಾದ ಕತ್ತಿ) ಕಟ್ಟಿ ಓಡಾಡುತ್ತಿದ್ದರೆ. ಹೊರಗೆ ಕಕ್ಕೆಯನ್ನು ನಾಲ್ವರು ತಲವಾರುಗಳೊಂದಿಗೆ ಬೆನ್ನಟ್ಟುತ್ತಿದ್ದರು.

ಓಡಿ ಓಡಿ ಸುಸ್ತಾದ ರಾಹುಲ್ ಸ್ವಲ್ಪ ದೂರ ಓಡಿ ಹತ್ತಿರದಲ್ಲೇ ಇದ್ದ ದೈವಸ್ಥಾನದ ಆವರಣಗೋಡೆ ಹಾರಲು ಯತ್ನಿಸಿದ್ದಾನೆ.

ಆದ್ರೆ ಒಂದು ಕಡೆ ಎತ್ತರದ ಗೋಡೆ ಮತ್ತೊಂದೆಡೆ ಓಡಿ ಓಡಿ ಸುಸ್ತಾದ ಕಾರಣ ಕಕ್ಕೆ ಮುಗ್ಗರಿಸಿ ಕೆಳಕ್ಕೆ ಬಿದ್ದಿದ್ದಾನೆ.

ಅದೇ ವೇಳೆ ಅಲ್ಲಿಗೆ ತಲುಪಿದ್ದ ಮಹೇಂದ್ರ ಅಂಡ್ ಟೀ ಬಿದ್ದ ರಾಹುಲ್ ಮೇಲೆ ಮುಗಿಬಿದ್ದು ತಲವಾರುಗಳಿಂದ ದಾಳಿ ಮಾಡಿದ್ದಾರೆ.

ತಲವಾರುಗಳ ಹೊಡೆತ ತಾಳಲಾರದೆ ರಾಹುಲ್ ಅಲ್ಲೇ ಕುಸಿದು ಬಿದ್ದಿದ್ದಾನೆ.

ಕಲದಲ್ಲಿ ಹುಂಜವೊಂದು ಎದುರಾಳಿಯನ್ನು ಕಾಲಿನಲ್ಲಿದ್ದ ಬಾಲ್‌ನಿಂದ ಹೊಟ್ಟೆಗೆ ತಿವಿದಾಕ್ಷಣ ಎದುರಾಳಿ ಹುಂಜ ರಕ್ತ ಚೆಲ್ಲಿ ಪ್ರಾಣ ಬಿಡುತ್ತಿದ್ದರೆ.

ಕಲದ ಹೊರಗೆ ಮಹೇಂದ್ರ ಆ್ಯಂಡ್‌ ಗ್ಯಾಂಗ್‌ ತಲವಾರು ದಾಳಿಯಿಂದ ಎದೆ, ಕೈ, ತಲೆ ಎಲ್ಲಾ ಕಡೆ ತಿವಿಯುತ್ತಿದ್ದಂತೆ ರಾಹುಲ್ ಉಸಿರು ಚೆಲ್ಲಿದ್ದಾನೆ.

ಕಕ್ಕೆ ರಾಹುಲ್ ಜೀವ ಹೋಗಿದ್ದನ್ನು ಕನ್‌ಫರ್ಮ್‌ ಮಾಡಿಕೊಂಡ ಮಹೇಂದ್ರ ಆ್ಯಂಡ್‌ ಟೀಮ್‌ ಸ್ಥಳದಿಂದ ಪರಾರಿಯಾಗಿದೆ.


ಇನಿ ಓಡೆಗ್ಲಾ ಪೋವೊಡ್ಚಿಂಬೆ ಎಂದಿದ್ದ ತಾಯಿ
ಮಾತೃ ಹೃದಯ ಹಾಗೇನೆ. ಅದೇಕೋ ಏನೋ ಹೆತ್ತ ಕರುಳಿಗೆ ಮಗನ ಮೇಲೆ ಇಂದು ಏನೋ ಕೆಟ್ಟದಾಗಿರುವುದು ನಡೆಯಲಿದೆ

ಎಂಬ ಮುನ್ಸೂಚನೆ ದೊರೆತ್ತಿದ್ದರಿಂದ ನಿನ್ನೆ ರಾಹುಲ್‌ ತಾಯಿ ಮಗನನ್ನು ಉದ್ದೇಶಿಸಿ ” ಮಗನೇ ಇವತ್ತು ಎಲ್ಲೂ ಹೋಗ್ಬೇಡ, ಮನೆಯಲ್ಲೇ ಇರು ಎಂದಿದ್ರಂತೆ.

ಹೆತ್ತ ಕರುಳಿಗೆ ಗೌರವ ಕೊಟ್ಟು ಮಧ್ಯಾಹ್ನದ ವರೆಗೂ ಮನೆಯಲ್ಲಿದ್ದ ರಾಹುಲ್‌ ಸಂಜೆ ವೇಳೆಗೆ ಇಲ್ಲೇ ಹೊರಗೆ ಹೋಗಿ ಬರುತ್ತೇನೆ ಎಂದು ಮನೆಬಿಟ್ಟಿದ್ದ.. ಆದರೆ ಮನೆ ಸೇರಿದ್ದು ಮಾತ್ರ ಹೆಣವಾಗಿ….

ಸ್ಟೇಷನ್‌ಗೆ ಹೋಗಿದ್ರೆ ಜೀವ ಉಳಿಯುತ್ತಿತ್ತು
ರಾಹುಲ್‌ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಆತನ ಮೇಲೆ ಪೊಲೀಸರು ರೌಡಿ ಶಿಟ್‌ ತೆರೆದಿದ್ರು.

ವಿಚಾರಣೆಗೆ ಅಂತ ಪೊಲೀಸರು ಕರೆ ಮಾಡಿದ್ರೆ ತಕ್ಷಣ ಹಾಜರಾಗುತ್ತಿದ್ದ ರಾಹುಲ್‌ಗೆ ನಿನ್ನೆಯೂ ಪ್ರಕರಣವೊಂದರ ವಿಚಾರಣೆ ಹಿನ್ನೆಲೆ ಪಾಂಡೇಶ್ವರ ಪೊಲೀಸರು ಕರೆ ಮಾಡಿ ಸ್ಟೇಷನ್‌ಗೆ ಬರ ಹೇಳಿದ್ದರು.

ಆದರೆ ಆತ ನಿನ್ನೆ ಮಧ್ಯಾಹ್ನದ ವರೆಗೂ ಬಂದಿರಲಿಲ್ಲ. ಒಂದು ವೇಳೆ ಪೊಲೀಸ್ ಠಾಣೆಗೆ ಬಂದಿದ್ದರೆ ರಾಹುಲ್ ನ ಜೀವನ ಉಳಿಯುತಿತ್ತೋ ಏನೋ ಎನ್ನುತ್ತಾರೆ ಪೊಲೀಸರು..

ಹುಲಿವೇಷದಲ್ಲಿ ಬ್ಲ್ಯಾಕ್‌ ಟೈಗರ್‌ ಎಂದೇ ಫೇಮಸ್‌..
ರಾಹುಲ್‌ಗೆ ಹುಲಿವೇಷ ಅಂದ್ರೆ ಪಂಚಪ್ರಾಣ ಪ್ರತೀ ವರ್ಷ ಆತ ನವರಾತ್ರಿ ಸಂದರ್ಭ ಹುಲಿವೇಷ ಹಾಕುತ್ತಿದ್ದ, ಅದರಲ್ಲೂ ಆತ ಹಾಕುತ್ತಿದ್ದುದು ಬ್ಲ್ಯಾಕ್‌ ಟೈಗರ್‌.

ಅಂದ್ರೆ 20 ಫೀಟ್‌ಗಿಂತಲೂ ಎತ್ತರದ ಕಟ್ಟಡದಿಂದ ಹಾರುವುದು, ಅಕ್ಕಿ ಮುಡಿಯನ್ನು ಹಲ್ಲಲ್ಲಿ ಕಚ್ಚಿ ಬಿಸಾಡುವುದು ಸೇರಿ ಅತ್ಯಂತ ಅಪಾಯಕಾರಿ ಸ್ಟಂಟ್‌ ಮಾಡ್ತಿದ್ದ ರಾಹುಲ್‌

ಹಿಂದೂ ಪರ ಸಂಘಟನೆಯಲ್ಲಿ ಸಕ್ರೀಯನಾಗಿ ಅಕ್ರಮ ಗೋ ಚಟುವಟಿಕೆಗಳ ವಿರುದ್ದ ಸಮರ ಸಾರಿದ್ದ.. ಆದ್ರೆ ಇದೀಗ ವಿರೋಧ ಕಟ್ಟಿಕೊಂಡು ಜೀವ ಕಳಕೊಂಡ..

1 COMMENT

LEAVE A REPLY

Please enter your comment!
Please enter your name here

Hot Topics