DAKSHINA KANNADA
Mangaluru: ಗಾಂಜಾ ಮಾರಾಟ- ಇಬ್ಬರು ಆರೋಪಿಗಳ ಬಂಧನ..!
ಮಂಗಳೂರು ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಸ್ಕೂಟರ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು: ಮಂಗಳೂರು ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಸ್ಕೂಟರ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬ್ದುಲ್ ರಹೀಂ ಮತ್ತು ಮೊಹಮ್ಮದ್ ಅಶ್ರಫ್ ಆರೋಪಿಗಳು.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಅಂದಾಜು ರೂ. 1,67,000 ಮೌಲ್ಯದ ಒಟ್ಟು 3 ಕೆಜಿ 378 ಗ್ರಾಂ ತೂಕದ ಗಾಂಜಾ, ತೂಕಮಾಪನ, ನಗದು ಹಣ 4,940 ಹಾಗೂ ರೂ. 50,000 ಮೌಲ್ಯದ ಆಕ್ಟಿವ ಹೋಂಡಾ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರು ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ಮಂಗಳೂರು ನಗರ ರವರ ಮಾರ್ಗದರ್ಶನಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ರವರು ಸಿಬ್ಬಂದಿಗಳಾದ ಎಎಸ್‌ಐ ದಾಮೋದರ, ಮದನ್, ಸತೀಶ್, ಸಂಪತ್, ಸುನಿಲ್ ಮತ್ತು ಗುರು ಬಿ ಟಿ ರವರ ಜೊತೆ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
Mangaluru: ಸೋಮೇಶ್ವರ ಉಚ್ಚಿಲದಲ್ಲಿ ಬಲೆಗೆ ಬಿದ್ದ ದೈತ್ಯ ಪಿಲಿ ತೊರಕೆ..!
ಮಂಗಳೂರು: ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಲಭಿಸಿದೆ.
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ನಿನ್ನೆ ಸಂಜೆ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ.
ಈ ವರ್ಷದ ತಮ್ಮ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ ಅಲೆಗಳು ಬರುತ್ತವೆ.
ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆಯೂ ಇದೆ.
ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ.
ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ.
ಮಾರಾಟ ಮಾಡುವುದಾದರೆ ಈ ಮೀನಿಗೆ ಕೆ.ಜಿ.ಗೆ 200 ರೂಪಾಯಿ ಬೆಲೆ ಇದೆ.
ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೆ ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.
DAKSHINA KANNADA
ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ
ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.
ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
DAKSHINA KANNADA
Mangaluru: ಶಿಬರೂರು ಕೊಡಮಣಿತ್ತಾಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ
ಮಂಗಳೂರು: ಕಟೀಲು ಮತ್ತು ಶಿಬರೂರು ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ, ಇಂತಹ ಶಿಬರೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಅವರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇಲ್ಲಿನ ಮೇಲಿನ ಸಾನದ ಚಾವಡಿ, ಸುತ್ತುಪೌಳಿಯ ಪುನರ್ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಜಾಂಲ ಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಕಳೆದ 12 ವರ್ಷದ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿಯೂ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಇದೀಗ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಭಕ್ತರು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದರು.
ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಕಟೀಲು ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್, ಧರ್ಮಧರ್ಶಿ ಹರಿಕೃಷ್ಣ ಪುನರೂರು, ಕೊಡೆತ್ತೂರು ವೇದವ್ಯಾಸ ಉಡುಪ, ಗುತ್ತಿನಾರ್ ಲಕ್ಷೀನಾರಾಯಣ ರಾವ್ ಕೈಯೂರುಗುತ್ತು ಉದ್ಯಮಿ ರಘನಾಥ ಸೋಮಯಾಜಿ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಎಸ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಶಿಬರೂರುಗುತ್ತು ರಾಮಚಂದ್ರ ಶೆಟ್ಟಿ, ರಾಧಕೃಷ್ಣ ಶೆಟ್ಟಿ ಸೂರತ್, ಅಶೋಕ್ ಶೆಟ್ಟಿ ಬಜಾಲ್ ಬೀಡು, ಶಿಬರೂರುಗುತ್ತು ಕಿಶೋರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ , ಉಮೇಶ್ ಗುತ್ತಿನಾರ್ ಶಿಬರೂರು ಗುತ್ತು, ಸುಧಾಕರ ಶೇಣವ ದೇಂದೊಟ್ಟು ಗುತ್ತು, ಪಡುಮನೆ ಶಿವಾನಂದ ಶೆಟ್ಟಿ, ತುಕಾಮ ಶೆಟ್ಟಿಪರ್ಲಬೈಲ್, ಜಿತೇಂದ್ರ ಶೆಟ್ಟಿ ಕೊರ್ಯಾರಗುತ್ತು, ಸದಾಶಿವ ಶೆಟ್ಟಿ ಅಶ್ವತ್ತಡಿ ಉದ್ಯಮಿ ಕಿರಣ್ ಶೆಟ್ಟಿ, ಎಸ್ ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ವಿನಯಕುಮಾರ್ ಸೂರಿಂಜೆ, ಶಿಬರೂರು ಲಕ್ಷೀಜನಾರ್ಥನ ಮಠದ ಅರ್ಚಕ ಲಕ್ಷೀನಾರಾಯಣ ಆಚಾರ್ಯ, ಕ್ಷೇತ್ರದ ಅರ್ಚಕ ಕುಟ್ಟಿಮೂಲ್ಯ, ಶಂಭು ಮುಕಾಲ್ದಿ ಅತ್ತೂರು, ಜಯರಾಮ ಮುಕಾಲ್ದಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ದೊಡ್ಡಯ್ಯ ಮೂಲ್ಯ ಕಟೀಲು, ಯಾದವ ಕೋಟ್ಯಾನ್ ಪೆರ್ಮುದೆ, ಶ್ಯಾಮಲಾ ಪಿ ಶೆಟ್ಟಿ ಶಿಬರೂರುಗುತ್ತು, ಉಷಾ ಯು ಶೆಟ್ಟಿ ಶಿಬರೂರುಗುತ್ತು, ಉದ್ಯಮಿ ನಿತ್ಯಾನಂದ ಶೆಟ್ಟಿ, ವಕೀಲರಾದ ರವಿ ಕೋಟ್ಯಾನ್, ಸಿ.ಎ ಉದಯಕುಮಾರ್ , ಸುರೇಶ್ ಶೆಟ್ಟಿ ಅಡು, ದೇವದಾಸ್ ಅಳ್ವ ಬೆಳ್ಳಿಬೆಟ್ಟುಗುತ್ತು, ಮುರ ಸದಾಶಿವ ಶೆಟ್ಟಿ, ಕಾಂತಪ್ಪ ಸಾಲಿಯಾನ್, ದಾಮೋಧರ ಶೆಟ್ಟಿ ಶಿಬರೂರುಗುತ್ತು, ಚರಣ್ ಶೆಟ್ಟಿ ಅತ್ತೂರು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಮಾಲಾಡಿ ಅಜಿತ್ ಕುಮಾರ್ ರೈ, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ ತಿಬಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್ ಶಿಬರೂರು , ಸುಮನ್ ಶೆಟ್ಟಿ, ಸುಧಾಕರ ಶೆಟ್ಟಿ ಶಿಬರೂರುಗುತ್ತು, ಸುಧಾಕರ ಶಿಬರೂರು, ಸುರೇಶ್ ಶೆಟ್ಟಿ ಪುಚ್ಚಾಡಿ ಸುಬ್ರಮಣ್ಯಪ್ರಸಾದ್ ಪ್ರಸ್ತಾವನೆಗೈದರು.
ಮಧುಕರ ಅಮೀನ್ ಸ್ವಾಗತಿಸಿ, ಸುರೇಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಸಾಯಿನಾಥ ಶೆಟ್ಟಿ, ಅನಂತ ರಾಮ ಆಚಾರ್ಯ ಮೂಡುಮನೆ ನಿರೂಪಿಸಿದರು.
- DAKSHINA KANNADA7 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- FILM6 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA6 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM6 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!