Friday, August 12, 2022

ಮಂಗಳೂರು: ಆಗಸ್ಟ್‌ 15ರ ಒಳಗೆ ಟೋಲ್‌ಗೇಟ್‌ ರದ್ದುಗೊಳಿಸಲು ಆಗ್ರಹ

ಮಂಗಳೂರು: ಎನ್ಐಟಿಕೆ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಸಂಸದರು, ಸಚಿವರು ನೀಡಿದ ಜೂನ್ 22ರ ಅಂತಿಮ ಗಡುವು ದಾಟಿ ಮತ್ತೆ ತಿಂಗಳು ಕಳೆದಿದೆ.

ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಮತೀಯ ದ್ವೇಷದ ಕೊಲೆಗಳ ಉನ್ಮಾದದಲ್ಲಿ ಸುರತ್ಕಲ್ ಟೋಲ್ ತೆರವು ಸಹಿತ ಜನ ಸಾಮಾನ್ಯರ ಜ್ವಲಂತ ಸಮಸ್ಯೆಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ‌. ಜನಪ್ರತಿನಿಧಿಗಳ ಇಂತಹ ರಾಜಕಾರಣವನ್ನು ಒಪ್ಪಲು ಸಾಧ್ಯವಿಲ್ಲ.


ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಸುರತ್ಕಲ್ ಅಕ್ರಮ ಟೋಲ್ ತೆರವುಗೊಳಿಸಿ ಜನತೆಯನ್ನು ಟೋಲ್ ಲೂಟಿಯಿಂದ ಬಿಡುಗಡೆಗೊಳಿಸಬೇಕು ಎಂದು ಸುರತ್ಕಲ್ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರನ್ನು ಆಗ್ರಹಿಸಿದೆ.

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಪ್ರಕಟಣೆ ನೀಡಿದ್ದು, ಆರು ವರ್ಷಗಳ ಸತತ ಹೋರಾಟದ ಹೊರತಾಗಿಯೂ ತಾತ್ಕಾಲಿಕ ನೆಲೆಯಲ್ಲಿ ಸ್ಥಾಪನೆಗೊಂಡಿರುವ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಮುಂದುವರಿಯುತ್ತಿದೆ‌.

ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗೇಟ್ ತೆರವಿಗೆ ಹಲವು ಭರವಸೆಗಳನ್ನು‌ ನೀಡುತ್ತಾ ಬಂದಿದ್ದಾರೆ. ಹೆಜಮಾಡಿ ನವಯುಗ್ ಟೋಲ್ ಫ್ಲಾಝಾದೊಂದಿಗೆ ವಿಲೀನ ಗೊಳಿಸವ ಕುರಿತು 2018 ರಲ್ಲಿ ಅಧಿಕೃತ ನಿರ್ಧಾರ ಆಗಿದ್ದರೂ ಅದು ಇಲ್ಲಿಯವರಗೆ ಜಾರಿಯಾಗಿಲ್ಲ.

ಈ ನಡುವೆ 2022 ರ ಆರಂಭದ ತಿಂಗಳುಗಳಲ್ಲಿ ಹೋರಾಟ ತೀವ್ರಗೊಂಡಾಗ ಮಂಗಳೂರು ಬಂದರಿನ ಒಳಭಾಗಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದರು. ಮಾರ್ಚ್ 22 ರಂದು ಸ್ವತಹ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅಕ್ರಮ ಟೋಲ್ ಗೇಟ್ ಜೂನ್ 22 ಕ್ಕೆ ತೆರವಾಗಲಿದೆ ಎಂದು ಹೇಳಿಕೆ ನೀಡಿದ್ದರು.

ಆದರೂ ತೆರವಾಗದಿರುವ ಕಾರಣ ಕೂಡಲೇ ತೆರವಿಗೆ ಕ್ರಮ ಕ್ಐಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ‌ ಘೆರಾವ್, ಸುಂಕ ಸಂಗ್ರಹಕ್ಕೆ ತಡೆ, ಟೋಲ್ ಗೇಟ್ ಮುಂಭಾಗ ಸಾವಿರಾರು ಜನರ ಸಾಮೂಹಿಕ ಧರಣಿಯಂತಹ ತೀವ್ರತರದ ಹೋರಾಟಗಳು ನಡೆಯಲಿವೆ ಎಂದು ಸಮಿತಿ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಕಟೀಲು ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ರಾಷ್ಟ್ರಧ್ವಜ: ಮನೆಮನೆಗೆ ವಿತರಣೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ಸಿದ್ಧಪಡಿಸಿದ ರಾಷ್ಟ್ರಧ್ವಜವನ್ನು ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮನೆಗಳಿಗೆ ವಿತರಿಸಲು ವಿದ್ಯಾರ್ಥಿಗಳಿಗೆ ನೀಡಲಾಯಿತು.ಈ ಸಂದರ್ಭ ಕಟೀಲು ದೇಗುಲದ...

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6...

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಕಳವು-ಆರೋಪಿ ಅಂದರ್

ಉಡುಪಿ: ಮನೆಯ ಹಿಂಬಾಗಿಲು ಒಡೆದು ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.ಕುಂಬಾಸಿ ವಿನಾಯಕ ನಗರ ನಿವಾಸಿ ಸುಭಾಷ್ ಚಂದ್ರ ಆಚಾರ್ಯ (40) ಬಂಧಿತ ಆರೋಪಿ. ಇವರು ಮೂಲತಃ ಮರವಂತೆಯ...