Connect with us

DAKSHINA KANNADA

Mangaluru: ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮೌನವೇಕೆ ?- ಕೃಪಾ ಅಮರ್‌

Published

on

ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಸಂವಿಧಾನಕ್ಕೆ, ಸತ್ಯಕ್ಕೆ ಸಂದ ಜಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಹೇಳಿದ್ದಾರೆ.

ಮಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಸಂವಿಧಾನಕ್ಕೆ, ಸತ್ಯಕ್ಕೆ ಸಂದ ಜಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಂದು ಒಳ್ಳೆಯ ನಡೆಯಾಗಿದೆ ಎಂದರು.

ವಿಟ್ಲದಲ್ಲಿ ದಲಿತ ಅಪ್ರಾಪ್ತೆಯ ಮೇಲೆ ಲೈಂಗಿಕ ಅತ್ಯಾಚಾರ ಪ್ರಕರಣ ನಡೆದಿದೆ. ಉಡುಪಿಯಲ್ಲಿ ವಿಡಿಯೋ ಪ್ರಕರಣ ನಡೆದಾಗ ಎಬಿವಿಪಿಯವರು, ಎಲ್ಲಾ ಬಿಜೆಪಿ ನಾಯಕರು, ಎಂಎಲ್‌ಸಿಗಳು ಎಲ್ಲರೂ ಬೃಹತ್‌ ಪ್ರತಿಭಟನೆ ಮಾಡಿದರು.

ಆದರೆ ಇಂದು ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್‌ ಆದಾಗ ಇವರೆಲ್ಲರೂ ಯಾಕೆ ಬರಲಿಲ್ಲ.

ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಸಾಮಾಜಿಕ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂಬುದಕ್ಕೆ ಸಂಘಪರಿವಾರದ ನಾಯಕರು ಉತ್ತರ ನೀಡಬೇಕು ಎಂದರು.

ವಿಟ್ಲದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನೆಗೆ ಹೋಗಿ ಮಾತನಾಡಿದ್ದೇನೆ.

ಶಾಲೆಗೆ ಹೋಗುವ 10ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಸಂತ್ರಸ್ತೆಗೆ ನೀಡಬೇಕಾದ ಎಲ್ಲಾ ವ್ಯವಸ್ಥೆ ಮಾಡಲು ನಾವು ಬದ್ಧರಿದ್ದೇವೆ.

ಕಾನೂನಾತ್ಮಕವಾಗಿ ಹೇಗೆ ಕ್ರಮ ವಹಿಸಬೇಕು ಅದನ್ನು ನಾವು ನಿರ್ವಹಿಸಲಿದ್ದೇವೆ ಎಂದರು.

ಈ ಸಂದರ್ಭ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಶುಭೋದಯ ಆಳ್ವ, ಉಬೈದು ವಿಟ್ಲ ಉಪಸ್ಥಿತರಿದ್ದರು.

DAKSHINA KANNADA

ಕಿನ್ನಿಗೋಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ದೈವ ಆವೇಶ- ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು ಮಹತ್ವದ ಸತ್ಯ..!

Published

on

ಕಿನ್ನಿಗೋಳಿ: ಒರಿಸ್ಸಾ ಮೂಲದ ಮುಸ್ಲಿಂ ಯುವಕನು  ಪೆರ್ಮುದೆಯಲ್ಲಿನ ಚಾಮುಂಡಿ ದೈವಸ್ಥಾನದ ಕೆಲಸ ನಿರ್ವಹಿಸುವ ಸಂದರ್ಭ ಏಕಾಏಕಿ ಈತನಿಗೆ ದೈವ ಆವೇಶವಾದ ಘಟನೆ ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದಿದೆ.

ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದ್ದು, ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ ಎಂ.ಆರ್.ಪಿ.ಎಲ್ ನಿಂದ ಬಂದ ಸಮಸ್ಯೆ ಎಂದು ಕಂಡು ಬಂದಿದೆ.

ಕಳೆದ ಮೂರು ದಶಕಗಳ ಹಿಂದೆ, ಪ್ರತಿಷ್ಠಿತ ಎಂ.ಆರ್,ಪಿ,ಎಲ್ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು, ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು.

ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ.

ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದೆ.

ಭೂಸ್ವಾಧೀನಗೊಂಡ ಮತ್ತು ಎಂ ಆರ್ ಪಿ ಎಲ್ ಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಆಸಾದ್ಯವಾಗಿತ್ತು.

ಇಲ್ಲಿನ ಬೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ನೇಮ ಸ್ಥಗಿತಗೊಂಡ ನಂತರದ ಕಾಲದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ದೃಷ್ಟಾಂತ ಕಂಡು ಬರಲು ಪ್ರಾರಂಭವಾಯಿತು.

ಪಿಲಿಚಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್ ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಗಳು ಯಥಾ ಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬ ದೈವದ ನುಡಿಯಾಯಿತ್ತು.

ಈ ಪ್ರಕರಣದ ಬಗ್ಗೆ ಗ್ರಾಮಸ್ಥರು ಸಮಾಲೋಚನೆ ನಡೆಸಿ ದೈವ ಸಾನಿದ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ದೈವದ ನುಡಿಯ ಬಗ್ಗೆ ಸಂಕಲ್ಪ ಮಾಡಲಾಯಿತು.

ದೈವಾರಧನೆಯಲ್ಲಿ ಮೂಲ ಸ್ವರೂಪ ಕಳೆದುಕೊಂಡ ಕಾರಣದಿಂದಾಗಿ ಎಂ.ಆರ್.ಪಿ.ಎಲ್ ಸಹಿತ ಇತರ ಕೈಗಾರಿಕೆಗಳಿಗೂ ಕೂಡ ಹಲವು ದೋಷ ಕಂಡುಬಂದಿದ್ದು, ಪರಿಹಾರ ಪ್ರಾಯಶ್ಚಿತಕ್ಕಾಗಿ ಕಂಪನಿಯವರು ಕಂಪನಿ ಒಳಗೆ ಚಾಮುಂಡಿ ದೇವಸ್ಥಾನ ನಿರ್ಮಿಸಿ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆ ಮಾಡಲಾಗುತ್ತಿದೆ.

ಕಂಪನಿಗಾಗಿ ಭೂಸ್ವಾಧೀನಗೊಂಡ ಕಾರಣ ಈ ಅವ್ಯವಸ್ಥೆಗಳು ಎದುರಾಗಿರುವುದರಿಂದ, ನೇಮೋತ್ಸವಕ್ಕೆ ಸೂಕ್ತವಾಗುವ ರೀತಿಯಲ್ಲಿ ಸ್ಥಳವನ್ನು ಜೀರ್ಣೋದ್ದಾರಗೊಳಿಸುವ ಕಾರ್ಯದಲ್ಲಿ ಕಂಪನಿಯೇ ಮೇಲುಸ್ತುವಾರಿ ವಹಿಸಬೇಕು ಅಲ್ಲದೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಕಂಪನಿಯ ನಿಯಮ ನಿಬಂಧನೆಗಳಿಗೆ ಬದ್ದರಾಗಿ ನೇಮೋತ್ಸವ ನಡೆಸಲಾಗುವುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಾಕಷ್ಟು ಮಹತ್ವ ಬಂದಿದ್ದು ಕಂಪನಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕಾದು ನೋಡಬೇಕಾಗಿದೆ.

 

Continue Reading

DAKSHINA KANNADA

Mangaluru: ಎಂಡೋ ಪೀಡಿತರಿಗೆ 1 ಕೋ.ರೂ. ನೆರವು ನೀಡಿದ ಎಂ.ಆರ್‌.ಪಿ.ಎಲ್‌. ಸಂಸ್ಥೆ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್- ಎಂ.ಆರ್‌.ಪಿ.ಎಲ್‌. ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಲ್ಫಾನ್‌ ಪೀಡಿತ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ಸಹಾಯ ಧನ ನೀಡಲು ಮುಂದಾಗಿದೆ.

ಈ ಕುರಿತಂತೆ ಆಶಯ ಪತ್ರವನ್ನು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಂ.ಆರ್‌.ಪಿ.ಎಲ್‌. ಕಂಪೆನಿಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಶ್ಯಾಮ್‌ ಪ್ರಸಾದ್‌ ಕಾಮತ್‌ ಮುಂಡ್ಕೂರು ಅವರು  ಅವರಿಗೆ ಹಸ್ತಾಂತರಿಸಿದರು.

ಎಂ.ಆರ್‌.ಪಿ.ಎಲ್‌. ಸಂಸ್ಥೆಯು ತನ್ನ ಸಿ.ಎಸ್‌.ಆರ್‌. ನಿಧಿಯಿಂದ ಒಂದು ಕೋಟಿ ರೂಪಾಯಿ ನೆರವನ್ನು ಜಿಲ್ಲೆಯ ಅರೋಗ್ಯ ಇಲಾಖೆಗೆ ನೀಡಲಿದ್ದು, ಈ ಮೊತ್ತವನ್ನು ವಿಟ್ಲ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿರುವ ಎಂಡೋ ಪೀಡಿತರ ಪುನರ್ವಸತಿ ಕೇಂದ್ರಗಳಿಗೆ ವೈದ್ಯಕೀಯ ವ್ಯವಸ್ಥೆಗಳಿಗಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಪ್ರಮುಖವಾಗಿ ನಾಲ್ಕು ಸಂಚಾರಿ ವೈದ್ಯಕೀಯ ವಾಹನಗಳು, ಫಿಸಿಯೋಥೆರಪಿ ಉಪಕರಣಗಳು, ಹಾಸಿಗೆ ಹಿಡಿದ ರೋಗಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ಯಲು ಮತ್ತು ವಾಪಸ್ ಕರೆತರಲು 2 ವಾಹನ ಖರೀದಿಸಲು, ಕೊಯಿಲ ಮತ್ತು ಕೊಕ್ಕಡಗಳಲ್ಲಿ ಇರುವ ಪುನರ್ವಸತಿ ಕೇಂದ್ರಗಳಿಗೆ ಎರಡು ಡೀಸೆಲ್‌ ಜನರೇಟರ್‌ ಕೊಂಡುಕೊಳ್ಳಲು ಇದನ್ನು ವಿನಿಯೋಗಿಲಾಗುತ್ತದೆ.

ಆಶಯ ಪತ್ರವನ್ನು ಸ್ವೀಕರಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಅವರು ನೆರವು ನೀಡಲು ಮುಂದಾಗಿರುವ ಎಂ.ಆರ್‌.ಪಿ.ಎಲ್‌. ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಈ ಕೊಡುಗೆಯಿಂದ ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಅಧಿಕ ಎಂಡೋ ಸಲ್ಫಾನ್‌ ಪೀಡಿತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ, ಎಂಡೋ ಸಲ್ಫಾನ್‌ ಪೀಡಿತರ ಆರೋಗ್ಯ ವಿಭಾಗದ ನೋಡಲ್‌ ಅಧಿಕಾರಿ ಡಾ. ನವೀನ್‌ ಚಂದ್ರ ಕುಲಾಲ್‌, ಎಂ.ಆರ್‌.ಪಿ.ಎಲ್‌. ಚೀಫ್‌ ಜನರಲ್‌ ಮ್ಯಾನೇಜರ್‌ ಮನೋಜ್‌ ಕುಮಾರ್‌ ಎ., ಎಚ್ ಅರ್‌ ವಿಭಾಗದ ಜಿ.ಜಿ.ಎಂ. ಕೃಷ್ಣ ಹೆಗ್ಡೆ ಅವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಪುತ್ತೂರಿನ ಯುವಕ ಕೇರಳದಲ್ಲಿ ನೀರಿನಲ್ಲಿ ಮುಳುಗಿ ಸಾವು..!

Published

on

ಪುತ್ತೂರು: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ನಡೆದಿದೆ.

ಪುತ್ತೂರಿನ ಹಿರೇಬಂಡಾಡಿಯ ನಿವಾಸಿ ಮಹಮ್ಮದ್ ಅಝೀಮ್ (21)  ಮೃತ ಯುವಕ ಎಂದು ಗುರುತಿಸಲಾಗಿದೆ.

ಕಣ್ಣೂರಿನ ಕಡಂಬೆರಿಯಲ್ಲಿ ಈಜಲೆಂದು ತೆರಳಿದ್ದ ವೇಳೆ ಈ ದುರಂತ ನಡೆದಿದೆ.

ಪುತ್ತೂರಿನಿಂದ ಐವರು ಸ್ನೇಹಿತರು ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದರು.

ಈ ವೇಳೆ ಈಜಲೆಂದು ನೀರಿಗಿಳಿದ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಆಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಮಹಮ್ಮದ್ ಅಝೀಮ್ ಗೆ  ಸರಿಯಾಗಿ ಈಜು ಬಾರದೇ ಸಾವನ್ನಪ್ಪಿದ್ದರೆ, ಇನ್ನೊಬ್ಬನನ್ನು ಡಡಂಬೆರಿಯ ಸ್ಥಳೀಯ ನಿವಾಸಿಗಳು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Continue Reading

LATEST NEWS

Trending