Wednesday, December 1, 2021

ಉಗ್ರ ಸಂಘಟನೆ ಹಣ ಸಹಾಯ ಆರೋಪ: ಮಂಗಳೂರಿನ ದಂಪತಿಗೆ 10 ವರ್ಷ ಶಿಕ್ಷೆ

ಮಂಗಳೂರು: ಉಗ್ರಗಾಮಿ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ಗೆ ಹಣ ರವಾನೆ ಆರೋಪ ಎದುರಿಸುತ್ತಿದ್ದ ನಗರದ ಪಂಜಿಮೊಗರುವಿನ ದಂಪತಿ ಸಹಿತ ನಾಲ್ವರಿಗೆ ಛತ್ತೀಸ್‌ಗಢ ಕೋರ್ಟ್‌ 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಧೀರಾಜ್‌ ಸಾವೋ (21), ಪಪ್ಪು ಮಂಡಲ್‌ (30), ಜುಬ್ಬೆರ್‌ ಹುಸೇನ್‌ (42) ಮತ್ತು ಆತನ ಪತ್ನಿ ಆಯೆಷಾ ಬಾನು (38) ಶಿಕ್ಷೆಗೊಳಗಾದವರು.
ಬಿಹಾರದ ಪಾಟ್ನಾ ಸ್ಫೋಟಕ್ಕೆ ಸಂಬಂಧಿಸಿದಂತೆ 2013ರಲ್ಲಿ ಮಂಗಳೂರಿನ ಪಂಜಿಮೊಗರು ನಿವಾಸಿ ಆಯೇಷಾ ಬಾನು ಮತ್ತು ಆಕೆಯ ಪತಿ ಜುಬೇರ್‌ ಹುಸೇನ್‌ನನ್ನು ಎಟಿಎಸ್‌ ಪೊಲೀಸರು ಬಂಧಿಸಿದ್ದರು.
ಬಿಹಾರದಲ್ಲಿ ಬಂಧಿತನಾಗಿದ್ದ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಭಯೋತ್ಪಾದಕನೊಬ್ಬ ನಾಲ್ವರು ಹಿಂದೂಗಳ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದುದು ಬಹಿರಂಗವಾಗಿತ್ತು.

ಇದನ್ನು ಪಾಕಿಸ್ಥಾನದಲ್ಲಿರುವ ಐಎಸ್‌ಐ ಏಜೆಂಟ್‌ ಇಬ್ರಾಹಿಂ ಎಂಬಾತ ನಿರ್ವಹಿಸುತ್ತಿದ್ದ ಮತ್ತು ಅಲ್ಲಿಂದ ಹವಾಲಾ ಮೂಲಕ ಹಣ ರವಾನೆ ಮಾಡುತ್ತಿದ್ದ ಎಂಬ ಅಂಶ ಬಹಿರಂಗಗೊಂಡಿತ್ತು.
ಈ ವೇಳೆ ಅವರಿಗೆ ಹಣ ಪೂರೈಕೆ ಆಗುತ್ತಿದ್ದ ಬಗ್ಗೆ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ದೇಶದ ವಿವಿಧೆಡೆಯಿಂದ ಹಣ ಬರುತ್ತಿರುವುದು ಖಚಿತವಾಗಿತ್ತು.

ಈ ಮಾಹಿತಿಯ ಜಾಡು ಹಿಡಿದು ಬಂದ ಪೊಲೀಸರಿಗೆ ಮಂಗಳೂರಿನ ಪಂಜಿಮೊಗರಿನಲ್ಲಿ ಹುಸೈಸ್‌ ಮತ್ತು ಆಯೆಷಾ ಬಾನು ದಂಪತಿ ಸಿಕ್ಕಿಬಿದ್ದಿದ್ದರು.
ದಂಪತಿ ತಮ್ಮ ಖಾತೆಯಿಂದ 5 ಕೋಟಿಗೂ ಹೆಚ್ಚು ಹಣವನ್ನು ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರಿಗೆ ಪೂರೈಕೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ಇವರ ವಿರುದ್ಧ ದೇಶ ದ್ರೋಹ ಕಾಯ್ದೆಯಡಿ ಕೇಸು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಛತ್ತೀಸ್‌ಗಡದ ರಾಯ್‌ಪುರ ಕೋರ್ಟ್ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...