LATEST NEWS
ಮಂಗಳೂರಿನಲ್ಲಿ ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ 16 ರಿಕ್ಷಾ ಡ್ರೈವರ್‌ಗಳ ಮೇಲೆ ಕೇಸ್: ಡ್ರೈವ್ ಮುಂದುವರೆಯಲಿದೆ ಎಂದ ಕಮೀಷನರ್
ಮಂಗಳೂರು: ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ 16 ರಿಕ್ಷಾ ಡ್ರೈವರ್‌ಗಳ ಮೇಲೆ ಮಂಗಳೂರು ನಗರ ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ನಗರದಲ್ಲಿ ವಸೂಲಿ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಮಾರುವೇಷದಲ್ಲಿ ಪೊಲೀಸರು ರಿಕ್ಷಾ ಬುಕ್ ಮಾಡಿದ್ದರು. ಈ ವೇಳೆ ರಿಕ್ಷಾ ಚಾಲಕರು ಮೀಟರ್ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ 16 ರಿಕ್ಷಾ ಡ್ರೈವರ್‌ಗಳ ಮೇಲೆ ಕೇಸು ದಾಖಲಾಗಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟ್ವಿಟ್ವರ್‌ನಲ್ಲಿ ಮಾಹಿತಿ ನೀಡಿ ಇನ್ನು ಮುಂದೆಯೂ ನಗರದಲ್ಲಿ ಎಲ್ಲಿಯಾದರೂ ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ರಿಕ್ಷಾ ಡ್ರೈವರ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಸೂಲಿ ನಡೆಯುತ್ತಿರುವ ಬಗ್ಗೆ ಸಂಚಾರಿ ಪೊಲೀಸರು ಅಥವಾ ಮಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಸಂಚಾರಿ ಎಸಿಪಿ ಗೀತಾ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
BIG BOSS
BBK11: ಬಿಗ್ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್ ಸುರೇಶ್ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.
ಕನ್ನಡದ ಬಿಗ್ಬಾಸ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್ಬಾಸ್ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್ ಸುರೇಶ್ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್ಬಾಸ್ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.
LATEST NEWS
ಕುಂಡಗಳಲ್ಲಿ ಗಾಂಜಾ ಬೆಳೆದ ದಂಪತಿ ; ರೀಲ್ಸ್ ಮಾಡಿ ತಗಲಾಕ್ಕೊಂಡ ಜೋಡಿ!
ಮಂಗಳೂರು/ಬೆಂಗಳೂರು : ಹೂವಿನ ಕುಂಡಗಳಲ್ಲಿ ಗಾಂ*ಜಾ ಗಿಡಗಳನ್ನು ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಎಂಎಸ್‌ಆರ್ ನಗರ 3ನೇ ಮೇನ್‌ನಲ್ಲಿ ವಾಸವಾಗಿರುವ ಸಿಕ್ಕಿಂನ ಕೆ.ಸಾಗರ್ ಗುರುಂಗ್ (37) ಮತ್ತು ಆತನ ಪತ್ನಿ ಊರ್ಮಿಳಾ ಕುಮಾರಿ (38) ಬಂಧಿತರು.
ರೀಲ್ಸ್ ಮಾಡಿ ಸಿಕ್ಕಿ ಬಿದ್ರು :
ಈ ಜೋಡಿ ಫಾಸ್ಟ್ ಫುಡ್ ಜಾಯಿಂಟ್ ನಡೆಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಊರ್ಮಿಳಾ ಕುಮಾರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವೀಡಿಯೋ ಮತ್ತು ಫೋಟೋ ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಎಂಎಸ್‌ಆರ್ ನಗರದ ತಮ್ಮ ಮನೆಯಲ್ಲಿ ಹೂವಿನ ಕುಂಡಗಳಲ್ಲಿ ಬೆಳೆಯುತ್ತಿರುವ ವಿವಿಧ ಸಸ್ಯಗಳ ವೀಡಿಯೋ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಮನೆಯ ಬಾಲ್ಕನಿಯಲ್ಲಿ ಹೂ ಕುಂಡಗಳಲ್ಲಿ ಹೂ ಗಿಡಗಳನ್ನು ದಂಪತಿ ಬೆಳೆಸಿದ್ದರು. 20 ಕುಂಡಗಳ ಪೈಕಿ ಎರಡು ಕುಂಡಗಳಲ್ಲಿ ಗಾಂ*ಜಾ ಬೆಳೆದಿದ್ದರು. ಈ ಹೂ ಗಿಡಗಳ ನಡುವೆ ಬೆಳೆದಿದ್ದ ಗಾಂ*ಜಾ ಗಿಡಗಳು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೀಡಿಯೋವನ್ನು ನೋಡಿದ ವ್ಯಕ್ತಿಯೊಬ್ಬ ಗಾಂ*ಜಾ ಗಿಡ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ : ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
ಈ ಮಾಹಿತಿ ಆಧರಿಸಿ ಸದಾಶಿವನಗರ ಠಾಣೆ ಪೊಲೀಸರು ನ. 5 ರಂದು ಊರ್ಮಿಳಾ ದಂಪತಿ ಮನೆ ಪತ್ತೆ ಹಚ್ಚಿದ್ದರು. ಪೊಲೀಸರ ದಾಳಿ ಊಹಿಸಿದ್ದ ದಂಪತಿ ಗಾಂ*ಜಾ ಗಿಡಗಳನ್ನು ಮುರಿದು ಡಸ್ಟ್ ಬಿನ್‌ನಲ್ಲಿ ಎಸೆದಿದ್ದರು ಎನ್ನಲಾಗಿದೆ. ಶೋಧ ಕಾರ್ಯಾಚರಣೆ ನಡೆಸಿ ಸುಮಾರು 54 ಗ್ರಾಂ ತೂಕದ ಹಸಿ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಊರ್ಮಿಳಾ ಹಾಗೂ ಸಾಗರ್ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದಾರೆ.
LATEST NEWS
ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!
ಲಕ್ನೋ: ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯದ ಮಹಿಳಾ ಆಯೋಗವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ, ಅದರ ಅಡಿಯಲ್ಲಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಹೌದು.. ಉತ್ತರ ಪ್ರದೇಶ ರಾಜ್ಯದಲ್ಲಿ ಇಂತಹುದೊಂದು ಮಹತ್ವದ ಆದೇಶ ತರಲಾಗಿದ್ದು, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಲಾಗಿದೆ.
ಮಹಿಳಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಜಿಮ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ನಿಯಮಗಳನ್ನು ನಿಗದಿಪಡಿಸಲಾಗಿದೆ. ಜಿಮ್ ನಿರ್ವಾಹಕರು ಮಹಿಳೆಯರಿಗೆ ಮಹಿಳಾ ತರಬೇತುದಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಮಹಿಳಾ ಆಯೋಗದ ಈ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಎಲ್ಲ ಜಿಲ್ಲೆಗಳಿಗೆ ತಿಳಿಸಲಾಗಿದೆ.
ಪುರುಷ ಟೈಲರ್‌ಗಳು ಮಹಿಳೆಯರ ಅಳತೆಗಳನ್ನು ತೆಗೆಯೋಹಾಗಿಲ್ಲ:
ಇನ್ನುಮುಂದೆ ಟೈಲರ್ ಅಂಗಡಿಯಲ್ಲಿ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳೆಯರಿಗಾಗಿ ವಿಶೇಷ ಬಟ್ಟೆಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರಿಗೆ ಸಹಾಯ ಮಾಡಲು ಮಹಿಳಾ ಉದ್ಯೋಗಿಗಳನ್ನು ನೇಮಿಸಬೇಕಾಗುತ್ತದೆ. ಕೋಚಿಂಗ್ ಸೆಂಟರ್‌ನಲ್ಲಿಯೂ ಮಹಿಳೆಯರಿಗೆ ಸಿಸಿಟಿವಿ ಮತ್ತು ಶೌಚಾಲಯಗಳನ್ನು ಹೊಂದಿರುವುದು ಅವಶ್ಯಕ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ನಿಯಮಗಳನ್ನು ನಿರ್ಧರಿಸಲಾಗಿದೆ ಎಂದು ಸೂಚಿಸಲಾಗಿದೆ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ರಾಜ್ಯದ ಮಹಿಳಾ ಆಯೋಗವು ಇಂತಹ ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ.
- DAKSHINA KANNADA6 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM2 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್