Connect with us

DAKSHINA KANNADA

ಬೈಕಂಪಾಡಿ ಬೀಡಾಡಿ ಬಸವರಾಜನ ಕಣ್ಣೀರು ಒರೆಸಿದ ಬಜರಂಗದಳ : ಕಣ್ಣಿಗೆ ಕುಕ್ಕುತ್ತಿದ್ದ ಕೊಂಬು ಕಡಿದು ಯಶಸ್ವೀ ಚಿಕಿತ್ಸೆ ನೀಡಿದ ಯುವಪಡೆ..!

Published

on

ಬಜರಂಗ ದಳ ಸಂಘಟನೆಯ ಕಾರ್ಯಕರ್ತರು , ಉತ್ಸಾಹಿ ಧೈರ್ಯವಂತ ಯುವಕರ ಪಡೆಯೊಂದಿಗೆ ಪಣಂಬೂರು- ಬೈಕಂಪಾಡಿ ಪ್ರದೇಶದಲ್ಲಿ ಮುಂಜಾನೆಯಿಂದ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಗ್ಗದ ಸಹಾಯದಿಂದ ಹೋರಿಯನ್ನು ಸೆರೆ ಹಿಡಿಯುವ ಸಾಹಸಕ್ಕೆ ಕೈ ಹಾಕಿ ಕೊನೆಗೂ ಯಶಸ್ವಿಯಾದರು.

ಮಂಗಳೂರು : ಅದು ಒಂದು ಮೂಕ ಜೀವಿ..ಕಳೆದ ಕೆಲ ವರ್ಷಗಳಿಂದ ತನ್ನ ಒಡಲಲ್ಲಿ ಅಗಾಧ ನೋವನ್ನು ಇಟ್ಟುಕೊಂಡು ನರಕ ಯಾತನೆ ಪಡುತಿತ್ತು.   

ನೇರವಾಗಿರಬೇಕಾಗಿದ್ದ ಕೊಂಬು ಬಾಗಿ ಕಣ್ಣಿಗೆ ಕುಕ್ಕಿ ಅದರಿಂದ ಗಾಯಗೊಂಡು ನೋವಿನಿಂದ ಬಳಲುತ್ತಾ ಸದಾ ಕಣ್ಣೀರು ಸುರಿಸುತ್ತಲೇ ಅಸಹಾಯಕ ಸ್ಥಿತಿಯಲ್ಲಿತ್ತು ಆಜೀವ.

ಆದರೆ ಇದೀಗ ಸಾಮಾಜಿಕ ಕಾರ್ಯಕರ್ತೆಯ ಕರೆಗೆ ಸ್ಪಂದಿಸಿದ ಬಜರಂಗದಳ ಉತ್ಸಾಹಿ ಯುವಕಪಡೆ ಆ ಮುಗ್ದ ಜೀವಿಯ ಕಣ್ಣೀರು ಓರೆಸುವ ಕಾರ್ಯ ಮಾಡಿದೆ.

ಹೌದು, ಇದರ ಹೆಸರು ರಾಜ. ಮಂಗಳೂರು ಹೊರವಲಯದ ಪಣಂಬೂರು- ಬೈಕಂಪಾಡಿ ಪ್ರದೇಶಗಳಲ್ಲಿ ಕಳೆದ ಕೆಲ ವರ್ಷಗಳಿಂದ ಬೀಡು ಬಿಟ್ಟಿರುವ ಈ ಹೋರಿ ಇತ್ತೀಚಿನ ದಿನಗಳಿಂದ ತೀರ ನರಕಮಯ ಯಾತನೆಯನ್ನು ಅನುಭವಿಸುತ್ತಿತ್ತು.

ತನ್ನ ತಲೆಯಲ್ಲಿ ನೇರವಾಗಿ ಬೆಳೆಯ ಬೇಕಾಗಿದ್ದ ಒಂದು ಕೊಂಬು ಯಾವುದೋ ಅಪಘಾತದಲ್ಲಿ ಬಾಗಿ ತನ್ನದೇ ಕಣ್ಣಿಗೆ ಕುಕ್ಕುತ್ತಿತು.

ಇದರಿಂದ ಉಂಟಾಗುತಿದ್ದ ಅಗಾದ ನೋವನ್ನು ತಡೆಯಲಾಗದೇ ರಾಜ ಹೋರಿ ಅಸಾಹಾಯಕ ಸ್ಥಿತಿಯಲ್ಲಿ ಒದ್ದಾಡುತ್ತಿತು.

ಹಲವಾರು ಬಾರಿ ಸಾಮಾಜಿಕ ಜಾಲಾ ತಾಣ, ಮಾದ್ಯಮಗಳ ಮೂಲಕ ಮಾಡಿದ ಮನವಿಗೆ ಹೋರಿಯನ್ನು ಈ ಯಾತನೆಯಿಂದ ಮುಕ್ತಿ ಮಾಡುವ ಪ್ರಯತ್ನಗಳನ್ನು ಮಾಡಲಾಗಿತ್ತಾದರೂ ಅದು ಸಫಲತೆ ಕಂಡಿರಲಿಲ್ಲ.

ಆದರೆ ಈ ಹೋರಿ ಯಾರನ್ನೂ ಹತ್ತಿರ ಹೋಗಲು ಬಿಡುತ್ತಿರಲಿಲ್ಲವಾದ್ದರಿಂದ ಅದನ್ನು ಹಿಡಿಯುವುದು ಒಂದು ಸವಾಲಾಗಿತ್ತು.

ಹಾಗಾಗಿ ಅದರ ಬೆಂಡಾದ ಕೊಂಬು ಸಮಸ್ಯಾತ್ಮಕವಾಗಿಯೇ ಉಳಿದಿತ್ತು. ಈ ಮೂಕ ಪ್ರಾಣಿಯ ವೇದನೆ ಸಾಮಾಜಿಕ ಜಾಲ ತಾಣದಲ್ಲಿ ಇದೀಗ ಮತ್ತೆ ವೈರಲ್‌ ಆಗಿತ್ತು.

ಪ್ರಾಣಿ ಪ್ರಿಯೆ ಉಷಾ ಸುವರ್ಣರು ಹೋರಿಯ ಸಹಾಯಕ್ಕೆ ಜಾಲಾ ತಾಣಗಳ ಮೂಲಕ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಬಜರಂಗ ದಳ ಸಂಘಟನೆಯ ಕಾರ್ಯಕರ್ತರು , ಉತ್ಸಾಹಿ ಧೈರ್ಯವಂತ ಯುವಕರ ಪಡೆಯೊಂದಿಗೆ ಪಣಂಬೂರು- ಬೈಕಂಪಾಡಿ ಪ್ರದೇಶದಲ್ಲಿ ಮುಂಜಾನೆಯಿಂದ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಗ್ಗದ ಸಹಾಯದಿಂದ ಹೋರಿಯನ್ನು ಸೆರೆ ಹಿಡಿಯುವ ಸಾಹಸಕ್ಕೆ ಕೈ ಹಾಕಿ ಕೊನೆಗೂ ಯಶಸ್ವಿಯಾದರು.

ಪಶು ವೈದ್ಯರನ್ನು ಕರೆಸಿ ಅವರ ಸಹಾಯದಿಂದ ಹೊರಿಯ ನೋವಿಗೆ ಕಾರಣವಾಗಿದ್ದ ಕಣ್ಣಿಗೆ ಬಾಗಿದ್ದ ಕೊಂಬನ್ನು ಕತ್ತರಿಸಿ ಯಶಸ್ವೀ ಚಿಕಿತ್ಸೆ ಒದಗಿಸಿದರು.

ಪಶು ಸಂಗೋಪನಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕ ಡಾ। ಅರುಣ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ನಿವೃತ್ತ ಪಶು ವೈದ್ಯಾಧಿಕಾರಿ ಡಾ। ಸುರೇಶ್‌ ಮತ್ತು ಇಲಾಖೆಯ ಸೀನಿಯರ್‌ ಇನ್ಸ್‌ಪೆಕ್ಟರ್‌ ವಿಶ್ವನಾಥ ಕುಳಾಯಿ ಅವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

ಇದರಿಂದಾಗಿ ಈ ಬೀಡಾಡಿ ಬಸವ ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದ ನೋವಿನ ಸಮಸ್ಯೆಯಿಂದ ಮುಕ್ತಿ ದೊರೆತಿದೆ.

ಬಜರಂಗ ದಳದ ಯುವಕರ ಪ್ರಾಣಿ ಪ್ರೇಮಕ್ಕೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗಿದೆ.

DAKSHINA KANNADA

Sullia: ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ..!

Published

on

ಸುಳ್ಯ: ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂದು ಗುರುತಿಸಲಾಗಿದೆ.

ಸುಳ್ಯದಲ್ಲಿರುವ ಆರಂಬೂರು ಸೇತುವೆ ಬಳಿಯ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿಯು ಕಾಣೆಯಾಗಿದ್ದಾರೆ. ಬಳಿಕ ಅವರ ಹುಡುಕಾಟ ನಡೆಸಲಾಗಿದೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಕಾರಣದಿಂದ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಳಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಸುಳ್ಯ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ

Continue Reading

DAKSHINA KANNADA

Sullia: ಮದ್ಯ ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ- ಎಪಿಎಂಸಿ ಕಾರ್ಯದರ್ಶಿ ಅಮಾನತು

Published

on

ಸುಳ್ಯ: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸರಕಾರಿ ವಾಹನ ಚಲಾಯಿಸಿದ ಪ್ರಕರಣದ ಆರೋಪಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್‌ ಕುಮಾರ್‌ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ನವೀನ್‌ ಕುಮಾರ್ ಮಂಗಳವಾರ ರಾತ್ರಿ ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ಇಲಾಖೆಯ ನಾಮಫ‌ಲಕವಿರುವ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ಚಲಾಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದ್ದರು. ಈ ಸಂದರ್ಭ ತಾನು ಸುಳ್ಯ ಎಪಿಎಂಸಿ ಕಾರ್ಯದರ್ಶಿ, ನನ್ನದು ತಪ್ಪಾಯಿತು ಎಂದು ಕ್ಷಮೆ ಯಾಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಎಪಿಎಂಸಿ ಕಾರ್ಯದರ್ಶಿಯವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಅವರಿಗೆ ಸುಳ್ಯ ಎಪಿಎಂಸಿ ಪ್ರಭಾರ ವಹಿಸಲಾಗಿದೆ.

 

Continue Reading

DAKSHINA KANNADA

ಕಟೀಲು ಕ್ಷೇತ್ರಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ

Published

on

ಕಿನ್ನಿಗೋಳಿ: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ ನೀಡಿದರು.

ದೇವಳದ ವತಿಯಿಂದ ಶ್ರೀ ರಾಮುಲು ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ವೆಂಕಟರಮಣ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಅವರು ಅನ್ನಪ್ರಸಾದವನ್ನು ಸ್ವೀಕರಿಸಿ ಸರಳತೆ ಮೆರೆದರು. ಬಳಿಕ ಕ್ಷೇತ್ರದ ಕುರಿತಂತೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.

Continue Reading

LATEST NEWS

Trending