ಮಂಗಳೂರು ಕಸ್ಟಮ್ಸ್ ಭರ್ಜರಿ ಬೇಟೆ : ರೈಸ್ಕು ಕುಕ್ಕರಿನಲ್ಲಿದ್ದ 25 ಲಕ್ಷದ ಚಿನ್ನ ವಶಕ್ಕೆ ..!
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ವ್ಯಕ್ತಿಯೋರ್ವನನ್ನು ಸಂಶಯದ ಮೇಲೆ ತೀವ್ರ ತಪಾಸಣೆ ನಡೆಸಿದಾಗ ಆತ ತಂಡ ರೈಸ್ ಕುಕ್ಕರಿನ ಹೀಟಿಂಗ್ ಕಾಯಿಲ್ ಒಳಗಡೆ ಬಚ್ಚಿಟ್ಟಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದು, ವಶ ಪಡಿಸಿಕೊಂಡ ಚಿನ್ನದ ಬೆಲೆ 25, 45, 920 ಎಂದು ಅಂದಾಜಿಸಲಾಗಿದೆ.