Connect with us

DAKSHINA KANNADA

ಮಂಗಳೂರು ಕುಕ್ಕರ್ ಬಾಂಬ್ ಸಂಚುಕೋರ ಅಲಿ ಅರೆಸ್ಟ್..!

Published

on

ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ ಹಾಗೂ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಬಂಧಿಸಿದೆ.

ನವದೆಹಲಿ: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ ಹಾಗೂ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಬಂಧಿಸಿದೆ.

ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ ಹಾಗೂ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಬಂಧಿಸಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವಾಸಿ ಅರಾಫತ್ ಅಲಿ ಬಂಧಿತ ಆರೋಪಿಯಾಗಿದ್ದಾನೆ.

ಕೀನ್ಯಾ ದೇಶದ ನೈರೋಬಿಯಲ್ಲಿದ್ದ ಈತ ಭಾರತಕ್ಕೆ ವಾಪಸಾಗುವ ಸಂದರ್ಭದಲ್ಲಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು ಎನ್ಐಎ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅರಾಫತ್ ಅಲಿ 2020ರಿಂದ ಐಸಿಸ್ ಮೂಲಕ ಭಯೋತ್ದಾದಕ ಕೃತ್ಯ ಯೋಜಿಸಿದ್ದ, ಅಂದಿನಿಂದ ಈತನು ತಲೆಮರೆಸಿಕೊಂಡಿದ್ದನು.

ಈತ ಐಸಿಸ್ ನ ಭಾರತ ವಿರೋಧಿ ಭಯೋತ್ದಾಕ ಅಜೆಂಡಾಗೆ ಕುಮ್ಮಕ್ಕು ನೀಡಲು ವಿದೇಶದಿಂದಲೇ ಕೆಲಸ ಮಾಡುತ್ತಿದ್ದ ಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್‌ ಸ್ಫೋಟ ಮತ್ತು ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ ಸ್ಫೋಟ ನಡೆಸುವ ಸಲುವಾಗಿ ಕುಕ್ಕರ್‌ ಬಾಂಬ್‌ ತೆಗೆದುಕೊಂಡು ಹೋಗುತ್ತಿದ್ದ ಮುಹಮ್ಮದ್‌ ಶಾರಿಖ್‌ ಜತೆಯೂ ಈತ ಸಂಪರ್ಕ ಹೊಂದಿದ್ದ ಎಂದು ಎನ್ಐಎ ತಿಳಿಸಿದೆ.

ತೀರ್ಥಹಳ್ಳಿಯ ಇಂದಿರಾನಗರ ನಿವಾಸಿಯಾಗಿರುವ ಅರಾಫತ್ ಅಲಿ 2019 ರಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಸೇರಿಕೊಂಡಿದ್ದನು.

ಈತನ ವಿರುದ್ಧ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪವಿದೆ.

ಅಲ್ಲದೆ ಶಿವಮೊಗ್ಗ ಟಯರ್ ಬ್ಲಾಸ್ಟ್ ಪ್ರಕರಣದ ಮೊಹಮ್ಮದ್‌ ಶಾರಿಖ್‌ ಮತ್ತು ಇತರ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಭಯೋತ್ದಾದಕ ಕೃತ್ಯಗಳನ್ನು ನಡೆಸುವ ವಿದೇಶಿ ಮೂಲದ ಇಸ್ಲಾಮಿಕ್ ಸ್ಪೇಟ್ ಸಂಚು ವಿಫಲಗೊಳಿಸುವಲ್ಲಿ ಅರಾಫತ್‌ ಆಲಿ ಬಂಧನ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

DAKSHINA KANNADA

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆ

Published

on

ಮಂಗಳೂರು: ಮಂಗಳೂರು ಸೊಬೆಸ್ಟಿಯನ್ ಹಾಲ್ ನಲ್ಲಿ ನಡೆದ  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯಲ್ಲಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ  ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಕರುಣಾಕರ್ ಕಾನಂಗಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾಗಿ ರಮೇಶ್ ಕಲಾ ಶ್ರೀ ಮಂಗಳೂರು, ಜಯಕರ್ ಸುವರ್ಣ ಉಡುಪಿ, ಜೊತೆ ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್ ಮುಲ್ಕಿ, ಹೆರಿಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್ ಕಾಪು, ರಮೇಶ್ ಹೊಸಬೆಟ್ಟು ಸುರತ್ಕಲ್, ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಮೂಡಬಿದ್ರಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಂದಾಪುರ, ಭಾರದ್ವಾಜ್ ಬೆಳ್ತಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ ಮಾಧ್ಯಮ ಕಾರ್ಯದರ್ಶಿ ಹರೀಶ್ ರಾವ್ ಆಯ್ಕೆಯಾಗಿದ್ದಾರೆ.

ಈ ಚುನಾವಣಾ ಪ್ರಕ್ರಿಯೆಯನ್ನು ಎಸ್ ಕೆಪಿಎ ಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ಅವರು ನಡೆಸಿಕೊಟ್ಟರು.

 

Continue Reading

DAKSHINA KANNADA

ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನ-ಇಬ್ಬರು ಅರೆಸ್ಟ್..!

Published

on

ಉಳ್ಳಾಲ: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಯನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಸಿಗ್ರೌಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ತಿಕಟ್ಟೆ ಆಝಾದನಗರದ ಫಝಲ್ ಮತ್ತು ಮುಕ್ಕಚ್ಚೇರಿ ಕಡಪ್ಪುರ ದ ಸಮೀರ್ ಎಂಬವರನ್ನು ಬಂಧಿಸಲಾಗಿದೆ.

ಈ ಇಬ್ಬರು ಉಳ್ಳಾಲ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ 14ಗ್ರಾಂ ಎಂಡಿಎಂಎ ಮಾರಾಟ ಮಾಡಲು ಯತ್ನಿಸುವ ಸಂದರ್ಭ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸಿ, 14 ಗ್ರಾಂ ಎಂಡಿಎಂಎ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿಯಿಂದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ, ಪಿಎಸ್ಐ ಶೀತಲ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಕ್ಬರ್, ಅಶೋಕ್, ಮಂಜು, ವೆಂಕಟೇಶ್ ಭಾಗವಹಿಸಿದ್ದರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

Continue Reading

DAKSHINA KANNADA

ಮನೆಯ ಯಜಮಾನನ್ನು ಕಟ್ಟಿ ಹಾಕಿ ನಗ, ನಗದು ದರೋಡೆ- 6 ಜನ ಬಂಧನ..!

Published

on

ಪುತ್ತೂರು: ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ಸೆ. 7ರಂದು ನಡೆದಿದ್ದು, ಇದೀಗ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಧೀರ್ ಪೆರುವಾಯಿ, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಪಚ್ಚಂಬಳ ರವಿ, ಕಿರಣ್, ವಸಂತ, ಫಸಲ್, ನಿಝಾರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳಾಗಿದ್ದಾರೆ.

ಪಚ್ಚಂಬಳ ರವಿಯು ಮಂಗಳೂರಿನ ತಾಲೂಕು ಪಂಚಾಯತ್ ಅಧ್ಯಕ್ಷ ಜಬ್ಬಾರ್ ಹತ್ಯೆಯ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಆರೋಪಿಯಾಗಿದ್ದಾನೆ.

ಪೆರೋಲ್ ಮೂಲಕ ಜೈಲಿನಿಂದ ಹೊರಗೆ ಬಂದು ಕಳ್ಳವು ಕೃತ್ಯ ನಡೆಸಿದ್ದಾನೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯರಾಗಿರುವ ಗುರುಪ್ರಸಾದ್ ರೈ ಯವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿತ್ತು.

ನಸುಕಿನ ಜಾವ ಸುಮಾರು 2 ಗಂಟೆಗೆ ಮನೆಯ ಮುಂದಿನ ಬಾಗಿಲ ಮೂಲಕ ಮನೆಯೊಳಗೆ ನುಗ್ಗಿದ ಸುಮಾರು 8 ಜನರಿದ್ದ ಮುಸುಕುಧಾರಿಗಳ ತಂಡ ಗುರುಪ್ರಸಾದ್ ಅವರನ್ನು ಕಟ್ಟಿ ಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ಮತ್ತು ಸುಮಾರು 15 ಪವನ್ ನಷ್ಟು ಚಿನ್ನವನ್ನು ದರೋಡೆ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು.

Continue Reading

LATEST NEWS

Trending