Connect with us

    LATEST NEWS

    ಕಳ್ಳತನ ಮಾಡಲೆಂದೇ ವರ್ಷದಲ್ಲಿ ಸುಮಾರು 200 ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ

    Published

    on

    ಕೆಲವರಿಗೆ ಕಳ್ಳತನ ಮಾಡುವುದು ಒಂದು ರೂಢಿ ಆಗಿ ಬಿಡುತ್ತದೆ. ಏನೇನೊ ಹರಸಾಹಸ ಮಾಡಿ ಕಳ್ಳತನ ಮಾಡಿದ್ರೆ ಇನ್ನು ಕೆಲವರು ಸ್ವಲ್ಪ ವಿಶೇಷವಾಗಿ ಕಳ್ಳತನ ಮಾಡುತ್ತಾರೆ. ಅದಕ್ಕೊಂದು ಉದಾಹರಣೆ ಈ ವ್ಯಕ್ತಿ. ಕಳ್ಳತನ ಮಾಡಲೆಂದೇ ವರ್ಷದಲ್ಲಿ 200 ಕ್ಕೂ ಅಧಿಕ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಒಂದು ವರ್ಷದಲ್ಲಿ 200 ಬಾರಿ ವಿಮಾನದಲ್ಲಿ ಪ್ರಯಾಣಿಸಿ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೇಶ್ ಕಪೂರ್ ಎಂಬಾತ ಕಳ್ಳತನ ಮಾಡಲೆಂದೇ ವಿಮಾನದಲ್ಲಿ ಸುಮಾರು 110 ದಿನಗಳ ಕಾಲ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಐಜಿಐ ಉಷಾ ರಂಗ್ನಾನಿ ಮಾತನಾಡಿ, ಕಪೂರ್ ಅವರನ್ನು ಪಹರ್‌ಗಂಜ್‌ನಲ್ಲಿ ಕದ್ದ ಆಭರಣಗಳ ಜತೆ ಬಂಧಿಸಲಾಗಿದೆ. ಈ ಆಭರಣಗಳನ್ನು ಕರೋಲ್ ಬಾಗ್‌ನಿಂದ ಬಂಧಿಸಲ್ಪಟ್ಟ ಶರದ್ ಜೈನ್‌ಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದ ಎಂದು ಅವರು ಹೇಳಿದರು. ಕಳೆದ ಮೂರು ತಿಂಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ವರದಿಯಾಗಿವೆ ಎಂದು ರಂಗಾನಿ ಹೇಳಿದ್ದಾರೆ. ನಂತರ ಐಜಿಐ ವಿಮಾನ ನಿಲ್ದಾಣದಿಂದ ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಲಾಗಿದೆ.

    ಏಪ್ರಿಲ್ 11 ರಂದು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದರು. ಫೆಬ್ರವರಿ 2 ರಂದು ಮತ್ತೊಂದು ಕಳ್ಳತನ ವರದಿಯಾಗಿದ್ದು, ಅಮೃತಸರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳೆದುಕೊಂಡಿದ್ದರು.

    ತನಿಖೆಯ ಸಂದರ್ಭದಲ್ಲಿ ದೆಹಲಿ ಮತ್ತು ಅಮೃತಸರ ವಿಮಾನ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಮಾನದ ಮ್ಯಾನಿಫೆಸ್ಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕಳ್ಳತನದ ಘಟನೆಗಳು ವರದಿಯಾದ ಎರಡೂ ವಿಮಾನಗಳಲ್ಲಿ ಕಾಣಿಸಿಕೊಂಡಿದ್ದರಿಂದ ಶಂಕಿತನನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.

    ಶಂಕಿತ ಪ್ರಯಾಣಿಕರ ಫೋನ್ ಸಂಖ್ಯೆಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಪಡೆಯಲಾಗಿದೆ, ಆದರೆ ಬುಕ್ಕಿಂಗ್ ಸಮಯದಲ್ಲಿ ಅವರು ನಕಲಿ ಸಂಖ್ಯೆಯನ್ನು ಕೊಟ್ಟಿದ್ದರು ಎಂದು ಅಧಿಕಾರಿ ಹೇಳಿದರು.

    ತಾಂತ್ರಿಕ ಕಣ್ಗಾವಲು ನಂತರ, ಕಪೂರ್ ಅವರ ಮೂಲ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಲಾಯಿತು ಮತ್ತು ಅವರು ಸಿಕ್ಕಿಬಿದ್ದರು. ನಿರಂತರ ವಿಚಾರಣೆಯಲ್ಲಿ, ಹೈದರಾಬಾದ್‌ನ ಒಂದು ಪ್ರಕರಣ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    Baindooru

    ಬಿಗ್ ಬಾಸ್ ಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹಿಂದೂ ಫೈರ್ ಬ್ರಾಂಡ್ ಚೈತ್ರಾ

    Published

    on

    ಮಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರೋ ಈ ಶೋಗೆ ಸ್ಪರ್ಧಿಗಳು ಯಾರಾಗ್ತಾರೆ ಅನ್ನೋದು ಕುತೂಹಲವೇ ಹೆಚ್ಚು. ಈ ಬಾರಿ ಅಂದ್ರೆ ಸೀಸನ್ 11 ರ ಸ್ಪರ್ಧಿಗಳು ಯಾರು ಅನ್ನೋ ‘ರಾಜ ರಾಣಿ’ ರಿಯಾಲಿಟಿ ಶೋ ನ ಗ್ರ್ಯಾಂಡ್ ಫಿನಾಲೇಲಿ ರಿವೀಲ್ ಆಗುತ್ತಿದೆ.

    ಎಂಟ್ರಿ ಕೊಟ್ಟ ಚೈತ್ರಾ!

    ಮೊದಲ ಸ್ಪರ್ಧಿಯಾಗಿ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್, 2ನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್‌ ಬಿಗ್ ಬಾಸ್ ಮನೆ ಸೇರುತ್ತಿದ್ದು, ಇನ್ನೂ 3ನೇ ಸ್ಪರ್ಧಿಯಾಗಿ ‘ಬಿಗ್ ಬಾಸ್‌’ ಮನೆಯೊಳಗೆ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಎಂಟ್ರಿ ಕೊಟ್ಟಿದ್ದಾರೆ.
    ಖಡಕ್‌ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
    ಅಲ್ಲದೇ, ಖಾಸಗಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

    ಇದನ್ನು ಓದಿ: ನಟಿ ಸುಕೃತಾ ನಾಗ್ ಸಿಲ್ಕ್ ಸೀರೆಯಲ್ಲಿ ಮಿಂಚಿಂಗ್… ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!

    ವಂಚನೆ ಪ್ರಕರಣ:
    ಪ್ರಖರ ಭಾಷಣಗಳ ಮೂಲಕ ಗಮನ ಸೆಳೆದಿದ್ದ ಚೈತ್ರಾ ಕಾಂಟ್ರವರ್ಸಿಗಳ ಮೂಲಕವೂ ಸದ್ದು ಮಾಡಿದ್ದಾರೆ. ಅಲ್ಲದೇ, ಬಿಜೆಪಿ ಟಿಕೆಟ್ ಕೊಡುವ ವಿಚಾರದಲ್ಲಿ ಬೈಂದೂರಿನ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದಡಿ ಜೈಲು ಪಾಲಾಗಿದ್ದರು.
    ಸದ್ಯ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿರುವ ಚೈತ್ರಾ ಅಲ್ಲಿ ಹೇಗಿರ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

    Continue Reading

    DAKSHINA KANNADA

    ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    Published

    on

    ಮಂಗಳೂರು/ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂ ಸವಾರಿ ನೋಡಲು ಜನರು ಕಾಯುತ್ತಿದ್ದಾರೆ. ಈ ಹಿಂದೆ ದಸರಾ ಆನೆಗಳೊಂದಿಗೆ ಫೋಟೋ, ರೀಲ್ಸ್ ಗೆ ಸರ್ಕಾರ ಬ್ರೇಕ್ ಹಾಕಿತ್ತು. ಈಗ ತತ್ತೂರಿ ಬ್ಯಾನ್ ಮಾಡಲಾಗಿದೆ.

    ತುತ್ತೂರಿ ಬ್ಯಾನ್ ಮಾಡುವಂತೆ ಸೂಚಿಸಿ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತುತ್ತೂರಿ ಕಿರಿಕಿರಿ ಉಂಟುಮಾಡುವ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.

    ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35, 36 ಮತ್ತು 92 (Q) ಅಡಿ ವುವುಜೆಲಾ (ತುತ್ತೂರಿ) ಮಾರಾಟ ಮಾಡುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 92 (Q) ಪ್ರಕಾರ ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಸೆಕ್ಷನ್ 270ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಿದ್ದು, ಸಾರ್ವಜನಿಕ ಆರೋಗ್ಯ, ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗೆ ಬಾಂ*ಬ್ ಬೆದರಿಕೆ ಇ-ಮೇಲ್

    ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಘಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    Continue Reading

    LATEST NEWS

    ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 3 ಮೃ*ತ್ಯು, 7 ಗಾ*ಯ

    Published

    on

    ಮಂಗಳೂರು/ಹರಿಯಾಣ: ಹರಿಯಾಣದ ಸೋನಿಪತ್‌ನಲ್ಲಿ ಇಂದು (ಸೆ.28) ಬೆಳಿಗ್ಗೆ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋ*ಟವು ಸಂಭವಿಸಿದ್ದು, 3 ಜನರ ಮೃ*ತ್ಯು ಹಾಗೂ 7 ಮಂದಿಗೆ ಗಂ*ಭೀರ ಗಾಯವಾಗಿದೆ.


    ವೇದ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ರಾಸಾಯನಿಕಗಳಿಂದ ಬೆಂ*ಕಿ ಅವ*ಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ಮೂವರ ದೇಹವು ಛಿಧ್ರ*ವಾಗಿದ್ದು, ಗಾ*ಯಾಳುಗಳನ್ನು ಆಸ್ಪತ್ರೆಗೆ ಚಿಕಿ*ತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವೇದ್ ಪರಾರಿಯಾಗಿದ್ದಾನೆ. ಈ ಕುರಿತು ಸೋನಿಪತ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending