ಮಿಜೋರಾಂ : ಬರೋಬ್ಬರಿ 38 ಮಹಿಳೆಯರನ್ನು ಮದುವೆ ಆಗಿದ್ದ, 89 ಮಕ್ಕಳಿಗೆ ಜನ್ಮ ನೀಡಿದ್ದ, 33 ಮೊಮ್ಮಕ್ಕಳ ಅಜ್ಜ ಜಿಯೋನಾ ಚನಾ ನಿನ್ನೆ ನಿಧನರಾಗಿದ್ದಾರೆ.
ಜಗತ್ತಿನ ಅತಿದೊಡ್ಡ ಕುಟುಂಬದ ವಾರಸ್ದಾರ ಎಂದೇ ಗುರುತಿಸಿಕೊಂಡಿದ್ದ ಜಿಯೋನಾ ಚನಾ(76) ರ ವೈವಾಹಿಕ ಬದುಕೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು.
ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ 181 ಸದಸ್ಯರನ್ನ ಹೊಂದಿತ್ತು ಜಿಯೋನಾ ಕುಟುಂಬ. ಮಿಜೋರಾಂನ ಬಕ್ತಾಂಗ್ನಲ್ಲಿ ಜಿಯಾನ್ರ ನಾಲ್ಕಂತಸ್ತಿನ ಆಕರ್ಷಕ ಬಂಗಲೆ ಇದೆ.
ಅಲ್ಲಿಯೇ ಜಿಯೋನಾ ವಾಸವಿದ್ದರು. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.ಜಿಯೋನ್ರ ಅಜ್ಜ 1942ರಲ್ಲಿ ಹಮಾಂಗ್ಕಾವ್ನ ಹಳ್ಳಿಯಿಂದ ಬಂದು ಐಜಾಲ್ನಲ್ಲಿ ನೆಲೆಸಿದ್ದರು.
ಅಂದಿನಿಂದ ಇವರ ಕುಟುಂಬ ಅಲ್ಲೇ ನೆಲೆಸಿದೆ. ಖುವಾಂಗ್ತುಹಾ ಎಂಬ ಪಂಥದಲ್ಲಿ ಬಹುಪತ್ನಿತ್ವ ಪದ್ಧತಿಯಿದೆ. ಹಾಗಾಗಿ ಜಿಯೋನ್ 39 ಮಹಿಳೆಯರನ್ನು ಮದುವೆ ಆಗಿದ್ದರು.
ಇದು ಭಾರಿ ಸುದ್ದಿಯಾಗಿತ್ತು. ಒಬ್ಬರನ್ನ ಮದುವೆ ಆಗಿ ಸಂಬಾಳಿಸೋದೆ ಸಾಕು ಸಾಕು ಅನ್ನಿಸುತ್ತೆ ಎಂದು ಬಹುತೇಕು ಮೂದಲಿಸುತ್ತಿದ್ದಾರೆ. ಆದರೆ ಜಿಯೋನಾ ಮಾತ್ರ ಅದ್ಹೇಗೆ 38 ಹೆಂಡ್ತಿಯರನ್ನ ಸಂಬಾಳಿಸಿ ಇಷ್ಟು ವರ್ಷ ಜೀವನ ನಡೆಸಿದ್ರು!
ಎಂದು ಹಲವರು ಆಶ್ವರ್ಯ ವ್ಯಕ್ತಪಡಿಸಿದ್ದರು.ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಜಿಯೋನ್ರ ಆರೋಗ್ಯ ಇತ್ತೀಚಿಗೆ ಹದಗೆಟ್ಟಿತ್ತು.
ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಮಿಜೋರಾಂನ ಸಿಎಂ ಸಂತಾಪ ಸೂಚಿಸಿದ್ದಾರೆ.