Friday, July 1, 2022

ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಣೆ

ಮಂಗಳೂರು: ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 115 ಮಂಗಳಮುಖಿಯರಿಗೆ ನಗರದ ವಿ.ಟಿ.ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಿಸಲಾಯಿತು.

ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಮತ್ತು ದಿನಬಳಕೆಯ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ಸ್ವೀಕರಿಸಿದ ಮಂಗಳಮುಖಿಯರ ಪರವಾಗಿ ಮಾತನಾಡಿದ ಬಾಲಕೃಷ್ಣ ಟ್ರಸ್ಟಿನ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ‘ಲಾಕ್ ಡೌನ್ ಅವಧಿಯಲ್ಲಿ ಬದುಕು ಸಾಗಿಸುವುದೇ ಸವಾಲಾಗಿತ್ತು.

ಆದಾಯ ಇಲ್ಲದೆ ದಿನ ದೂಡುವುದು ಸಂಕಷ್ಟಮಯವಾಗಿತ್ತು. ಇಂತಹ ಸಮಯದಲ್ಲಿ ಮಾನವೀಯ ಹೃದಯವುಳ್ಳ ದಾನಿಗಳ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ.ಬೆಂಗಳೂರಿನ ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನವರು ಗೌರವಪೂರ್ಣವಾಗಿ ಆಹ್ವಾನಿಸಿ ಸಹಾಯಹಸ್ತ ಚಾಚಿದ್ದಾರೆ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ’ ಎಂದರು.

ಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಹನುಮಂತ ಕಾಮತ್, ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಟ್ರಸ್ಟಿನ ಪದಾಧಿಕಾರಿಗಳು, ಹಿತೈಷಿಗಳು ಇದ್ದರು.

LEAVE A REPLY

Please enter your comment!
Please enter your name here

Hot Topics

ರಾಜಸ್ಥಾನ್ ಟೈಲರ್ ಹತ್ಯೆ ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ರಾಜಸ್ತಾನದ ಉದಯಪುರದಲ್ಲಿ ಭಯೋತ್ಪಾದಕರಿಂದ ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹತ್ಯೆ ಮಾಡಿದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್...

ಅಕ್ರಮ ಜಾನುವಾರು ಮಾಂಸ ಸಾಗಾಟ: ತಲಪಾಡಿಯಲ್ಲಿ ಇಬ್ಬರು ವಶಕ್ಕೆ

ಮಂಗಳೂರು: ಕೇರಳ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಕಾರಿನಲ್ಲಿ ಜಾನುವಾರು ಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣಾಧಿಕಾರಿ ತಂಡದ ಪೊಲೀಸರು ತಲಪಾಡಿಯಲ್ಲಿ ಬಂಧಿಸಿ, ಅವರಿಂದ ಸಾಗಾಟಕ್ಕೆ ಬಳಸಿದ ಓಮ್ನಿ ಕಾರು...

ವಿಟ್ಲದಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ರಸ್ತೆ-ವಾಹನಗಳ ಬದಲಿ ಸಂಚಾರ

ವಿಟ್ಲ: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ನೀರಿನ ಮಟ್ಟ ಮಧ್ಯಾಹ್ನದವರೆಗೆ ಇಳಿಕೆಯಾಗದ ಹಿನ್ನೆಲೆಯಲ್ಲಿ ಘನವಾಹನಗಳನ್ನು ಹೊರತುಪಡಿಸಿ ಕೆಲವೊಂದು ವಾಹನಗಳು ಸುತ್ತು ಬಳಸಿ ಬದಲಿ ಸಂಚಾರ ನಡೆಸಿದ ಘಟನೆ ವಿಟ್ಲದ ಕೊಳ್ನಾಡು...