ನವದೆಹಲಿ : ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಎರಡೂ ರಾಜ್ಯಗಳ ಜನರ ನಡುವೆ ಘರ್ಷಣೆಗಳು ನಡೆದಿದ್ದು ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ಧಾವಿಸಿದ್ದ ಅಸ್ಸಾಂ ನ 6 ಮಂದಿ ಪೊಲೀಸರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.
ಕಚಹಾರ್ ಜಿಲ್ಲೆಯಲ್ಲಿರುವ ಗಡಿ ರೇಖೆಯ ಬಳಿ ಎರಡೂ ರಾಜ್ಯಗಳ ನೂರಾರು ಜನರು ಜಮಾವಣೆಗೊಂಡು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಮಿಝೋರಾಂ ಗಡಿಯಿಂದ ಹಾರಿ ಬಂದ ಗುಂಡುಗಳಿಗೆ ಅಸ್ಸಾಂ ಪೊಲೀಸ್ ಪಡೆಯ 6 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಈ ವಿಷಯವನ್ನು ಅಸ್ಸಾಂ ಮುಖ್ಯಮಂತ್ರಿ ಬಿಸ್ವಾಶರ್ಮಾ ಧೃಡಪಡಿಸಿದ್ದಾರೆ.
ಕಲ್ಲೂ ತೂರಾಟ ಹಾಗೂ ಗುಂಡು ಹಾರಾಟದಿಂದ ಅಸ್ಸಾಂ ಪೊಲೀಸ್ ನ 50 ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಬಿಸ್ವಾಶರ್ಮಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿಲ್ಲಾಂಗ್ʼನಲ್ಲಿ ಈಶಾನ್ಯದ ಎಲ್ಲಾ ಮುಖ್ಯಮಂತ್ರಿಗಳನ್ನ ಭೇಟಿಯಾದ 2 ದಿನಗಳ ನಂತ್ರ ಈ ಘಟನೆ ನಡೆದಿದೆ.
.