Monday, August 8, 2022

ತೈಲ ಬೆಲೆಯೇರಿಕೆ: ಜೂ.16ರಂದು ಜಿಲ್ಲಾದ್ಯಂತ ಎಸ್ಡಿಪಿಐ ಪ್ರತಿಭಟನೆ

ಮಂಗಳೂರು: ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿ ಲಾಕ್ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಜನಸಾಮಾನ್ಯರು ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುತ್ತಿರುವಾಗ ಜನರ ನೆರವಿಗೆ ಧಾವಿಸಬೇಕಾದ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಿತಕಾಯುವ ನಿಟ್ಟಿನಲ್ಲಿ ನಿರಂತರವಾಗಿ ತೈಲ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳುವ ಅಮಾನವೀಯ ಕೆಲಸ ಕಾರ್ಯಗಳನ್ನು ಮಾಡುತ್ತಿದೆ.

 

ಲಾಕ್‌ಡೌನ್‌ನಲ್ಲಿ ದಿನಂಪ್ರತಿ ತೈಲ ಬೆಲೆಯನ್ನು ಏರಿಸುವ ಮೂಲಕ ಪೆಟ್ರೋಲ್ ಬೆಲೆ ನೂರು ರುಪಾಯಿ ದಾಟಿದೆ. ಇದರಿಂದಾಗಿ ಭಾರತ ಇಂದು ಜಗತ್ತಿನ ಅತೀ ದುಬಾರಿ ಬೆಲೆಗೆ ತೈಲ ಮಾರುವ ದೇಶವೆಂಬ ಕುಖ್ಯಾತಿ ಗಳಿಸಿದೆ ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ
ಇಂತಹ ಅನಿಯಂತ್ರಿತ ತೈಲ ಬೆಲೆಯೇರಿಕೆಯ ವಿರುದ್ಧ ಜೂನ್ 16 ಬುಧವಾರದಂದು ಬೆಳಿಗ್ಗೆ 6 ರಿಂದ 9 ಗಂಟೆಯ ವರೆಗೆ SDPI ದಕ್ಷಿಣ ಕನ್ನಡ ಜಿಲ್ಲಾದ್ಯಂತ ವಿವಿಧ ರೀತಿಯ ಪ್ರತಿಭಟನೆ ನಡೆಸಲಿದೆ. ಅಂದು ಎಲ್ಲಾ ತಾಲೂಕು ಕೇಂದ್ರ, ನಗರ ,ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಕೇಂದ್ರ ಸರಕಾರದ ಒಡೆತನದ ಪೆಟ್ರೋಲ್ ಬಂಕ್ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪ್ರತಿಭಟನೆ ನಡೆಯಲಿದೆ

ಪ್ರತಿಭಟನೆಯಲ್ಲಿ ಎಸ್ಡಿಪಿಐ ಪಕ್ಷದ ಎಲ್ಲಾ ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರು: ಫ್ಲ್ಯಾಟ್‌ನಿಂದ ವಿದ್ಯಾರ್ಥಿ ಬಿದ್ದು ಸಾವು ಪ್ರಕರಣ- ಸಮಗ್ರ ತನಿಖೆಗೆ ತಂದೆಯ ಮನವಿ

ಪುತ್ತೂರು: ನಗರದ ಹೊರವಲಯದ ಬೊಳುವಾರಿನ ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಮೃತಪಟ್ಟ ಬಾಲಕ ಸುಶಾನ್ ರೈ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಬಾಲಕನ ತಂದೆ ಪುತ್ತೂರು ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.ಬೊಳುವಾರು...

ಒಲಿಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟ: ಮಂಗಳೂರು ಮೂಲದ ಲಿಖಿತಾ ಹರೀಶ್ ತಂಡಕ್ಕೆ ಕಂಚು

ಮಂಗಳೂರು: ಅಮೆರಿಕಾದ ಮೆಚಿಗನ್‌ನಲ್ಲಿ ಸ್ಪೆಷಲ್ ಒಲಿಂಪಿಕ್ ಭಾರತ್ ನ್ಯಾಷನಲ್ ಕೋಚಿಂಗ್ ಕ್ಯಾಂಪ್‌ನ ಪಾಲುದಾರಿಕೆಯಲ್ಲಿ ಆಯೋಜಿಸಿದ್ದ ಸ್ಪೆಷಲ್ ಒಲಿಂಪಿಕ್ ಯುನಿಫೈಡ್ ಕಪ್-2022 ಅಂತರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಂಗಳೂರಿನ ಸುರತ್ಕಲ್ ಲಯನ್ಸ್ ವಿಶೇಷ ಶಾಲೆಯ ವಿದ್ಯಾರ್ಥಿನಿ...

ಓವರ್‌ಟೇಕ್‌ ಮಾಡುತ್ತಿದ್ದ ವೇಳೆ ಜೀಪ್‌ಗೆ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಕೊನೆಯುಸಿರು

ಬಂಟ್ವಾಳ: ಓವರ್‌ಟೇಕ್‌ ಮಾಡುವ ವೇಳೆ ಸ್ಕೂಟಿ ಎದುರಿನಿಂದ ಬಂದ ಜೀಪ್‌ಗೆ ಢಿಕ್ಕಿ ಹೊಡೆದು ಓರ್ವ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಉಕ್ಕುಡ ಬಳಿ ನಡೆದಿದೆ.ಮೃತ...