LATEST NEWS
ಮಳಲಿ ವಿವಾದ: ಸಿವಿಲ್ ಕೋರ್ಟ್‌ಗೆ ವಿಚಾರಣೆ ಅಧಿಕಾರವಿಲ್ಲ-ಮಸೀದಿ ಪರ ವಕೀಲರಿಂದ ವಾದ
ಮಂಗಳೂರು: ಮಳಲಿ ಮಸೀದಿ ವಿವಾದ ಬಗ್ಗೆ ನಿನ್ನೆ ಮೂರನೇ ಬಾರಿ ಮಂಗಳೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನಿನ್ನೆ ವಿಚಾರಣೆ ನಡೆದು ಜೂ.9ಕ್ಕೆ ಮತ್ತೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಮಸೀದಿ ಆಡಳಿತ ಮಂಡಳಿಯ ವಾದವೇನು?
ಮಸೀದಿ ಆಡಳಿತ ಮಂಡಳಿಯ ಪರವಾಗಿ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿ ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿಯಲ್ಲೂ ಸರ್ವೇ ಕಾರ್ಯ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದ್ದರೆ, ಈ ಅರ್ಜಿಯನ್ನು ವಜಾಗೊಳಿಸಬೇಕು.
ಜೊತೆಗೆ ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿಯಾಗಿ ನಮೂದಾಗಿರುವುದರಿಂದ ಇದರ ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಇದರ ಅಧಿಕಾರ ಇರುವುದು ವಕ್ಫ್ ಟ್ರಿಬ್ಯೂನಲ್ಸ್‌ಗೆ ಮಾತ್ರ ಎಂದು ವಾದಿಸಿದರು.
ಇದಕ್ಕೆ ಪೂರಕವಾಗಿ ವಕ್ಫ್ ಕಾಯ್ದೆಗಳ ಪ್ರಮುಖ ಪುಟಗಳನ್ನು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಹಲವು ತೀರ್ಪುಗಳನ್ನೂ ಉಲ್ಲೇಖಿಸಿದ ಎ೦.ಪಿ. ಶೆಣೈ, ವಿಎಚ್ ಪಿ ಅರ್ಜಿಯನ್ನು ತಿರಸ್ಕರಿಸಿ ಮಸೀದಿ ನವೀಕರಣ ಕಾಮಗಾರಿಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ಅವರು ವಾದ ಮಂಡನೆಗೆ ಸಮಯವಕಾಶ ಕೇಳಿದ್ದಾರೆ. ಜೂ.9ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಇದಕ್ಕೂ ಮೊದಲು ಅಂದರೆ ಮೇ.31 ಹಾಗೂ ಜೂ.1ರಂದು ನಡೆದ ಅರ್ಜಿ ವಿಚಾರಣೆ ವೇಳೆ ಎರಡೂ ಕಡೆಯ ವಕೀಲರು ವಾದ ಮಂಡಿಸಿದ್ದರು.
ಆಗ ವಾದ ಮಂಡಿಸಿದ ವಿಹೆಚ್‌ಪಿ ಪರ ವಕೀಲ, ಇಸ್ಲಾಂ ನಿಯಮಗಳ ಪ್ರಕಾರ ನಮಾಜ್‌ನ್ನು ಎಲ್ಲಿ ಬೇಕಾದರೂ ಮಾಡಬಹುದು. ನಿಗದಿತ ಜಾಗದಲ್ಲೇ ಮಾಡಬೇಕೆಂದಿಲ್ಲ. ಮಸೀದಿ ಜಾಗದಲ್ಲಿ ದೇವಾಲಯ ಮಾದರಿಗಳು ಕಂಡುಬಂದಿರುವುದರಿಂದ ವಿವಾದಿತ ಜಾಗದ ಸರ್ವೇ ಮಾಡಲು ಕೋರ್ಟ್ ಆದೇಶ ಮಾಡಬೇಕು ಎಂದು ವಾದ ಮಂಡಿಸಿದ್ದರು.
ಅದಕ್ಕೆ ಪ್ರತಿವಾದ ಮಂಡಿಸಿದ ಮಸೀದಿ ಆಡಳಿತ ಮಂಡಳಿ ಪರ ವಕೀಲರು, ಮಳಲಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇದೇ ಜಾಗದಲ್ಲಿ ದಫನ ಭೂಮಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದಕ್ಕೆ ದಾಖಲೆಗಳಿವೆ. ಮೇಲಾಗಿ ಇದು ವಕ್ಫ್ ಆಸ್ತಿಯಾಗಿ ಸರ್ಕಾರಿ ದಾಖಲೆಗಳಲ್ಲೂ ಉಲ್ಲೇಖವಾಗಿದೆ.
ಪಂಚಾಯ್ತಿ ಅನುಮತಿ ಪಡೆದೇ ನವೀಕರಣ ಮಾಡಲು ತೊಡಗಿದ್ದಾರೆ. ಮಸೀದಿ ಇತಿಹಾಸಕ್ಕೆ ಪೂರಕ ದಾಖಲೆಗಳು ಇವೆ. ಆದರೆ ದೇವಾಲಯವಿತ್ತು ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ, ಹಾಗಾಗಿ ವಿಹಿಂಪದ ಸರ್ವೇ ಮನವಿ ತಿರಸ್ಕರಿಸಬೇಕು ಎಂದು ವಾದಿಸಿದ್ದರು.
ವಿವಾದವೇನು?
ಇದೇ ವರ್ಷದ ಏಪ್ರಿಲ್ 21ರಂದು ಮಳಲಿ ಮಸೀದಿ ನವೀಕರಣ ಹಿನ್ನೆಲೆಯಲ್ಲಿ ಕಟ್ಟಡದ ಕೆಲವು ಭಾಗವನ್ನು ಕೆಡವುತ್ತಿದ್ದಾಗ ದೇವಸ್ಥಾನ ಮಾದರಿಯ ಕೆಲವೊ೦ದು ವಸ್ತುಗಳು ಪತ್ತೆಯಾಗಿದ್ದರಿ೦ದ ಹಿ೦ದೂ ಸಂಘಟನೆಗಳು ಇದು ದೇವಸ್ಥಾನವೆಂದು ಪ್ರತಿಪಾದಿಸಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಜೊತೆಗೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಸೀದಿ ಪಕ್ಕದಲ್ಲಿರುವ ಮಳಲಿಯ ಭಜನಾ ಮಂದಿರದಲ್ಲಿ ಇತ್ತೀಚೆಗೆ ತಾಂಬೂಲ ಪ್ರಶ್ನೆ ಇರಿಸಲಾಗಿತ್ತು. ಈ ವೇಳೆ ದೈವ ಸಾನಿಧ್ಯ ಇರುವುದು ಕಂಡುಬಂದಿತ್ತು.
LATEST NEWS
ಎತ್ತಿನಹೊಳೆ ಕಾಮಗಾರಿ ನಾಲೆಯ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾ*ವು
ಮಂಗಳೂರು/ತಿಪಟೂರು : ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂ*ಡಿಗೆ ಬಿ*ದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ. ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃ*ತ ಬಾಲಕರು.
ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿ*ದ್ದು ಸಾ*ವನ್ನಪ್ಪಿದ್ದಾರೆ ಎಂಬ ಹೇಳಲಾಗಿದೆ.
ಇದನ್ನೂ ಓದಿ : BBK11: ಬಿಗ್ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಗುರುವಾರ(ನ.7) ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ(ನ.8) ಬೆಳಿಗ್ಗೆ ಬಾಲಕರ ಶ*ವ ಪತ್ತೆಯಾಗಿದೆ.
BIG BOSS
BBK11: ಬಿಗ್ಬಾಸ್ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್ ಸುರೇಶ್ ಗೆ ಈ ವಾರದ ಕಳಪೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್ ಸುರೇಶ್ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.
ಕನ್ನಡದ ಬಿಗ್ಬಾಸ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್ಬಾಸ್ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್ ಸುರೇಶ್ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್ಬಾಸ್ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.
LATEST NEWS
ಕುಂಡಗಳಲ್ಲಿ ಗಾಂಜಾ ಬೆಳೆದ ದಂಪತಿ ; ರೀಲ್ಸ್ ಮಾಡಿ ತಗಲಾಕ್ಕೊಂಡ ಜೋಡಿ!
ಮಂಗಳೂರು/ಬೆಂಗಳೂರು : ಹೂವಿನ ಕುಂಡಗಳಲ್ಲಿ ಗಾಂ*ಜಾ ಗಿಡಗಳನ್ನು ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಎಂಎಸ್‌ಆರ್ ನಗರ 3ನೇ ಮೇನ್‌ನಲ್ಲಿ ವಾಸವಾಗಿರುವ ಸಿಕ್ಕಿಂನ ಕೆ.ಸಾಗರ್ ಗುರುಂಗ್ (37) ಮತ್ತು ಆತನ ಪತ್ನಿ ಊರ್ಮಿಳಾ ಕುಮಾರಿ (38) ಬಂಧಿತರು.
ರೀಲ್ಸ್ ಮಾಡಿ ಸಿಕ್ಕಿ ಬಿದ್ರು :
ಈ ಜೋಡಿ ಫಾಸ್ಟ್ ಫುಡ್ ಜಾಯಿಂಟ್ ನಡೆಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಊರ್ಮಿಳಾ ಕುಮಾರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವೀಡಿಯೋ ಮತ್ತು ಫೋಟೋ ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಎಂಎಸ್‌ಆರ್ ನಗರದ ತಮ್ಮ ಮನೆಯಲ್ಲಿ ಹೂವಿನ ಕುಂಡಗಳಲ್ಲಿ ಬೆಳೆಯುತ್ತಿರುವ ವಿವಿಧ ಸಸ್ಯಗಳ ವೀಡಿಯೋ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಮನೆಯ ಬಾಲ್ಕನಿಯಲ್ಲಿ ಹೂ ಕುಂಡಗಳಲ್ಲಿ ಹೂ ಗಿಡಗಳನ್ನು ದಂಪತಿ ಬೆಳೆಸಿದ್ದರು. 20 ಕುಂಡಗಳ ಪೈಕಿ ಎರಡು ಕುಂಡಗಳಲ್ಲಿ ಗಾಂ*ಜಾ ಬೆಳೆದಿದ್ದರು. ಈ ಹೂ ಗಿಡಗಳ ನಡುವೆ ಬೆಳೆದಿದ್ದ ಗಾಂ*ಜಾ ಗಿಡಗಳು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೀಡಿಯೋವನ್ನು ನೋಡಿದ ವ್ಯಕ್ತಿಯೊಬ್ಬ ಗಾಂ*ಜಾ ಗಿಡ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದನ್ನೂ ಓದಿ : ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
ಈ ಮಾಹಿತಿ ಆಧರಿಸಿ ಸದಾಶಿವನಗರ ಠಾಣೆ ಪೊಲೀಸರು ನ. 5 ರಂದು ಊರ್ಮಿಳಾ ದಂಪತಿ ಮನೆ ಪತ್ತೆ ಹಚ್ಚಿದ್ದರು. ಪೊಲೀಸರ ದಾಳಿ ಊಹಿಸಿದ್ದ ದಂಪತಿ ಗಾಂ*ಜಾ ಗಿಡಗಳನ್ನು ಮುರಿದು ಡಸ್ಟ್ ಬಿನ್‌ನಲ್ಲಿ ಎಸೆದಿದ್ದರು ಎನ್ನಲಾಗಿದೆ. ಶೋಧ ಕಾರ್ಯಾಚರಣೆ ನಡೆಸಿ ಸುಮಾರು 54 ಗ್ರಾಂ ತೂಕದ ಹಸಿ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಊರ್ಮಿಳಾ ಹಾಗೂ ಸಾಗರ್ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಗಾಂಜಾ ಪ್ರಮಾಣ ಕಡಿಮೆ ಇದ್ದ ಕಾರಣ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದಾರೆ.
- DAKSHINA KANNADA6 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM2 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್