Sunday, December 4, 2022

ಫುಡ್ ಡೆಲಿವರಿ ಏಜೆಂಟ್‌ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಸಸ್ಪೆಂಡ್

ಕೊಯಮತ್ತೂರು: ಫುಡ್ ಡೆಲಿವರಿ ಏಜೆಂಟ್‌ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಪೇದೆಯನ್ನು ಬಂಧಿಸಿ ಸಸ್ಪೆಂಡ್ ಮಾಡಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.


ಇದಕ್ಕೆ ಸಂಬಂಧಿಸಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಆಹಾರ ವಿತರಣಾ ಏಜೆಂಟ್ ಮೋಹನಸುಂದರಂ ಅವರು ನೀಡಿರುವ ದೂರು ಮತ್ತು ವೈರಲ್ ಆಗಿರುವ ಘಟನೆಯ ವೀಡಿಯೊ ಕ್ಲಿಪ್ ಆಧಾರದ ಮೇಲೆ ಕಾನ್‌ಸ್ಟೆಬಲ್ ಸತೀಶ್ ಅವರನ್ನು ಶನಿವಾರ ತಡರಾತ್ರಿ ಬಂಧಿಸಿ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬಹಿರಂಗಗೊಂಡಿರುವ ವೀಡಿಯೋದಲ್ಲಿ ಶುಕ್ರವಾರ ಅವಿನಾಶಿ ರಸ್ತೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ ಸತೀಶ್ ಮೋಹನಸುಂದರಂ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.

ಡೆಲಿವರಿ ಏಜೆಂಟ್ ಮೇಲೆ ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಆರೋಪಿ ಪೊಲೀಸರ ವಿರುದ್ಧ ಕ್ರಿಮಿನಲ್ ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Hot Topics