Connect with us

DAKSHINA KANNADA

ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಇಟ್ಟವರಲ್ಲಿ ಕೆಲವು ಪ್ರಶ್ನೆಗಳು: ಮುನೀರ್ ಕಾಟಿಪಳ್ಳ

Published

on

ಮಂಗಳೂರು: ಇಂದು ಮಳಲಿಯಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆ ಬಗ್ಗೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪತ್ರಿಕಾ ಪ್ರಕಟಣೆ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ವಿವರ ಇಲ್ಲಿದೆ.


ಮನೇಲ್ (ಮಳಲಿ ಪೇಟೆ) ಇತಿಹಾಸದ ಕುರಿತು ನನ್ನಲ್ಲೂ ಪ್ರಶ್ನೆಗಳಿವೆ. ಮಳಲಿ ರಾಣಿ ಅಬ್ಬಕ್ಕನ ಕಾಲದಿಂದಲೂ ಖ್ಯಾತಿ ಪಡೆದ ಊರು.

ಅದು ಹೆಚ್ಚು ಖ್ಯಾತಿ ಪಡೆದದ್ದು ದೊಡ್ಡ ಪ್ಯೂಡಲ್ ಭೂಮಾಲಕರು ಅಲ್ಲಿ ಇದ್ದ ಕಾರಣಕ್ಕೆ. ಅಲ್ಲಿನ ಹಿಂದುಳಿದ ಜಾತಿಯ ತುಳುವರು, ಬ್ಯಾರಿಗಳು ಗೇಣಿದಾರ ಬಡ ರೈತರಾಗಿದ್ದರು.

ಸ್ವಾತಂತ್ರ್ಯಾ ನಂತರ ಕಮ್ಯುನಿಸ್ಟರ ನೇತೃತ್ವದ ರೈತ ಸಂಘ ಗೇಣಿದಾರರನ್ನು ಸಂಘಟಿಸಿ ತುಳುನಾಡಿನಲ್ಲಿ ಭೂಮಾಲಕ ಧಣಿಗಳ ಶೋಷಣೆಯ ವಿರುದ್ದ ಹೋರಾಟಕ್ಕಿಳಿದಾಗ ಮನೇಲ್ ಎಂದು ಕರೆಯಲ್ಪಡುವ ಮಳಲಿ ಪೇಟೆ ಗುರುಪುರ ಫಿರ್ಕಾದ ರೈತ ಹೋರಾಟದ ಕೇಂದ್ರ ಆಗಿತ್ತು.

ಹಾಗೂ ಹೆಂಚು ಕಾರ್ಖಾನೆಗಳು ಹೇರಳ ಉದ್ಯೋಗ ಸೃಷ್ಟಿಸಿದಾಗ ಅಲ್ಲಿ ದುಡಿಮೆಗೆ ಸೇರಿದ ಈ ಗ್ರಾಮಗಳ ತುಳುವರು, ಬ್ಯಾರಿಗಳು ಕಾರ್ಮಿಕ ಚಳವಳಿಯಲ್ಲಿ ಸೇರಿಕೊಂಡು ಕೆಂಬಾವುಟ ಹಿಡಿದಿದ್ದರು.

ಅರವತ್ತು, ಎಪ್ಪತ್ತರ ದಶಕದಲ್ಲಿ ಸುತ್ತಲ ಗ್ರಾಮಗಳಲ್ಲಿ ಗೇಣಿದಾರರ ಹೋರಾಟ ತೀವ್ರಗೊಂಡಾಗ ಕೆಂಬಾವುಟದ ರೈತ ಹೋರಾಟಕ್ಕೆ ಎದುರಾಗಿ ಭೂ ಒಡೆಯರು ಕಟ್ಟೆಮಾರ್ ಭೂಸೇನೆ ಕಟ್ಟಿದರು.

ಬಂದೂಕುಗಳನ್ನೂ ಪ್ರದರ್ಶಿಸಿ ತಮ್ಮ ಒಕ್ಕಲುಗಳಾದ ಗೇಣಿದಾರರನ್ನು ಭೂ ಹೋರಾಟದಿಂದ ಹಿಮ್ಮೆಟ್ಟಿಸಲು ನೋಡಿದರು‌. ಇಂತಹ ಸಮರ ಶೀಲ ಬದುಕಿನ ಹೋರಾಟದಲ್ಲಿ ಬ್ಯಾರಿಗಳು, ಶ್ರೇಣಿಯಲ್ಲಿ ಕೆಳಗಿದ್ದ ಜಾತಿಯ ತುಳುವರು ಒಟ್ಟಾಗಿದ್ದರು.

ಈ ಐಕ್ಯತೆ, ಕೆಂಬಾವುಟದ ಹೋದಾಟ, ದುಡಿಯುವ ವರ್ಗದ ಪ್ರಜ್ಞೆ ಅವರಿಗೆ ಭೂಮಿಯ ಹಕ್ಕು ಕೊಡಿಸಿತು. ಹಂಚು ಕಾರ್ಖಾನೆಯ ಕಾರ್ಮಿಕರಿಗೆ ನ್ಯಾಯಯುತ ಸಂಬಳ, ಸವಲತ್ತು ಕೊಡಿಸಿತು.
ಈಗ ಕಾಲಚಕ್ರ ತಿರುಗಿದೆ.

ಶರಣ್ ಪಂಪ್ ವೆಲ್ ಗ್ಯಾಂಗ್ ಕೇಸರಿ ಧ್ವಜ ಹಿಡಿದು ಮಳಲಿ ಪ್ರವೇಶಿಸಿದೆ. ಹೊಸ ತಲೆಮಾರಿನ ಒಂದು ವಿಭಾಗಕ್ಕೆ ಬದುಕಿನ ಪ್ರಶ್ನೆಗಳ ಕೆಂಬಾವುಟಕ್ಕಿಂತ, ಮತೀಯ ಉನ್ಮಾದದ ಶರಣ್ ಪಂಪ್ ವೆಲ್ ಕೈಯಲ್ಲಿರುವ ಬಜರಂಗ ದಳದ ಧ್ವಜ ಇಷ್ಟವಾಗುತ್ತಿದೆ.

ರೈತ ಕಾರ್ಯಕರ್ತರ ಮಾರ್ಚ್ ಫಾಸ್ಟ್ ಜಾಗದಲ್ಲಿ ಆರ್‌ಎಸ್‌ಎಸ್‌ನ ಕಬಡ್ಡಿ ಆಕರ್ಷಕವಾಗುತ್ತಿದೆ. ಅದರಿಂದಾಗಿ ಮನೇಲ್ ನ ತುಳುವರು,

ಬ್ಯಾರಿಗಳು ಧರ್ಮದ ಆಧಾರದಲ್ಲಿ ವಿಭಜನೆ ಹೊಂದಿದ್ದಾರೆ. ನೂರಾರು ವರ್ಷಗಳಿಂದ ನೋಡುತ್ತಾ, ಹರಕೆ ಹೇಳುತ್ತಾ ಬಂದ ಅಲ್ಲಿನ ಪುರಾತನ ಪಳ್ಳಿ (ಮಸೀದಿ) ಶರಣ್ ಪಂಪ್ ವೆಲ್ ಹೇಳಿದ ತಕ್ಷಣ ದೇವಸ್ಥಾನವಾಗಿ ಕಾಣಿಸತೊಡಗಿದೆ.

ಮಸೀದಿಯ ಜಾಗದ ಮಾವಿನ ಮರದ ಮಿಡಿ ಮಾವು ಗುತ್ತಿನ‌ ಮನೆಗಳಿಗೆ ಪ್ರತಿವರ್ಷ ತಲುಪುತ್ತಿದ್ದದ್ದು. ಅಲ್ಲಿನ ದರ್ಗಾದ ಉರೂಸಿನ ಸಂದರ್ಭ ಬ್ಯಾರಿಗಳ ಒಟ್ಟಿಗೆ

ಸಂದಲ್ ಮೆರವಣಿಗೆ ನಡೆಸಿದ್ದು, ಮಸೀದಿ ಸುತ್ತ ಆಡಿ ನಲಿದದ್ದು, ಬ್ಯಾರಿ ಕಾಕ ಗಳ ಹೊಟೇಲ್ ನಲ್ಲಿ ಕಡಿಮೆ ದರದಲ್ಲಿ ದೋಸೆ, ಇಡ್ಲಿ ತಿಂದು ಕಾರ್ಖಾನೆಯ ಕೆಲಸಕ್ಕೆ ಹೋದದ್ದು ಮರೆತು ಹೋಗಿದೆ.

ಇದನ್ನೆಲ್ಲ ನೆನಪಿಸಲು ಯಾವ ಪೊದವಾಳರನ್ನು, ಫಣಿಕ್ಕರರನ್ನು ಕೇರಳದಿಂದ ಕರೆಸಿ ಪ್ರಶ್ನೆ ಕೇಳಿಸಬೇಕೊ ಗೊತ್ತಿಲ್ಲ. ಇರಲಿ ಈಗಿನ ಮಸೀದಿ ಹಿಂದೆ ದೇವಸ್ಥಾನ ಆಗಿತ್ತು ಎಂದು ಭಾವನಾತ್ಮಕವಾಗಿ ತಾಂಬೂಲ ಪ್ರಶ್ನೆಯ ಮೂಲಕ ಸಾಧಿಸಲು ಹೊರಟವರಲ್ಲಿ ಕೆಲವೊಂದು ಪ್ರಶ್ನೆಗಳಿವೆ.
ಅಬ್ಬಕ್ಕನ ಕಾಲದಿಂದಲೂ ಮಳಲಿ ಪೇಟೆಯಲ್ಲಿ ನಡೆದ ಬೆಳವಣಿಗೆಗಳಿಗೆ ದಾಖಲೆಗಳಿವೆ. (ಅಲ್ಲಿನ ಮಸೀದಿಗೂ ಕಾನೂನಾತ್ಮಕ ದಾಖಲೆಗಳಿವೆ.) ಆದರೆ ಅದಕ್ಕಿಂತ ಪೂರ್ವದಲ್ಲಿ, ಅಂದರೆ ಮಳಲಿಯಲ್ಲಿ ಜನವಸತಿ ಶುರುವಾದ್ದು ಯಾವ ಶತಮಾನದಲ್ಲಿ.

ಅಲ್ಲಿ ಜನ ವಸತಿ ಆರಂಭಗೊಂಡಾಗ ಇದ್ದ ಸಂಸ್ಕೃತಿ ಯಾವುದು ? ಭೂ ಒಡೆಯರು ಅಲ್ಲಿಗೆ ಕಾಲಿಟ್ಟದ್ದು ಯಾವಾಗ ? ಜೈನರಿಗಿಂತ ಪೂರ್ವದಲ್ಲಿ ಅಲ್ಲಿ ಶೈವರು, ವೈಷ್ಣವರು ವಾಸ ಇದ್ದರೆ ? ತುಳುನಾಡಿನ ಪುರಾತನ ಪಂಗಡಗಳಾದ ಕುಡುಬಿ ಗೌಡರು, ಕುಂಬಾರರು, ಬಿಲ್ಲವರು ಮುಂತಾದವರು ಅಲ್ಲಿ ನೆಲೆಯಾದದ್ದು ಹೇಗೆ ?

ಆಗ ನಡೆದ ಸಂಘರ್ಷಗಳು ಯಾರ ನಡುವೆ, ಹೇಗೆ ನಡೆಯಿತು ? ಈ ಹಿಂದುಳಿದ ಜಾತಿಗಳು ಗೇಣಿದಾರರಾಗಿ ಭೂ ಒಡೆಯರ ಒಕ್ಕಲುಗಳಾದ ಬಗೆ ಹೇಗೆ ? ಇವುಗಳಿಗೆ ಉತ್ತರ ಈಗ ಶರಣ್ ಪಂಪ್ ವೆಲ್ ಸಾರಥ್ಯದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಸಿಗುತ್ತದೆಯೆ, ಅಥವಾ ಬೇರೆ ಯಾವುದಾದರು ಜನಗಳನ್ನು ಕೇರಳದಿಂದ ಕರೆಸಬೇಕೆ ?

ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕಿದ ಉತ್ತರದ ಆಧಾರಲ್ಲಿ ಮಳಲಿ ಮಸೀದಿ ಹೋರಾಟಕ್ಕೆ ಇಳಿಯುವ ಮುನ್ನ ಉತ್ತರಿಸಿ. ಮಳಲಿ ಗ್ರಾಮಸ್ಥರು ಕೋಮುವಾದಿ ರಾಜಕಾರಣದ ಆಟಗಳಿಗೆ ಬಲಿ ಬೀಳದೆ ಇದನ್ನೆಲ್ಲ ಗಂಭೀರವಾಗಿ ಆಲೋಚಿಸಬೇಕು. ಮಳಲಿಯ ಬ್ಯಾರಿಗಳು, ಶ್ರಮ ಜೀವಿಗಳಾದ ತುಳುವರು ಕಾಲದಿಂದ ಅಣ್ಣ ತಮ್ಮಂದಿರು ಎಂಬುದನ್ನು ಮರೆಯಬಾರದು.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending