Saturday, August 20, 2022

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ ಆಯ್ಕೆ

ನವದೆಹಲಿ: ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕೊಡಗು ಮೂಲದ ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ.


ಡೆಪ್ಯುಟಿ ಸಿಡಿಎಸ್ ಆಗಿರುವ ಇವರು ಭಾರತೀಯ ಸೇನೆ ವಜ್ರ ಕಾರ್ಪ್ಸ್​ ತುಕಡಿಗೆ ಕಮಾಂಡಿಂಗ್ ಮಾಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸೇನೆ ಹೇಳಿಕೆ ನೀಡಿದೆ.

ಬನ್ಸಿ ಪೊನ್ನಪ್ಪ ಅವರು ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ನಂಗಾಲ ಗ್ರಾಮದವರಾಗಿದ್ದು, ಚನ್ನೀರ ಪೊನ್ನಪ್ಪ ಮತ್ತು ಮೀರಾ ದಂಪತಿಯ ಪುತ್ರರಾಗಿದ್ದಾರೆ.

ಅವರು ನಿತ್ಯಾ ಮೇದಪ್ಪ ಅವರನ್ನು ವಿವಾಹವಾಗಿರುವ ಅವರ ಪುತ್ರ ನಿಶಾಂತ್​ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics