Connect with us

BANTWAL

ಬಂಟ್ವಾಳ: ಮನೆಗೆ ನುಗ್ಗಿ ಪರಾರಿಯಾಗುತ್ತಿದ್ದ ಕಳ್ಳನ ಬೆಂಡೆತ್ತಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು

Published

on

ಬಂಟ್ವಾಳ: ರಾತ್ರಿ ವೇಳೆ ಮನೆಗೆ ನುಗ್ಗಿ ಕಳವು ಮಾಡಿ ಪರಾರಿಯಾಗುತ್ತಿದ್ದ ಓರ್ವ ಕಳ್ಳನನ್ನು ಸಾರ್ವಜನಿಕರು ‌ಹಿಡಿದು ಥಳಿಸಿ,ಪೊಲೀಸರ ಒಪ್ಪಿಸಿದ ಘಟನೆ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದೆ.

  ಸೆರೆ ಸಿಕ್ಕ ಪ್ರವೀಣ್

ಕೇರಳದ ಕೊಲ್ಲಂ ಜಿಲ್ಲೆಯ ಕರಕ್ಕಲ್ ನಿವಾಸಿ ಪ್ರವೀಣ್ ಎಂಬಾತ ಸಾರ್ವಜನಿಕರಿಂದ ಥಳಿಸಲ್ಪಟ್ಟು ಪೊಲೀಸರ ಅತಿಥಿಯಾಗಿದ್ದಾನೆ. ಇದೇ ವೇಳೆ ಈತನ ಜೊತೆಗಿದ್ದ ಮತ್ತೋರ್ವ ಪರಾರಿಯಾಗಿದ್ದಾನೆ.ಜೊತೆಗೆ ಕಳ್ಳತನಕ್ಕೆ ಬಳಸುವ ಬೈಕ್ ವಶಪಡಿಸಿಕೊಳ್ಳಲಾಗಿದೆ

ಶನಿವಾರ ರಾತ್ರಿ ಸಾಲೆತ್ತೂರು ಸಮೀಪದ ಮಂಚಿ ಮಸೀದಿ ಬಳಿಯ ಕಮಾರುದ್ದೀನ್ ಹಾಗೂ ಜಲಾಲುದ್ದೀನ್ ಎಂಬ ಸಹೋದರರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಕಪಾಟುಗಳನ್ನು ಒಡೆದು ಜಾಲಡಿದ್ದಾರೆ.

ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಕೈಗೆ ಸಿಗದೆ ವಾಪಾಸಾಗಿದ್ದಾರೆ.ಅಲ್ಲೇ ಸಮೀಪದ ಹಮೀದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನ ಒಳಗೆ ಇದ್ದ ಸುಮಾರು 3 ಸಾವಿರ ರೂ.ನಗದು ಕಳವು ಮಾಡಿದ್ದಾರೆ ಹೊರಬರುತ್ತಿದ್ದರು. ಈ ವೇಳೆ ಹಮೀದ್‌ ಮನೆಯ ಇನ್‌ವರ್ಟ್‌ರ್‌ ಆಫ್‌ ಮಾಡಲು ಸ್ಥಳೀಯ ಸಂಬಂಧಿಕರೋರ್ವರು ಬಂದಾಗ ಹಮೀದ್‌ ಮನೆಯ ಕಡೆಯಿಂದ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದಾರೆ.

ಇದನ್ನು ಗಮನಿಸಿದ ಹಮೀದ್‌ ಸಂಬಂಧಿ ಕೂಡಲೇ ತಿಳಿಸಿದ್ದಾರೆ. ಆಗ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಬೈಕ್ ಬಿಟ್ಟು ಬೇರೆ ಬೇರೆ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ. ಪಟ್ಟು ಬಿಡದ ಸ್ಥಳೀಯರು ಕಳ್ಳರು ಓಡಿಹೋದ ದಿಕ್ಕಿನಲ್ಲಿ ಜಾಲಾಡಿದಾಗ ಓರ್ವ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಕೆರಳಿದ ಸಾರ್ವಜನಿಕರು ಸಿಕ್ಕ ಕಳ್ಳನಿಗೆ ಸರಿಯಾಗಿ ಥಳಿಸಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನು ಹಸ್ತಾಂತರಿಸಿದ್ದಾರೆ.

ಶನಿವಾರ ರಾತ್ರಿ ಈ ಮೂರು ಮನೆಯಲ್ಲಿ ಯಾರು ಇರಲಿಲ್ಲ. ಈ ಮೂರು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು. ಹಾಗಾಗಿ ಮನೆಯ ಲೈಟ್ ಆಫ್ ಆಗಿತ್ತು. ಲೈಟ್ ಉರಿಯದ ಮನೆಗಳನ್ನು ನೋಡಿಕೊಂಡು ಅಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಮನೆಗೆ ನುಗ್ಗುತ್ತಿದ್ದರು.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಶ್ವಾನದಳ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ‌ ಶೋಧ ಕಾರ್ಯು ಮುಂದುವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

LATEST NEWS

Trending