DAKSHINA KANNADA
ಶೌಚ ನೀರಿನಲ್ಲಿ ತೊಕ್ಕೊಟ್ಟು ರಿಕ್ಷಾ ಚಾಲಕರ ಬದುಕು- ಕಟ್ಟಡ ಮಾಲಕರ ವಿರುದ್ಧ ಆಕ್ರೋಶ..!
ಉಳ್ಳಾಲ: ಉಳ್ಳಾಲ ತಾಲೂಕಿನ ಆತ್ಯಂತ ಪ್ರಮುಖವಾದ ಹಾಗೂ ಅತಿ ಹೆಚ್ಚು ರಿಕ್ಷಾ ಚಾಲಕರಿರುವ ಜಂಕ್ಷನ್ ತೊಕ್ಕೊಟ್ಟುವಿನಲ್ಲಿ ರಿಕ್ಷಾ ಚಾಲಕರು ಕಳೆದ ಎರಡೂವರೆ ತಿಂಗಳಿನಿಂದ ಶೌಚಾಲಯದ ನೀರಿನ ಮೇಲೆಯೇ ನಿಂತು ದುಡಿಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಕಟ್ಟಡದ ಮಾಲಕರು ತ್ಯಾಜ್ಯ ನೀರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಶೌಚಾಲಯದ ನೀರು ತೆರೆದ ಚರಂಡಿಯಲ್ಲಿ ಹರಿದು ರಸ್ತೆಯ ಮೇಲೆ ಬಿದ್ದು ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ತೊಕ್ಕೊಟ್ಟು ರಿಕ್ಷಾ ಪಾರ್ಕಿನ ಚಾಲಕರು ಮತ್ತು ಮಾಲಕರ ಆರೋಪ.
ತೊಕ್ಕೋಟರ ಜಂಕ್ಷನ್ ನ ಈ ರಸ್ತೆಯ ತ್ಯಾಜ್ಯ ನೀರಿನಲ್ಲಿ ಕಾಲೂರಿ ಪ್ರತಿ ದಿನ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಲಕ್ಷದಷ್ಟು ಮಂದಿ ನಡೆದುಕೊಂಡು ಹೋಗುತ್ತಾರೆ.
ಸಂಬಂಧ ಪಟ್ಟ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ರಿಕ್ಷಾ ಚಾಲಕರು ಆಪಾದಿಸಿದ್ದಾರೆ.
ಸುಮಾರು 120 ಮಂದಿ ರಿಕ್ಷಾ ಚಾಲಕರು ಇಲ್ಲಿ ದುಡಿಯುತ್ತಿದ್ದು, ಅದೇ ಕೊಳಚೆ ನೀರಿನ ಮೇಲೆಯೇ ನಿಂತು ದಿನ ಕಳೆಯ ಬೇಕಾಗಿದೆ.
ಈ ಬಗ್ಗೆ ಕಟ್ಟಡ ಮಾಲೀಕರು ಹಾಗೂ ಉಳ್ಳಾಲ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಒಂದೂವರೆ ತಿಂಗಳಿನಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಆದರೆ ರಿಕ್ಷಾ ಚಾಲಕರ ಆರೋಪವನ್ನು ಕಟ್ಟಡದ ಅಲ್ಲಗಳೆಯುವ ಕಟ್ಟಡ ಮಾಲಕರು ‘ ಚೆಂಬುಗುಡ್ಡೆಯಿಂದ ತೊಕ್ಕೊಟ್ಟು ಸಂಪರ್ಕಿಸುವ ರಾಜಕಾಲುವೆಯಲ್ಲಿ ಶಾಶ್ವತ ಕುಡಿಯುವ ನೀರಿನ ಪೈಪನ್ನು ಅಳವಡಿಸಿದ್ದು, ಇದರಿಂದಾಗಿ ಕಾಮಗಾರಿ ವೇಳೆ ಜೇಡಿಮಣ್ಣು ಚರಂಡಿಯಿಂದ ಬಂದು ರಾಜಕಾಲುವೆ ಮುಚ್ಚಿಹೋಗಿ ಮೇಲಿನಿಂದ ನೀರು ಹರಿಯಲು ಆರಂಭವಾಗಿದೆ.
35 ವರ್ಷಗಳಿಂದ ಆಗದ ಸಮಸ್ಯೆ ಈಗ ಆಗಲು ಮೂಲ ಕಾರಣ ತಿಳಿದು ರಿಕ್ಷಾ ಚಾಲಕರು ಮಾತನಾಡಲಿ’ ಎಂದಿದ್ದಾರೆ.
ಆರೋಪ ಪ್ರತ್ಯಾರೋಪಗಳೇನೇ ಇದ್ದರೂ ಸಂಬಂಧ ಪಟ್ಟ ಉಳ್ಳಾಲ ನಗರ ಸಭೆಯ ಅಧಿಕಾರಿಗಳು ಕೂಡಲೇ ಎಚ್ಚತ್ತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
DAKSHINA KANNADA
ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಸಾಧನೆ ಮೆರೆದ ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು
ಮಂಗಳೂರು : ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು.
20 ರಾಜ್ಯಗಳಲ್ಲಿರುವ 120 ಶಾಖೆಯಲ್ಲಿ ಏಕಕಾಲಕ್ಕೆ 10,000 ವಿದ್ಯಾರ್ಥಿಗಳು ನೂರು ದಿನ ವಿಶೇಷ ತರಬೇತಿ ಪಡೆದು, 600 ಸೂತ್ರಗಳನ್ನು ಹೇಳುವುದರ ಮುಖಾಂತರ ಮೂರನೇ ಬಾರಿಗೆ ಇಲ್ಲಿನ ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ಸೃಷ್ಠಿಸಿದ್ದಾರೆ.
ಇದನ್ನೂ ಓದಿ : ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆ
ಅದರಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ 118 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ. ಸಾಧನೆಗೆ ಪಾಲಕರ ಪ್ರೋತ್ಸಾಹ, ಶಿಕ್ಷಕರ ನಿರಂತರ ತರಬೇತಿ ಮುಖ್ಯವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಕೆ. ಸುನಿಲ್ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪ್ರತಿಭೆ ಪ್ರಜ್ವಲಿಸುವಂತಾಗಲಿ ಎಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾರೈಸಿದೆ.
DAKSHINA KANNADA
ಮಂಗಳೂರು : ಜಾನುವಾರು ಕಳ್ಳತನ ; ಆರೋಪಿಗಳು ಬಂಧನ
ಮಂಗಳೂರು : ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೊಳಂಬೆ ಕೊಂಚಾರು ಬದ್ರಿಯಾನಗರದ ಪೈಜಲ್ ಕೊಂಚಾರ್ (40) ಮತ್ತು ಕೋಡಿಯ ಸುಹೈಬ್ ಅಕ್ತರ್ (24) ಎಂಬವರನ್ನು ಕಾವೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಆರೋಪಿಗಳಿಂದ ಕಾರು ಹಾಗೂ ಸ್ಕೂಟರ್‌ನ್ನು ವಶಪಡಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳ ಪೈಕಿ ಪೈಜಲ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ.
ಪೈಜಲ್ ವಿರುದ್ಧ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಗಳನ್ನು ಬಂಧಿಸಲಾಗಿದೆ.
BANTWAL
ಬಂಟ್ವಾಳ: ಟೆಂಪೋ ಡಿ*ಕ್ಕಿ ಹೊಡೆದು ಮೂರು ವರ್ಷದ ಮಗು ಸಾ*ವು
ಬಂಟ್ವಾಳ: ನಿಲ್ಲಿಸಿದ್ದ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಆ ವೇಳೆ ಆಟವಾಡುತ್ತಿದ್ದ ಮುರು ವರ್ಷದ ಮಗು ಚಕ್ರದ*ಡಿಗೆ ಸಿಲುಕಿ ಮೃ*ತಪಟ್ಟ ಘಟನೆ ಬುಧವಾರ (ನ.6) ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ನಡೆದಿದೆ.
ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಆಶೀಕಾ (3) ಮೃ*ತ ಮಗು.
ಮಗು ತನ್ನ ಅಜ್ಜಿ ಮನೆಯಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿದ್ದ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಒಮ್ಮೆಯೇ ಹಿಂದೆ ಬಂದ ಕಾರಣ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಗಂಭೀರ ಗಾ*ಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- DAKSHINA KANNADA6 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA4 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್