ಸುಳ್ಯ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮಡಿಕೇರಿ- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಗೆ ಮಣ್ಣು ಕುಸಿದಿದೆ.
ಸದ್ಯ ಸಣ್ಣ ಪ್ರಮಾಣದ ಮಣ್ಣು ಕುಸಿದದ್ದರಿಂದ ಒಂದು ಕಡೆಯ ರಸ್ತೆ ಮುಚ್ಚಿದ್ದು, ಒಂದು ಬದಿ ಮಾತ್ರ ವಾಹನಗಳು ಸಂಚರಿಸುತ್ತಿವೆ. ರಸ್ತೆಗೆ ಮಣ್ಣು ಬಿದ್ದಿದ್ದರಿಂದ ನೀರಿನ ಹಳ್ಳ ಮುಚ್ಚಿಹೋಗಿದ್ದು,
ರಸ್ತೆಯಲ್ಲೇ ಕೆಸರು ಮಿಶ್ರಿತ ನೀರು ಹರಿದು ಹೋಗುತ್ತಿದೆ. ಮಳೆ ಕಡಿಮೆಯಾಗದಿದ್ದರೆ ಮತ್ತಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ನಿನ್ನೆ ಜೋಡುಪಾಲದ ಬಳಿ ಬೃಹತ್ ಮರ ಸಹಿತ ಮಣ್ಣು ಹೆದ್ದಾರಿಗೆ ಬಿದ್ದಿತ್ತು. ಅದನ್ನು ತೆರವುಗೊಳಿಸಲಾಗಿದೆ.