ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.
ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ.
ಇವರು ಜೂನ್ 30 ರಂದು ಮನೆಯಿಂದ ತೋಟದ ಕೆಲಸಕ್ಕೆಂದು ಹೋದವರು ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾಗಿದ್ದರು.
ಬಳಿಕ ಇವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದರು.
ಆದರೆ ಇಂದು ಬೆಳಗ್ಗಿನ ವೇಳೆ ಲಿಂಗಪ್ಪ ಪೂಜಾರಿಯವರು ಪುದುವೆಟ್ಟು ಸಮೀಪದಲ್ಲಿರುವ ಮಡ್ಯ ಎಂಬಲ್ಲಿ ನದಿಯ ದಡದಲ್ಲಿ ಶವ ಪತ್ತೆಯಾಗಿರುವ ಕುರಿತು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.