ಕೇರಳ: 79 ವಯಸ್ಸಿನ ವೃದ್ಧನೊಬ್ಬ ತನ್ನ ಇಡೀ ಕುಟುಂಬವನ್ನು ಬೆಂಕಿ ಹಾಕಿ ಸುಟ್ಟ ಘಟನೆ ದೇವರ ನಾಡು ಕೇರಳದ ತೊಡುಪುಳದ ಚೀನಿಕುಜಿಯಲ್ಲಿ ಈ ಘಟನೆ ನಡೆದಿದೆ.
ಮೊಹಮ್ಮದ್ ಫೈಝಲ್ (49), ಅವರ ಪತ್ನಿ ಶೀಬಾ (39), ಪುತ್ರಿಯರಾದ ಮೆಹರು (16) ಮತ್ತು ಅಸ್ನಾ (13) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ವೃದ್ಧನೊಬ್ಬ ತನ್ನ ಮನೆಗೆ ಹೊರಗಿನಿಂದ ಬೀಗ ಹಾಕಿ, ಮಗ ಹಾಗೂ ಆತನ ಇಡೀ ಕುಟುಂಬವನ್ನು ಸುಟ್ಟು ಹಾಕಿದ್ದಾನೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೊಡುಪುಳ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೃಧ್ಧ ಮಗನ ವಿರುದ್ಧ ಕೋಪಗೊಂಡು ಆತನ ಇಡೀ ಕುಟುಂಬವನ್ನು ಸುಟ್ಟು ಹಾಕುವ ಉಪಾಯವನ್ನು ಹೂಡಿದ ಆತ ಮನೆಯಿಂದ ಯಾರೂ ಹೊರಗೆ ಬರಬಾರದು ಎಂಬ ಕಾರಣಕ್ಕೆ ಮನೆಯ ಹೊರಗೆ ಬಾಗಿಲಿಗೆ ಬೀಗ ಹಾಕಿದ್ದ. ಮನೆಯೊಳಗೆ ನಲ್ಲಿಯಲ್ಲಿ ನೀರು ಬಾರದಂತೆ ಪೈಪ್ ಸಂಪರ್ಕವನ್ನು ಕೂಡ ಕಟ್ ಮಾಡಿದ.
ನಂತರ ವೃದ್ಧ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿ ನಂದಿಸಲು ಮೊಹಮ್ಮದ್ ಫೈಝಲ್ ಮತ್ತು ಆತನ ಮನೆಯವರು ಬಾತ್ರೂಂನಿಂದ ನೀರು ತರಲು ನೋಡಿದರೂ ನಲ್ಲಿಗಳಲ್ಲಿ ನೀರು ಬರುತ್ತಿರಲಿಲ್ಲ.
ಹೀಗಾಗಿ, ಅವರೆಲ್ಲರೂ ಬಚ್ಚಲುಮನೆಯಲ್ಲೇ ಉಸಿರುಗಟ್ಟಿ, ಅರೆಬರೆ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಕರಿಮನ್ನೂರು ಪೊಲೀಸ್ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿಯನ್ನು ನಂದಿಸಿದರು.
ಬಳಿಕ ನಾಲ್ವರ ಹೆಣಗಳನ್ನು ಹೊರಗೆ ತರಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಿಕ್ಕುಜಿಯ ಅಲಿಯಕ್ಕುನ್ನೆಲ್‌ನ ಹಮೀದ್ ಎಂಬ 79 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.